ಗುಂಪಿನಿOದ ಬೇರ್ಪಟ್ಟ ಮರಿ ಆನೆ ಸುಳ್ಯ ತಾಲೂಕಿನ ಮಂಡೆಕೋಲು ಕನ್ಯಾನದ ರಸ್ತೆ ಬದಿಯಲ್ಲಿ ಅಲೆದಾಡುತಿದ್ದ ಘಟನೆ ನಡೆದಿದೆ.

ಸುಳ್ಯ ಭಾಗದಲ್ಲಿ ಆನೆಗಳ ಹಿಂಡು ಆಗಾಗ ಕಾಣಸಿಗುತ್ತಿದ್ದು, ಆನೆಗಳ ಹಿಂಡಿನಿOದ ತಪ್ಪಿಸಿಕೊಂಡ ಮರಿ ಆನೆ ರಸ್ತೆ ಬದಿಯಲ್ಲಿ ಅಲೆದಾಡುತಿತ್ತು. ಇನ್ನ್ನು ಸಾರ್ವಜನಿಕರ ಸಾಥ್ ಪಡೆದ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆ ಮರಿಯನ್ನು ರಕ್ಷಿಸಿದ್ದಾರೆ. ಆನೆ ಮರಿ ಆರೋಗ್ಯವಾಗಿದ್ದು ಸದ್ಯ ಅರಣ್ಯಾಧಿಕಾರಿಗಳ ಆರೈಕೆಯಲ್ಲಿದೆ.



