ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ 2024ಕ್ಕೆ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಗಣರಾಜ್ಯೋತ್ಸವದಂದು ನಡೆಯುವ ಪರೇಡ್ನಲ್ಲಿ ಎನ್‌ಸಿಸಿಯ ಅಖಿಲ ಭಾರತ ಯುವತಿಯರ ವಿಭಾಗದ ಕಮಾಂಡರ್ ಆಗಿ ಕರ್ನಾಟಕ ರಾಜ್ಯದ ಮಡಿಕೇರಿಯ ಪಣ್ಯ ಪೊನ್ನಮ್ಮ ಅವರು ಆಯ್ಕೆಯಾಗಿದ್ದಾರೆ.

ದೆಹಲಿಯಲ್ಲಿ ಜ 26ರಂದು ನಡೆಯುವ ಗಣರಾಜ್ಯೋತ್ಸವ ಪೆರೆಡ್ನಲ್ಲಿ ಪುಣ್ಯ ಪೊನ್ನಮ್ಮ ಅವರು ಎನ್‌ಸಿಸಿಯ ಅಖಿಲ ಭಾರತ ಯುವತಿಯರ ವಿಭಾಗವನ್ನು ಮುನ್ನಡೆಸಲಿದ್ದಾರೆ. ಬೆಂಗಳೂರಿನ ಕ್ರೈಸ್ಟ್ ವಿವಿ ಕಾನೂನಿ ವಿದ್ಯಾರ್ಥಿನಿಯಾಗಿರುವ ಪುಣ್ಯ ಅವರು ಮಡಿಕೇರಿ ಸರ್ಕಲ್ ಇನ್ಸ್‌ಪೆಕ್ಟರ್ ಅನೂಪ್ ಮಾದಪ್ಪ ಅವರ ಪುತ್ರಿಯಾಗಿದ್ದಾರೆ.



