ಮಂಗಳೂರು:ಅಯೋಧ್ಯೆಯ ರಾಮ ಮಂದಿರ ಹಿಂದು ಬಾಂಧವರ ಸಾವಿರಾರು ವರ್ಷಗಳ ಕನಸೆಂದರೆ ತಪ್ಪಾಗಲಾರದು. ಆ ಕನಸೊಂದು ಇದೀಗ ನನಸಾಗಿದೆ.1528ರಲ್ಲಿ ಮೊಘಲರು ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಿದರು. ತದ ನಂತರದ ದಿನಗಳಲ್ಲಿ ಹಲವಾರು ವಿವಾದಗಳು ನಡೆದವು. ಈ ವಿವಾದಗಳ ನಡುವೆ 1992 ರಲ್ಲಿ ಕರಸೇವಕರ ಗುಂಪೊಂದು ಮಸೀದಿಯನ್ನು ಧ್ವಂಸಗೊಳಿಸಿದವು.
ಮುಂದಿನ ಅವಧಿಯಲ್ಲಿ ಭಾರತದ ನೆಲದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಹಲವಾರು ತಿಂಗಳುಗಳ ಕಾಲ ಗಲಭೆಗಳು ನಡೆದು ಹಲವಾರು ರಾಮಭಕ್ತರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ದಿನಗಳಾವು.ಸಾವಿರಾರು ವರ್ಷಗಳ ತಪಸ್ಸಿನ ಫಲವಾಗಿಯೋ ಏನೋ 2019 ನವಂಬರ್ 9 ರಂದು ಸುಪ್ರೀಂ ಕೋರ್ಟ್ ವಿವಾದಿತ ರಾಮ ಭೂಮಿಯನ್ನು ಸರ್ಕಾರ ರಚಿಸಿದ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ಹಸ್ತಾಂತರಿಸಲು ನಿರ್ಧರಿಸಿತು. ಈ ನಿರ್ಧಾರದನ್ವಯ 2020 ಫೆಬ್ರವರಿ 5 ರಂದು ಈ ಪ್ರದೇಶದಲ್ಲಿ ರಾಮಮಂದಿರವನ್ನು ಕಟ್ಟುವ ಕಾರ್ಯಕ್ಕೆ ತೀರ್ಪು ನೀಡಿತು. ಅದರಂತೆ ಸಾವಿರಾರು ವರ್ಷಗಳ ಕನಸಿನ ರಾಮಮಂದಿರ ಕೊನೆಗೂ ಇಂದು ಲೋಕಾರ್ಪಣೆಗೊಂಡಿದೆ. ಇದರ ಸಂಭ್ರಮವವು ನಾಡಿನ ಎಲ್ಲೆಡೆ ಮನೆ ಮಾತಾಗಿಸಿದೆ ನಾಡಿನ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣವನ್ನೇ ಸೃಷ್ಟಿಸುವಂತೆ ಮಾಡಿದ ಸುಂದರ ಕ್ಷಣ.
ಈ ನೆನಪಿನ ದಿನವನ್ನು ಪೋಷಕರು, ರಾಮಭಕ್ತರು ತಮ್ಮ ಮಕ್ಕಳಿಗೆ ರಾಮ-ಲಕ್ಷ್ಮಣ, ಸೀತೆ, ಹನುಮಂತರ ವೇಷಭೂಷಣವನ್ನು ಧರಿಸಿ ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರ ತನ್ನ ಅಯೋಧ್ಯೆಯಲ್ಲಿ ಹೇಗೆ ಕಂಗೊಳಿಸುತ್ತಿರುವನೆಂಬ ಊಹೆಯನ್ನು ಮಾಡಿಕೊಂಡು ಅದರಂತೆ ತಮ್ಮ ಮಕ್ಕಳನ್ನು ಸಿದ್ದ ಗೊಳಿಸಿ ಮನೆಯಲ್ಲೇ ರಾಮನನ್ನು ಕಂಡು ಸಂತೋಷ ಪಟ್ಟಿದ್ದಾರೆ.
ಎಲ್ಲಿ ನೋಡಿದರೂ ಪ್ರಭು ಶ್ರೀರಾಮ-ಲಕ್ಷ್ಮಣ, ಸೀತೆ, ಹನುಮಂತರನ್ನು ಹೋಲುವ ಮಕ್ಕಳ ಮುದ್ದಾದ ಭಾವಚಿತ್ರಗಳನ್ನು ಕಾಣುವುದೇ ಕಣ್ಣಿಗೆ ಹಬ್ಬ. ಹೀಗೆ ನಾಡಿನಾದ್ಯಂತ ಎಲ್ಲಾ ರಾಮಭಕ್ತರು ತಮ್ಮ ತಮ್ಮ ಮನೆಯಲ್ಲಿಯೇ ಅಯೋಧ್ಯೆಯ ಶ್ರೀರಾಮಚಂದ್ರನನ್ನು ಕಂಡು ಭಾವುಕರಾಗಿ ತಾವುಗಳೆ ಧನ್ಯೋಸ್ಮಿಗಳೆಂದುಕೊಳ್ಳುತ್ತಿದ್ದಾರೆ. ಈ ದಿನವನ್ನು ದೀಪಾವಳಿ ಹಬ್ಬದ ದಿನದಂತೆ ಮನೆಯಂಗಳದಲ್ಲಿ ದೀಪ ಹಚ್ಚಿ ಸಂಭ್ರಮಿಸಿರುವುದು ಮತ್ತೊಂದು ತರಹದ ಹಬ್ಬ. ಅಯೋಧ್ಯಾ ಶ್ರೀ ರಾಮಮಂದಿರ ಪ್ರತಿಷ್ಠಾಪನಾ ದಿನವು ನಾಡಿನಾದ್ಯಂತ ಕೋಟ್ಯಾಂತರ ಬಾಲರಾಮರ ಮೂಲಕ ಆ ಪ್ರಭು ಶ್ರೀ ರಾಮಚಂದ್ರನನ್ನೇ ನೋಡಿದಷ್ಟು ಉತ್ಸಾಹ, ಸಂತೋಷ ಆನಂದವನ್ನುಂಟು ಮಾಡಿದೆ. ಸಾವಿರಾರು ವರ್ಷಗಳ ಹಿಂದು ಬಾಂಧವರ ಕನಸಿನ ರಾಮಮಂದಿರವನ್ನು ಕಡೆಗೂ ಕಟ್ಟಿಯೇ ಬಿಟ್ಟೆವು ಎಂಬ ಗರ್ವ ರಾಮಭಕ್ತರಲ್ಲಿ , ರಾಮನಲ್ಲಿರುವ ಭಕ್ತಿಯನ್ನು ದೃಡಗೊಳಿಸಿದೆ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…