ಅಯೋಧ್ಯೆ ಶ್ರೀ ರಾಮ ಮಂದಿರ ಲೋಕಾರ್ಪಣೆ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯ ಶ್ರೀ ರಾಮೋತ್ಸವವು ಶ್ರೀ ಮಹಮ್ಮಾಯೀ ಭಜನಾ ಮಂದಿರ, ನಾಗವನ – ಕುಂಟ್ರಕಲ ಇಲ್ಲಿ ಜರುಗಿತು.

ಶ್ರೀ ಮಹಮ್ಮಾಯೀ ಭಜನಾ ಮಂಡಳಿ (ರಿ.) ನಾಗವನ – ಕುಂಟ್ರಕಲ, ಶ್ರೀ ಮಹಮ್ಮಾಯೀ ಮಾತೃ ಮಂಡಳಿ, ಕುಂಟ್ರಕಲ ಹಾಗೂ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಶಿವಾಜಿ ಶಾಖೆ – ಕುಂಟ್ರಕಲ ಇದರ ನೇತೃತ್ವದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರ ಲೋಕಾರ್ಪಣೆ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯ ಶ್ರೀ ರಾಮೋತ್ಸವವು ಶ್ರೀ ಮಹಮ್ಮಾಯೀ ಭಜನಾ ಮಂದಿರ, ನಾಗವನ – ಕುಂಟ್ರಕಲ ಇಲ್ಲಿ ಜರುಗಿತು.
ಈ ಅಭೂತಪೂರ್ವ ಕಾರ್ಯಕ್ರಮದ ಅಂಗವಾಗಿ ಭಜನೆ, ಶ್ರೀ ರಾಮ ತಾರಕ ಮಂತ್ರ ಪಠಣ ಹಾಗೂ ಶ್ರೀ ಹನುಮಾನ್ ಚಾಲೀಸಾ ಪಠಣ ಕಾರ್ಯ ನಡೆಯಿತು.
ಮಂದಿರದ ವಠಾರದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರ ಲೋಕಾರ್ಪಣೆಯ ನೇರ ಪ್ರಸಾರ ವೀಕ್ಷಣೆಯ ವ್ಯವಸ್ಥೆ ಮಾಡಲಾಗಿತ್ತು.
ದಾನಿಗಳ ಸಹಕಾರದಿಂದ ಮಂದಿರದ ವಠಾರದಲ್ಲಿ ಅಳವಡಿಸಿದ ಅಯೋಧ್ಯೆ ಶ್ರೀ ರಾಮ ಮಂದಿರದ ಭಾವಚಿತ್ರವನ್ನು ಹಿರಿಯರಾದ ಬಾಲಪ್ಪ ನಾಯ್ಕ ಕುಂಟ್ರಕಲ, ಶ್ರೀ ಮಹಾಮ್ಮಾಯೀ ಭಜನಾ ಮಂಡಳಿ (ರಿ.) ನಾಗವನ – ಕುಂಟ್ರಕಲ ಇದರ ಅಧ್ಯಕ್ಷರಾದ ತಿಮ್ಮಪ್ಪ ನಾಯ್ಕ ಕಾನ ಹಾಗೂ ಶ್ರೀ ಮಹಮ್ಮಾಯೀ ಮಾತೃ ಮಂಡಳಿ, ಕುಂಟ್ರಕಲ ಇದರ ಅಧ್ಯಕ್ಷರಾದ ರಾಧಿಕಾ ಕುಂಟ್ರಕಲ ಇವರು ಅನಾವರಣಗೊಳಿಸಿದರು.
ಮಧ್ಯಾಹ್ನ ಮಹಾಮಂಗಲಾರತಿಯ ನಂತರ ಅನ್ನಸಂತರ್ಪಣೆ ನಡೆಯಿತು.
ಸಂಜೆ ಸೂರ್ಯಾಸ್ತದ ಸಮಯ ದೀಪ ಹಚ್ಚಿ, ಉತ್ತರ ದಿಕ್ಕಿನಲ್ಲಿರುವ ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ವಿರಾಜಮಾನನಾದ ಬಾಲ ರಾಮನಿಗೆ ಆರತಿ ಎತ್ತಲಾಯ್ತು.
ಈ ವೈಭವಿತವಾದ ಕಾರ್ಯಕ್ರಮದಲ್ಲಿ ಊರ ಪರಊರ ಭಕ್ತಾದಿಗಳು ಪಾಲ್ಗೊಂಡು ಕೃರ್ತರಾದರು.



