ಕರಾವಳಿ

ವಿಜ್ಞಾನದ ವಿಷಯಗಳನ್ನು ನಿಜ ಜೀವನದಲ್ಲಿ ಸಹಸಂಬಂಧಿಸಿ ಗ್ರಹಿಸುವುದು ಮುಖ್ಯ: ಡಾ. ಫರ್ಹಾನ್ ಜಮೀರ್

ಮೂಡುಬಿದಿರೆ: ವಿಜ್ಞಾನವನ್ನು ಕೇವಲ ಪುಸ್ತಕದ ಮೂಲಕ ಅರಿತರೆ ಸಾಲದು ನಮ್ಮ ಸುತ್ತಮುತ್ತಲಿನ ಪರಿಸರದಿಂದಲೂ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು ಎಂದು ಆತ್ಮಾ ಸಂಶೋಧನ ಕೇಂದ್ರದ ಮುಖ್ಯ ವೈಜ್ಞಾನಿಕ ಅಧಿಕಾರಿ ಹಾಗೂ ಆಳ್ವಾಸ್ ದ್ರವ್ಯಗುಣ ವಿಭಾಗದ ಪ್ರಾಧ್ಯಪಕ ಡಾ. ಫರ್ಹಾನ್ ಜಮೀರ್ ಹೇಳಿದರು.


ಆಳ್ವಾಸ್ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್‌ವತಿಯಿಂದ ಡಾ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ‘’ಶೈಕ್ಷಣಿಕ ಪರಿಧಿಯಾಚೆಗಿನ ಬದುಕಿನ ಅನ್ವೇಷಣೆ’’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು . ಶಿಕ್ಷಣದ ಮೂಲ ಉದ್ದೇಶ ಅಂಕಗಳಿಸುದಷ್ಟೆ ಅಲ್ಲ. ತನ್ನಲ್ಲಿ ಹುದುಗಿರುವ ಕೌಶಲಗಳ ವೃದ್ಧಿ ಮುಖ್ಯವಾಗಿರುತ್ತದೆ. ಯಾವುದೇ ವಿಷಯವನ್ನು ಗ್ರಹಿಸಿ ಅರ್ಥಮಾಡಿಕೊಳ್ಳಬೇಕೆ ವಿನಃ ಕಂಠಪಾಠ ಮಾಡುವುದು ಒಳಿತಲ್ಲ. ವಿಜ್ಞಾನದ ವಿಷಯಗಳನ್ನು ನಿಜ ಜೀವನದಲ್ಲಿ ಸಹಸಂಬಂಧಿಸಿ ಗ್ರಹಿಸುವುದು ಮುಖ್ಯ.
ಹೆಣ್ಣು ಮಕ್ಕಳು ವಿಷಯವನ್ನು ಇದ್ದ ಹಾಗೆ ಬರೆದರೆ ಗಂಡು ಮಕ್ಕಳು ಅದೇ ವಿಷಯನ್ನು ವಿಭಿನ್ನ ರೀತಿಯಲ್ಲಿ ಬರೆಯುತ್ತಾರೆ. ಇದಕ್ಕೆ ಕಾರಣ ಹುಡುಗರ ಮೆದುಳು ತಾರ್ಕಿಕ ಸ್ಮರಣೆಗೆ ಹೆಚ್ಚಿನ ಒತ್ತು ನೀಡಿದರೆ (ಲಾಜಿಕಲ್ ಮೆಮೊರಿ) ಹಾಗೂ ಹುಡುಗಿಯರ ಮೆದುಳು ಛಾಯಾಸ್ಮರಣೆಗೆ (ಫೋಟೊಗ್ರಾಫಿಕ್ ಮೆಮೊರಿ) ಪ್ರಾಶಸ್ತö್ಯವನ್ನು ನೀಡುತ್ತದೆ.


