ದಕ್ಷಿಣ ಕನ್ನಡ : ಗಮಕ ಕಲಾ ಪರಿಷತ್ತು, ಗಮಕ ಭವನ, ಗಮಕ ಗ್ರಾಮ,ಹೊಸಹಳ್ಳಿ ಶಿವಮೊಗ್ಗ ತಾಲೂಕ್ ಇದರ ವಾರ್ಷಿಕ ಗಮಕ ಸಪ್ತಾಹ ಕಾರ್ಯಕ್ರಮ ದಿನಾಂಕ 8 ಜನವರಿ 2024 ರಿಂದ 14 ಜನವರಿ 2024 ವರೆಗೆ ಪದ್ಮಶ್ರೀ ಎಚ್ ಆರ್ ಕೇಶವಮೂರ್ತಿ ವೇದಿಕೆ,ಗಮಕ ಭವನ, ಹೊಸಹಳ್ಳಿ, ಶಿವಮೊಗ್ಗ ತಾಲೂಕು ಇಲ್ಲಿ ಆಯೋಜಿಸಲಾಗಿದೆ ಎಂದು ಗಮಕ ಕಲಾ ಪರಿಷತ್ತು ಅಧ್ಯಕ್ಷ ಎಚ್ ಎಸ್ ಸತ್ಯನಾರಾಯಣ ಆಮಂತ್ರಣ ಪತ್ರದಲ್ಲಿ ತಿಳಿಸಿದ್ದಾರೆ.
ದಿನಾಂಕ 8ರಂದು ಸಂಜೆ 6 ಗಂಟೆಗೆ ಗಮಕ ಸಪ್ತಾಹ ಕಾರ್ಯಕ್ರಮವನ್ನು ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಶಿವಮೊಗ್ಗ ಇಲ್ಲಿನ ಪ್ರಾಂಶುಪಾಲರಾದ ಚಿದಾನಂದ ಎನ್ ಕೆ ಇವರು ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಮಕಲಾ ಪರಿಷತ್ತು ಹೊಸಹಳ್ಳಿ ಇದರ ಅಧ್ಯಕ್ಷರಾದ ಎಚ್ ಎಸ ಸತ್ಯನಾರಾಯಣ ವಹಿಸಿಕೊಳ್ಳಲಿದ್ದು ಸಪ್ತಾಹದ ಪ್ರತಿದಿನ ಸಂಜೆ 6:45 ರಿಂದ 8:45 ಗಂಟೆವರೆಗೆ ಗಮಕವಾಚನ ವ್ಯಾಖ್ಯಾನ ನಡೆಯಲಿದ್ದು, ದಿನಾಂಕ 10 ರಂದು ಬೆಳಗ್ಗೆ 10 ಗಂಟೆಗೆ ಗುರುನಮನ ಕಾರ್ಯಕ್ರಮವು ಜರುಗಲಿದೆ.
ಗಮಕ ಸಪ್ತಾಹದ ಕಾರ್ಯಕ್ರಮದಲ್ಲಿ ದಿನಾಂಕ 14 ಜನವರಿ 2024 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮವಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇದರ ಸಹಾಯಕ ನಿರ್ದೇಶಕರಾದ ಹೆಚ್ ಉಮೇಶ್ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ, ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಕರ್ನಾಟಕ ಗಮಕ ಕಲಾ ಪರಿಷತ್ತು ಅಧ್ಯಕ್ಷರಾದ ಎ ವಿ ಪ್ರಸನ್ನ ವಹಿಸಿಕೊಳ್ಳಲಿದ್ದು, ಸಮಾರೋಪ ನುಡಿಗಳನ್ನು ಕರ್ನಾಟಕ ಸಂಘ ಶಿವಮೊಗ್ಗ ಇದರ ಅಧ್ಯಕ್ಷರಾದ ಎಂ ಎನ್ ಸುಂದರ್ ರಾಜ್ ಮಾಡಲಿದ್ದಾರೆ, ಸಂಜೆ 7:30 ಗಂಟೆಗೆ
ಪಂಚ ಮಹಾ ಕಾವ್ಯಗಳ ಕರ್ತೃ, ಪ್ರಸ್ತುತ ಮಂಗಳೂರು ನಿವಾಸಿ ಡಾಕ್ಟರ್ ಬಂದಗದ್ದೆ ನಾಗರಾಜ ಇವರ ಸನ್ಮಾನ ಕಾರ್ಯಕ್ರಮವಿದ್ದು, ಗಮಕ ಆಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಕೋರಲಾಗಿದೆ.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…