ದಕ್ಷಿಣ ಕನ್ನಡ : ದೇಶದಾದ್ಯಂತ ಅಡಿಕೆ ಖರೀದಿ ಮತ್ತು ಮಾರಾಟ ಕೇಂದ್ರಗಳನ್ನ ಹೊಂದಿರುವ ಕ್ಯಾಂಪ್ಕೋ ಸಂಸ್ಥೆ,, 1973ರಲ್ಲಿ ಆರಂಭಗೊಂಡು ರೈತರಿಂದ ಅಡಿಕೆ ಖರೀದಿ ಮತ್ತು ಮಾರಾಟವನ್ನು ಹಾಗೂ ಇತರ ರೈತೋದ್ಪನ್ನಗಳನ್ನು ಖರೀದಿಸಿ ರೈತರಿಗೆ ನೆರವಾಗುವುದರ ಜೊತೆಗೆ ಮಾರುಕಟ್ಟೆ ಸ್ಥಿರದರ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಅಲ್ಲದೆ ಅಡಿಕೆ ಹಾಗೂ ಕರಿಮೆಣಸು ಕೊಳೆ ರೋಗದಿಂದ ರಕ್ಷಿಸಲು ರೈತರಿಗೆ ಬೇಕಾದ ಬೋರ್ಡು ದ್ರಾವಣ ತಯಾರಿಕೆಗೆ ಬೇಕಾದ ಮೂಲ ಸಾಮಗ್ರಿಗಳನ್ನು ದರ ಕಡಿತ ಮಾರಾಟದೊಂದಿಗೆ ನೀಡಿ ಸಹಕಾರಿಯಾಗಿರುವುದು, ಹಾಗೂ ಕೊಕ್ಕೋದಿಂದ ತಯಾರಾಗುವ ಚಾಕಲೇಟ್ ಹಾಗೂ ಸಿಹಿ ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಮೂಲಕ ರೈತರಿಗೆ ಸಹಕಾರಿಯಾಗಿರುವುದು ನಮಗೆಲ್ಲ ತಿಳಿದೇ ಇದೆ.

ಪ್ರಸ್ತುತ ಕ್ಯಾಂಪ್ಕೋ ಸಂಸ್ಥೆಯು ರೈತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಪ್ರಮುಖವಾಗಿದ್ದು ರೈತರ ಆರೋಗ್ಯನಿಧಿ ಎಂಬ ಕಾರ್ಯಕ್ರಮದಡಿ ಕ್ಯಾಮ್ಕೋದ ಚಿತ್ತ ರೈತರ ಆರೋಗ್ಯದತ್ತ ಯೋಜನೆ ಅಡಿಯಲ್ಲಿ ಮೂಡುಬಿದರೆ ಕ್ಯಾಂಪ್ಕೋ ಸದಸ್ಯರಾದ ಇಗ್ನೇಷಿಯಸ್ ಸೇರವೋ ಕಲ್ಲ ಮುನ್ಕೂರು ಇವರಿಗೆ ಆರೋಗ್ಯ ಸಂಬಂಧಿ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗಾಗಿ ರೂಪಾಯಿ 50 ಸಾವಿರವನ್ನು ಸಂಸ್ಥೆಯು ಬೈಕಂಪಾಡಿ ವಲಯದ ಹಿರಿಯ ಅಧಿಕಾರಿಯದ ಚಂದ್ರ ಇವರ ಮುಖಾಂತರ ಇಗ್ನೇಶಿಯಸ್ ಸೆರಾವೋ ಇವರ ಮನೆಯಲ್ಲಿ ಮೂಡುಬಿದ್ರೆ ವಲಯ ಕ್ಯಾಮ್ಕೋ ಪ್ರಬಂಧಕರಾದ ಶ್ರೀನಿವಾಸ್ ಪಿ.ವಿ. ಮತ್ತಿತರರ ಉಪಸ್ಥಿತಿಯಲ್ಲಿ ಚೆಕ್ ಮುಖಾಂತರ ನೀಡಿದರು.



