ಉಡುಪಿ: ಭಾರತ, ಹಿಂದೂ ಮಾತ್ರವಲ್ಲ, ಜಗತ್ತಿನ ಸರ್ವ ಜನಾಂಗಕ್ಕೆ ಭಗವದ್ಗೀತೆಯ ಸಂದೇಶ ತಲುಪಬೇಕು ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.

ರಾಜಾಂಗಣದಲ್ಲಿ ಪುತ್ತಿಗೆ ವಿಶ್ವಗೀತಾ ಪರ್ಯಾಯ ಅಂಗವಾಗಿ ರಾಜಾಂಗಣದಲ್ಲಿ ನಡೆದ ದರ್ಬಾರ್‌ನಲ್ಲಿ ಆಶೀರ್ವಚನ ನೀಡಿದರು. ಸಾಧಕರು, ಮಹಾಪುರುಷರ ಹಿಂದೆ ಕೃಷ್ಣನಿದ್ದಾನೆ. ವೇದವ್ಯಾಸ, ಹಯಗ್ರೀವರಿಂದ ಜ್ಞಾನ ಕಾರ್ಯ, ಕೂರ್ಮಾವತಾರದಿಂದ ಭಕ್ತರ ಉದ್ದಾರ ಹಾಗೂ ಶ್ರೀರಾಮ, ಶ್ರೀಕೃಷ್ಣರದ್ದು ಸರ್ವಕ್ಷೇತ್ರದ ಸರ್ವಸಾಧಕರಿಗೆ ಮಾತ್ರವಲ್ಲ, ಜಗತ್ತಿಗೆ ಸಂದೇಶ – ಅನುಗ್ರಹ ನೀಡಲೆತ್ತಿದ ಅವತಾರ. ತಮ್ಮ ಕರ್ತವ್ಯದಲ್ಲಿ ಉನ್ನತ ಸಾಧನೆ, ಸ್ಥಾನ ಪಡೆಯುವುದೇ ಗುರಿಯಾಗಬೇಕು ಎಂದು ಹೇಳಿದರು.
ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥರು, ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಅರುಣಾ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.