ಅಧ್ಯಯನದ ಪ್ರಕಾರ ಗಂಡಿನ ಮೆದುಳಿನ ತೂಕ ಸರಾಸರಿ 1350 ಗ್ರಾಂ ಹಾಗೂ ಹೆಣ್ಣಿನ ಮೆದುಳಿನ ತೂಕ 1260ಗ್ರಾಂ ಇರುತ್ತದೆ. ಆದರೆ ಹೆಚ್ಚು ತೂಕ ಹೊಂದಿದ ಮಾತ್ರಕ್ಕೆ ಹೆಚ್ಚು ಜ್ಞಾನವಂತಾರಾಗಿರುತ್ತರೆಂದಲ್ಲ, ಕಡಿಮೆ ಮೆದುಳಿನ ಗಾತ್ರವನ್ನು ಹೊಂದಿರುವವರು ಕಡಿಮೆ ಸಾಮರ್ಥ್ಯ ಹೊಂದಿರಲು ಸಾಧ್ಯವಿಲ್ಲ. ಗಂಡಿನ ಮೆದುಳು ಏಕ ಕಾಲದಲ್ಲಿ ಒಂದೆ ಕೆಲಸವನ್ನು ಮಾಡಿದರೆ ಅದೇ ಹೆಣ್ಣಿನ ಮೆದುಳು ಬಹು ಕೆಲಸವನ್ನು ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಅನುಕೂಲ ಹಾಗೂ ಅನನುಕೂಲಗಳು ಬಹಳಷ್ಟಿದೆ. ಗಂಡು ಏಕಕಾಲದಲ್ಲಿ ಒಂದೇ ಕೆಲಸ ಮಾಡುವುದರಿಂದ ಕೆಲಸದಲ್ಲಿ ಹೆಚ್ಚಿನ ಸಾಫಲ್ಯತೆ ಪಡೆದರೆ, ಹೆಣ್ಣು ಅಷ್ಟು ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಗಂಡು ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಒತ್ತಡಕ್ಕೊಳಗಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲದು. ಆದರೆ ಹೆಣ್ಣು ಈ ಪ್ರಕ್ರಿಯೆಯಲ್ಲಿ ಅನಾರೋಗ್ಯದಿಂದ ಬಳಲುವ ಸಂದರ್ಭಗಳು ಕಡಿಮೆ ಎಂದರು. ಋಣಾತ್ಮಕ ಮನಸ್ಥಿತಿಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಧನಾತ್ಮಕ ಚಿಂತನೆಯಿಂದ ಮಾತ್ರ ಉನ್ನತಿ ಸಾಧ್ಯ. ವಿದ್ಯಾರ್ಥಿಗಳು ಸದಾ ಧನಾತ್ಮಕ ಚಿಂತೆನೆಯಿಂದ ಪ್ರೇರೆಪಿತರಾಗಿರಬೇಕು ಎಂದರು.


ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಉಪಪ್ರಾಂಶುಪಾಲೆ ಜಾನ್ಸಿ ಪಿಎನ್ ಜೀವಶಾಸ್ತç ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಇದ್ದರು. ಕಾಲೇಜಿನ ಇಕೋ ಕ್ಲಬ್‌ನ ಸಂಯೋಜಕಿ ಶುಭಾ ಬಂಗೇರ ಸ್ವಾಗತಿಸಿ, ಉಪನ್ಯಾಸಕಿ ರಮ್ಯಾ ರೈ ಅತಿಥಿಯನ್ನು ಪರಿಚಯಿಸಿ, ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ದೀಪಾ ಶೆಟ್ಟಿ ನಿರೂಪಿಸಿ, ಜೀವಶಾಸ್ತ್ರ ವಿಭಾಗದ ಮಾಘೇಶ್ವರಿ ವಂದಿಸಿದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…

3 hours ago

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…

3 hours ago

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಲು ಸುಪಾರಿ ನೀಡಿದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಸೇರಿ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ…

3 hours ago

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಬಿಳಿ ಬಣ್ಣದ ಸ್ವೀಫ್ಟ್ ಡಿಸೈರ್ ಕಾರಿನಲ್ಲಿ ಹಿಂಸಾತ್ಮಕವಾಗಿ ಎಳೆದುಕೊಂಡು ಹೋದ…

3 hours ago

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಹಾಗೂ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ ಇದರ…

3 hours ago

ಮಂಗಳೂರು: ರಾಜಾಜಿ ಉದ್ಯಾನವನದಲ್ಲಿ ಗಾಂಧಿ ಜಯಂತಿ ಆಚರಣೆ

ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದ ರಾಜಾಜಿ…

3 hours ago