ಬಂಟ್ವಾಳ: ತಾಯಿ ಮಗಳಿಗೆ ಚಾಕು ತೋರಿಸಿ ಲಕ್ಷಾಂತರ ರೂ ಮೌಲ್ಯದ ನಗನಗದು ರಾಬರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೋಲೀಸರ ಸ್ಪೆಷಲ್ ಟೀಂ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲುಕಿನ ಮಾಳ ಗ್ರಾಮದ ದರ್ಖಾಸು ಮಾಳ,ಮಲ್ಲಾರು ನಿವಾಸಿ ಗಣೇಶ್ ನಾಯ್ಕ್, ಮಂಗಳೂರು ಐಕಳ ಗ್ರಾಮದ ಬಳ್ಳಂಜೆ ಮುಂಡಿಕಾಡು ನಿವಾಸಿ ರಾಕೇಶ್ ಎಲ್ ಪಿಂಟೋ, ದರ್ಖಾಸು ಮಾಳ,ಮಲ್ಲಾರು ನಿವಾಸಿ ದಿನೇಶ್ ನಾಯ್ಕ್, ಕಾರ್ಕಳ ತಾಲೂಕಿನ ಮಾಳ ಗ್ರಾಮದ ಇಂದಿರಾನಗರ ನಿವಾಸಿ ಸಾಗರ್ ಶೆಟ್ಟಿ, ಕಡಬ ತಾಲೂಕಿನ ಕಾಯ್ಮುಣ ಗ್ರಾಮದ ಕೆಲೆಂಬೇರಿ ಬೆಳಂದೂರು ನಿವಾಸಿ ಎಂ.ಸೀತಾರಾಮ, ಕಡಬ ತಾಲೂಕಿನ ಕಾಯ್ಮುಣ ಗ್ರಾಮದ ಕೆಲೆಂಬೇರಿ ಬೆಳಂದೂರು ನಿವಾಸಿ ಸುದೀರ್ ಹಾಗೂ ಮೂಲತ: ಬಂಟ್ವಾಳ ಇರಾ ಗ್ರಾಮ, ಪ್ರಸ್ತುತ ಚಿಕ್ಕಮಗಳೂರು ಗೌರಿ ಕಾಲುವೆ ನಿವಾಸಿ ಮಹಮ್ಮದ್ ಹನೀಫ್ ಬಂಧಿತ ಆರೋಪಿಗಳು.
ಬಂಧಿತರಿಂದ ದರೋಡೆಗೈದ 3.15 ಲಕ್ಷ ಮೌಲ್ಯದ 54 ಗ್ರಾಂ ಚಿನ್ನಾಭರಣ ಹಾಗೂ 10 ಲಕ್ಷಮೌಲ್ಯದ ಇನ್ನೋವಾ ಮತ್ತು ಇಂಡಿಕಾ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ವಿವರ
ಜ.11 ಗುರುವಾರದಂದು ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಅಂಚಿಕಟ್ಟೆ ಮೇನಾಡು ನಿವಾಸಿ ಮರೀಟಾ ಸಿಂಥಿಯಾ ಪಿಂಟೋ ಎಂಬವರ ಮನೆಗೆ ಬಂದ ಮುಸುಕುದಾರಿಗಳು ಮನೆಯ ಬೆಲ್ ಹಾಕಿದ್ದಾರೆ.
ಮನೆಯಲ್ಲಿ ತಾಯಿ ಪ್ಲೋರಿನಾ ಪಿಂಟೊ ಹಾಗೂ ಮಗಳು ಮರಿಟಾ ಪಿಂಟೋ ಮಾತ್ರ ಇದ್ದು, ಬೆಳಿಗ್ಗೆ 6.15 ಗಂಟೆಗೆ ಬೆಲ್ ಹಾಕಿದಕ್ಕೆ ಮನೆಯ ಬಾಗಿಲು ತೆರದಿದ್ದಾರೆ.
ಬಾಗಿಲು ತೆರೆದ ಕೂಡಲೇ ಮುಸುಕುದಾರಿಗಳು ಮನೆಯೊಳಗೆ ನುಗ್ಗಿ, ಚೂರಿ ತೋರಿಸಿ ಗೊದ್ರೇಜ್ ಕೀ ನೀಡುವಂತೆ ಹೆದರಿಸಿದ್ದಾರೆ, ನೀಡದಿದ್ದರೆ ಕೊಲ್ಲುವ ಬೆದರಿಕೆ ಹಾಕಿದ್ದರು. ಬೆದರಿಕೆಗೆ ಒಳಗಾದ ಮರಿಟಾ ಪಿಂಟೋ ಕೀ ನೀಡಿದ್ದಾರೆ. ಕೀ ಪಡೆದುಕೊಂಡ ಮುಸುಕುದಾರಿಗಳು ಕಳ್ಳರು ಗೊದ್ರೇಜ್ ನಲ್ಲಿದ್ದ ಚಿನ್ನ ಹಾಗೂ ನಗದು ಹಣವನ್ನು ದೋಚಿದ್ದಾರೆ.
