ದುಬಾಯಿ: ದುಬಾಯಿಯಲ್ಲಿ ಅಂತಾರಾಷ್ಟ್ರೀಯ ಪತ್ರಿಕಾ ಸಾಧಕ ಪ್ರಶಸ್ತಿ ಪಡೆದ ಪತ್ರಕರ್ತ, ಲೇಖಕ ರವಿ ನಾಯ್ಕಾಪು ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಪತ್ರಕರ್ತರಾದ ಗಂಗಾಧರ ತೆಕ್ಕೆಮೂಲೆ ಮತ್ತು ಪುರುಷೋತ್ತಮ ಪೆರ್ಲ ಅವರನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರ) ಯು. ಎ. ಇ ದುಬೈ ಘಟಕದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಅಕಾಡೆಮಿಯ ಯು.ಎ.ಇ ಘಟಕದ ಪ್ರಧಾನ ಕಾರ್ಯದರ್ಶಿ ಅಮರ್ ದೀಪ್ ಕಲ್ಲೂರಾಯ ಅವರು ಶಾಲು ಹೊದಿಸಿ ಉಪಹಾರ ನೀಡಿ ಗೌರವಿಸಿದರು. ಅಕಾಡೆಮಿಯ ಮಾಧ್ಯಮ ವಿಭಾಗ ಸಂಚಾಲಕ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ ಹಾಗೂ ಘಟಕದ ಪದಾಧಿಕಾರಿ ದುಬಾಯಿ ಉದ್ಯೋಗಿ, ಸಮಾಜ ಸೇವಕ ಲಿತೇಶ್ ಕುಮಾರ್ ಕೆ. ಸಿ ಉಪಸ್ಥಿತರಿದ್ದರು.



