ಬಂಟ್ವಾಳ: ಮೂರು ದಶಕಗಳಿಂದ ಶಿಕ್ಷಕಿಯಾಗಿ ಸಾರ್ಥಕ ಸೇವೆ ಸಲ್ಲಿಕೆ. ಕಡೆಗೂ ಆ ಶಿಕ್ಷಕಿಗೆ ಸೇವೆಯಿಂದ ನಿವೃತ್ತಿಯಾಗುವ ದಿನ ಬಂದೇ ಬಿಟ್ಟಿತು. ಅದಕ್ಕಾಗಿ ವಿದಾಯ ಕೂಟವೂ ಏರ್ಪಟ್ಟಿತ್ತು. ಈ ವೇಳೆ ಹಳೆ ವಿದ್ಯಾರ್ಥಿಗಳಿಂದ ದೊರಕಿದ ಉಡುಗೊರೆಯನ್ನು ಕಂಡು ಶಿಕ್ಷಕಿಯೇ ಬೆರಗಾದ ಅಪೂರ್ವ ಘಟನೆಯೊಂದು ಬಂಟ್ವಾಳದ ಪಾಣೆಮಂಗಳೂರಿನ ಅಕ್ಕರಂಗಡಿಯ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಹೌದು… ಜಯಲಕ್ಷ್ಮೀ ಆರ್. ಭಟ್, ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 28 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2020ರಲ್ಲಿ ಅವರು ನಿವೃತ್ತಿಗೊಂಡಿದ್ದರೂ ಶಿಕ್ಷಕರ ಕೊರತೆಯಿಂದ ಅದೇ ಶಾಲೆಯಲ್ಲಿ ವೇತನ ಪಡೆಯದೆ ತಮ್ಮ ಸೇವೆಯನ್ನು ಮುಂದುವರಿಸಿದ್ದರು. ಈ ಮೂಲಕ ಒಟ್ಟು 31 ವರ್ಷಗಳ ಕಾಲ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದ ಜಯಲಕ್ಷ್ಮೀ ಆರ್. ಭಟ್ ಈ ಅವಧಿಯಲ್ಲಿ ಸುಮಾರು 2000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ಮಾರ್ಗದರ್ಶನ ಮಾಡಿದ್ದರು.
ಬೈಟ್: ಜಯಲಕ್ಷ್ಮೀ ಆರ್. ಭಟ್ – ಶಿಕ್ಷಕಿ
ಇದೀಗ ಅವರು ನಿವೃತ್ತಿ ಪಡೆಯುವ ಸಮಯ ಬಂದೇ ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕಿಗೆ ವಿದಾಯಕೂಟವೊಂದನ್ನು ಏರ್ಪಡಿಸಿದ್ದರು. ಜೊತೆಗೆ ಅವರಿಗೊಂದು ಮರೆಯಲಾಗದ ಉಡುಗೊರೆ ನೀಡಬೇಕೆಂದು ಉದ್ದೇಶಿಸಿದ್ದರು. ಆದ್ದರಿಂದ ಹಳೆ ವಿದ್ಯಾರ್ಥಿಗಳು ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಚರ್ಚಿಸಿ ಚಿನ್ನದ ಸರ ನೀಡಲು ನಿರ್ಧರಿಸಿದ್ದರು. ಅದಕ್ಕಾಗಿ ತಮ್ಮೊಳಗೆ ಹಣ ಸಂಗ್ರಹಿಸಿ ಸುಮಾರು 2.10 ಲಕ್ಷ ರೂ. ಮೌಲ್ಯದ 33 ಗ್ರಾಂನ ಬೆಂಡೋಲೆ ಸಹಿತ ಚಿನ್ನದ ನೆಕ್ಲೇಸ್ ಅನ್ನು ಖರೀದಿಸಿ ವಿದಾಯ ಕೂಟದಲ್ಲಿ ಶಿಕ್ಷಕಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಬೈಟ್: ಕಬೀರ್ – ಹಳೆ ವಿದ್ಯಾರ್ಥಿ
ಈ ಉಡುಗೊರೆ ನೀಡುವ ವಿಚಾರವನ್ನು ಶಿಕ್ಷಕಿಗೆ ತಿಳಿಯದಂತೆ ಅತ್ಯಂತ ಗೌಪ್ಯವಾಗಿರಿಸಲಾಗಿದೆ. ಬುಧವಾರ ನಡೆದ ಶಾಲಾ ವಾರ್ಷಿಕೋತ್ಸವದಂದು ಶಿಕ್ಷಕಿಗೆ ಸನ್ಮಾನಿಸಿ ಈ ಉಡುಗೊರೆಯನ್ನು ನೀಡಿದ್ದಾರೆ. ಈ ವೇಳೆ ಆಶ್ಚರ್ಯಕರವೆಂಬಂತೆ ವಿದ್ಯಾರ್ಥಿಗಳಿಂದ ಚಿನ್ನದೊಡವೆ ಉಡುಗೊರೆಯಾಗಿ ದೊರಕಿದ್ದನ್ನು ಕಂಡು ಶಿಕ್ಷಕಿ ಅವಕ್ಕಾಗಿದ್ದಾರೆ. ಒಟ್ಟಿನಲ್ಲಿ ಇಂತಹ ಅಪೂರ್ವ ಕಾರ್ಯಕ್ರಮಕ್ಕೆ ದಾರುಲ್ ಇಸ್ಲಾಂ ಶಾಲೆ ಸಾಕ್ಷಿಯಾಗಿದೆ.
ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ…
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…