ಕೋಟ್ಯಾಂತರ ಭಾರತೀಯರ ಕನಸು ನನಸಾಗುವ ಸುದಿನ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆ ಕರಾವಳಿಯ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಶ್ರೀರಾಮ ಪಟ್ಟಾಭಿಷೇಕ, ಪೂಜೆ ಪುನಸ್ಕಾರಗಳೊಂದಿಗೆ ಶ್ರೀರಾಮ ಮಂತ್ರ ಪಠಣೆ, ಭಕ್ತರಿಂದ ಶ್ರೀರಾಮನ ಭಜನೆ ಭಕ್ತಿಪೂರ್ವಕವಾಗಿ ಮೊಳಗಿದೆ. ವೆಂಕಟರಮಣ ದೇಗುಲದಲ್ಲಿ ಶ್ರೀರಾಮನ ಪಟ್ಟಾಭಿಷೇಕವನ್ನು ಸಾವಿರಾರು ಭಕ್ತಾದಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ.



