ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ ಮಂಗಳೂರು,
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ
ಇವರುಗಳ ಮಾರ್ಗದರ್ಶನಲ್ಲಿ ಫೇಮಸ್ ಯೂತ್ ಕ್ಲಬ್(ರಿ) ಮತ್ತು ಫೇಮಸ್ ಮಹಿಳಾ ಮಂಡಲ 10ನೇ ತೋಕೂರು, ಹಳೆಯಂಗಡಿ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 17.01.2024ನೇ ಬುಧವಾರ ಸಂಜೆ 6:00 ಗಂಟೆಗೆ ಸರಿಯಾಗಿ PM ವಿಶ್ವಕರ್ಮ ಯೋಜನೆಯ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಸಂಸ್ಥೆಯ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.

ಫೇಮಸ್ ಯೂತ್ ಕ್ಲಬ್ಬಿನ ಗೌರವಾಧ್ಯಕ್ಷರಾದ ಶ್ರೀ ಗುರುರಾಜ ಎಸ್ ಪೂಜಾರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ K.S.T.A ಪ್ರಧಾನ ಕಾರ್ಯದರ್ಶಿಯಾದ
ಶ್ರೀ ಮೋಹನ್ ಎಸ್. ಕೋಡಿ ರವರು ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಫೇಮಸ್ ಯೂತ್ ಕ್ಲಬ್ಬಿನ ಅಧ್ಯಕ್ಷರಾದ ಭಾಸ್ಕರ್ ಅಮೀನ್ ತೋಕೂರು, ಮಹಿಳಾ ಮಂಡಲದ ಅಧ್ಯಕ್ಷೆಯಾದ ಶ್ರೀಮತಿ ಪ್ರೇಮಲತಾ ಯೋಗೀಶ್, ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಶ್ರೀ ಮೋಹನ್ ದಾಸ್ ದೇವಾಡಿಗ, ಫೇಮಸ್ ಯೂತ್ ಕ್ಲಬ್ಬಿನ ಉಪಾಧ್ಯಕ್ಷರಾದ ಭೋಜ ಕೋಟ್ಯಾನ್ ಕಾರ್ಯದರ್ಶಿ ಹಿಮಕರ್ ಕೋಟ್ಯಾನ್ ಮಹಿಳಾ ಮಂಡಲದ ಉಪಾಧ್ಯಕ್ಷರಾದ ಅಮಿತಾ ದಿನಕರ್ ಸಾಲಿಯಾನ್, ಕಾರ್ಯದರ್ಶಿ ಕುಸುಮ ಎಚ್ ಕೋಟ್ಯಾನ್, ಕೋಶಾಧಿಕಾರಿ ಶ್ರೀಮತಿ ಇಂದಿರಾ ಸಂಜೀವ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀ ಹಿಮಕರ್ ಕೋಟ್ಯಾನ್ ನಿರೂಪಿಸಿದರು



