ಸುಬ್ರಹ್ಮಣ್ಯ ಜ.7: ಸುಬ್ರಹ್ಮಣ್ಯದ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ರವಿವಾರದಂದು ಕುಮಾರಧಾರ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಗೊಳಿಸಲಾಯಿತು.
ಶ್ರೀ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು ದೇವರ ದರ್ಶನ ಪಡೆಯುವುದರೊಂದಿಗೆ ಪುನೀತರಾಗುತ್ತಿದ್ದಾರೆ ಭಕ್ತಾದಿಗಳು ದೂರದ ಊರಿನಿಂದ ಬೇರೆ ಬೇರೆ ಕ್ಷೇತ್ರಗಳಿಂದ ವಾಹನಗಳಲ್ಲಿ ಆಗಮಿಸುವಂತಹ ಸಂದರ್ಭಗಳಲ್ಲಿ ಮಾರ್ಗದ ಇಕ್ಕಲೆಗಳಲ್ಲಿ ಬಹಳಷ್ಟು ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟಲಿಗಳು, ನೀರಿನ ಕ್ಯಾನ್ ಗಳು, ಆಹಾರ ಪಟ್ಟಣಗಳನ್ನು ಎಸೆದು ಇಡೀ ಪರಿಸರವನ್ನು ಮಾಲಿನ್ಯ ಮಾಡತಕ್ಕದ್ದು ಕಂಡುಬರುತ್ತಿದೆ.
ಇದನ್ನು ಮನಗಂಡ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿ ಕಕ್ಕೆ ಪದವು ಹಾಗೂ ಸಮಾಜ ಸೇವಾ ಟ್ರಸ್ಟ್ ನವರು ತನ್ನ ಸ್ವಯಂಸೇವಕರೊಂದಿಗೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ. ಕುಮಾರಧಾರ ಪರಿಸರಗಳಲ್ಲಿ ಇರತಕ್ಕಂತಹ ಬಾಟಲಿಗಳು, ಕಚ್ಚಾ ವಸ್ತುಗಳನ್ನು ಸ್ವಚ್ಛತೆ ಮಾಡುವುದರೊಂದಿಗೆ ಸೇವಾ ಕಾರ್ಯವನ್ನು ಕೈಗೊಂಡಿರುವರು. ಈ ಸಂದರ್ಭದಲ್ಲಿ ಸ್ವಚ್ಛತೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಜನಾರ್ಧನ್ ಗೌಡ ರವರನ್ನು ಸನ್ಮಾನಿಸಲಾಯಿತು.
ತುಳುನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಈ ನಾಡಿನ…
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿ ವಾಹಕ…
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಾಸರಗೋಡು ವರ್ಕಾಡಿ ಮೂಲದ ರೂಪಶ್ರೀ ವರ್ಕಾಡಿ…
ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ…
ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 25 ರೂಪಾಯಿ ಏರಿಕೆಯಾದರೂ,…
ತುಮಕೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಹೈಡ್ರೋ ಗಾಂಜಾ…