ಈ ಸಂದರ್ಭದಲ್ಲಿ ಮರಿಟಾ ಪಿಂಟೊ ಹಾಗೂ ಮುಸುಕುದಾರಿಗಳ ನಡುವೆ ಗಲಾಟೆ ನಡೆದಿದ್ದು, ಅವರ ಕೈಗೆ ಗಾಯವಾಗಿತ್ತು. ಘಟನೆ ನಡೆದ ಸ್ಥಳಕ್ಕೆ ಮಂಗಳೂರು ಎಸ್.ಪಿ.ರಿಷ್ಯಂತ್ ಅವರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣವನ್ನು ಪತ್ತೆ ಹಚ್ಚಲು ಮೂರು ವಿಶೇಷ ತಂಡವನ್ನು ರಚನೆ ಮಾಡಿದ್ದರು.
ಅತ್ಯಂತ ಸವಾಲಿನ ಪ್ರಕರಣವಾಗಿದ್ದು, ಪ್ರಕರಣದ ಗಂಭೀರತೆಯನ್ನು ಮನಗಂಡ ಎಸ್.ಪಿ.ರಿಷ್ಯಂತ್ ಅವರು ಹೆಚ್ಚುವರಿ ಪೋಲೀಸ್ ಅಧೀಕ್ಷರುಗಳಾದ ಧರ್ಮಪ್ಪ ಮತ್ತು ರಾಜೇಂದ್ರ ಸಹಭಾಗಿತ್ವ ದಲ್ಲಿ ಬಂಟ್ವಾಳ ಡಿ.ವೈ.ಎಸ್. ಪಿ.ಎಸ್.ವಿಜಯಪ್ರಸಾದ್ ನೇತ್ರತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ , ಪುಂಜಾಲಕಟ್ಟೆ ಎಸ್.ಐ.ನಂದಕುಮಾರ್, ಬಂಟ್ವಾಳ ಗ್ರಾಮಾಂತರ ಎಸ್. ಐ.ಹರೀಶ್ ಎಂ.ಆರ್, ಅವರ ಮೂರು ವಿಶೇಷ ತಂಡಗಳನ್ನು ರಚಿಸಿ ಅಪರಾಧ ಸಿಬ್ಬಂದಿ ಗಳಾದ ಎ.ಎಸ್.ಐ.ಗಿರೀಶ್, ಹೆಚ್.ಸಿ.ಗಳಾದ ರಾಧಾಕೃಷ್ಣ, ಸುಜು, ಉದಯ ರೈ, ಅದ್ರಾಮ, ಪ್ರವೀಣ್ ರೈ, ಪ್ರವೀಣ್ ,ಸಂದೀಪ್, ರಾಹುಲ್, ಇರ್ಶಾದ್, ರಾಜೇಶ್, ಹರಿಶ್ಚಂದ್ರ, ಪಿಸಿಗಳಾದ ಪುನೀತ್, ರಮ್ಜಾನ್, ಯೋಗೇಶ್ ಡಿ.ಎಲ್, ಕುಮಾರ್ ಎಚ್, ಕೆ.ವಿನಾಯಕ ಬಾರ್ಕಿ, ಜಗದೀಶ್ ಅತ್ತಾಜೆ, ಝಮೀರ್ ಖಲಾರಿ, ಎ.ಹೆಚ್.ಸಿ.ಗಳಾದ ಕುಮಾರ್, ಮಹಾಂತೇಶ್, ಜಿಲ್ಲಾ ಪೋಲೀಸ್ ಕಚೇರಿಯ ಗಣಕಯಂತ್ರ ವಿಭಾಗದ ದಿವಾಕರ್ , ಸಂಪತ್ ಅವರ ತಂಡ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೋಲಿಸರ ವಿಶೇಷ ಪ್ರಯತ್ನದ ಮೂಲಕ ಆರೋಪಿಗಳ ಪತ್ತೆ ಕಾರ್ಯ ವನ್ನು ಮೆಚ್ಚಿ ಬಹುಮಾನವನ್ನು ಘೋಷಣೆ ಮಾಡಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…