ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಮೂರು ದಶಕಗಳಿಂದ ಸಾರ್ಥಕ ಸೇವೆ – ನಿವೃತ್ತಿ ವೇಳೆ ವಿದ್ಯಾರ್ಥಿಗಳಿಂದ ದೊರೆತ ಉಡುಗೊರೆ ಕಂಡು ಅವಕ್ಕಾದ ಶಿಕ್ಷಕಿ

ಬಂಟ್ವಾಳ: ಮೂರು ದಶಕಗಳಿಂದ ಶಿಕ್ಷಕಿಯಾಗಿ ಸಾರ್ಥಕ ಸೇವೆ ಸಲ್ಲಿಕೆ. ಕಡೆಗೂ ಆ ಶಿಕ್ಷಕಿಗೆ ಸೇವೆಯಿಂದ ನಿವೃತ್ತಿಯಾಗುವ ದಿನ ಬಂದೇ ಬಿಟ್ಟಿತು. ಅದಕ್ಕಾಗಿ ವಿದಾಯ ಕೂಟವೂ ಏರ್ಪಟ್ಟಿತ್ತು. ಈ ವೇಳೆ ಹಳೆ ವಿದ್ಯಾರ್ಥಿಗಳಿಂದ ದೊರಕಿದ ಉಡುಗೊರೆಯನ್ನು ಕಂಡು ಶಿಕ್ಷಕಿಯೇ ಬೆರಗಾದ ಅಪೂರ್ವ ಘಟನೆಯೊಂದು ಬಂಟ್ವಾಳದ ಪಾಣೆಮಂಗಳೂರಿನ ಅಕ್ಕರಂಗಡಿಯ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಹೌದು… ಜಯಲಕ್ಷ್ಮೀ ಆರ್. ಭಟ್, ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 28 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2020ರಲ್ಲಿ ಅವರು ನಿವೃತ್ತಿಗೊಂಡಿದ್ದರೂ ಶಿಕ್ಷಕರ ಕೊರತೆಯಿಂದ ಅದೇ ಶಾಲೆಯಲ್ಲಿ ವೇತನ ಪಡೆಯದೆ ತಮ್ಮ ಸೇವೆಯನ್ನು ಮುಂದುವರಿಸಿದ್ದರು. ಈ ಮೂಲಕ ಒಟ್ಟು 31 ವರ್ಷಗಳ ಕಾಲ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದ ಜಯಲಕ್ಷ್ಮೀ ಆರ್. ಭಟ್ ಈ ಅವಧಿಯಲ್ಲಿ ಸುಮಾರು 2000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ಮಾರ್ಗದರ್ಶನ ಮಾಡಿದ್ದರು.

ಬೈಟ್: ಜಯಲಕ್ಷ್ಮೀ ಆರ್. ಭಟ್ – ಶಿಕ್ಷಕಿ

ಇದೀಗ ಅವರು ನಿವೃತ್ತಿ ಪಡೆಯುವ ಸಮಯ ಬಂದೇ ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕಿಗೆ ವಿದಾಯಕೂಟವೊಂದನ್ನು ಏರ್ಪಡಿಸಿದ್ದರು. ಜೊತೆಗೆ ಅವರಿಗೊಂದು ಮರೆಯಲಾಗದ ಉಡುಗೊರೆ ನೀಡಬೇಕೆಂದು ಉದ್ದೇಶಿಸಿದ್ದರು. ಆದ್ದರಿಂದ ಹಳೆ ವಿದ್ಯಾರ್ಥಿಗಳು ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಚರ್ಚಿಸಿ ಚಿನ್ನದ ಸರ ನೀಡಲು ನಿರ್ಧರಿಸಿದ್ದರು. ಅದಕ್ಕಾಗಿ ತಮ್ಮೊಳಗೆ ಹಣ ಸಂಗ್ರಹಿಸಿ ಸುಮಾರು 2.10 ಲಕ್ಷ ರೂ. ಮೌಲ್ಯದ 33 ಗ್ರಾಂನ ಬೆಂಡೋಲೆ ಸಹಿತ ಚಿನ್ನದ ನೆಕ್ಲೇಸ್ ಅನ್ನು ಖರೀದಿಸಿ ವಿದಾಯ ಕೂಟದಲ್ಲಿ ಶಿಕ್ಷಕಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಬೈಟ್: ಕಬೀರ್ – ಹಳೆ ವಿದ್ಯಾರ್ಥಿ

ಈ ಉಡುಗೊರೆ ನೀಡುವ ವಿಚಾರವನ್ನು ಶಿಕ್ಷಕಿಗೆ ತಿಳಿಯದಂತೆ ಅತ್ಯಂತ ಗೌಪ್ಯವಾಗಿರಿಸಲಾಗಿದೆ. ಬುಧವಾರ ನಡೆದ ಶಾಲಾ ವಾರ್ಷಿಕೋತ್ಸವದಂದು ಶಿಕ್ಷಕಿಗೆ ಸನ್ಮಾನಿಸಿ ಈ ಉಡುಗೊರೆಯನ್ನು ನೀಡಿದ್ದಾರೆ. ಈ ವೇಳೆ ಆಶ್ಚರ್ಯಕರವೆಂಬಂತೆ ವಿದ್ಯಾರ್ಥಿಗಳಿಂದ ಚಿನ್ನದೊಡವೆ ಉಡುಗೊರೆಯಾಗಿ ದೊರಕಿದ್ದನ್ನು ಕಂಡು ಶಿಕ್ಷಕಿ ಅವಕ್ಕಾಗಿದ್ದಾರೆ. ಒಟ್ಟಿನಲ್ಲಿ ಇಂತಹ ಅಪೂರ್ವ ಕಾರ್ಯಕ್ರಮಕ್ಕೆ ದಾರುಲ್ ಇಸ್ಲಾಂ ಶಾಲೆ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!