ಅನ್ಯಕೋಮಿನ ಯುವಕನನ್ನ ಪ್ರೀತಿಸಿದ್ದಕ್ಕೆ ಕೋಪಗೊಂಡ ಸಹೋದರ ತಂಗಿ ಹಾಗೂ ತನ್ನ ತಾಯಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ.

ಮಗಳು ಧನುಶ್ರೀ (19), ತಾಯಿ ಅನಿತಾ (43) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದವರು. ಮಗ ನಿತಿನ್ನಿಂದ ಈ ಕೃತ್ಯ ನಡೆದಿದೆ. ಸಹೋದರಿ ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ಸಹೋದರನಿಗೆ ಗೊತ್ತಾಗಿ ತಿಳಿ ಹೇಳಿದ್ದನು. ಬಳಿಕ ಇಬ್ಬರ ನಡುವೆಯು ವೈಮನಸ್ಸು ಮೂಡಿತ್ತು. ಬಳಿಕ ತಂಗಿ ಮತ್ತು ತಾಯಿಯನ್ನು ಬೈಕ್ ಮೂಲಕ ಕೆರೆ ಬಳಿಗೆ ಕರೆದುಕೊಂಡು ಹೋಗಿದ್ದಾನೆ. ಆ ಬಳಿಕ ಮೊದಲು ಕೆರೆಯಲ್ಲಿ ತಂಗಿಯನ್ನು ತಳ್ಳಿದ್ದಾನೆ. ಇದರಿಂದ ಗಾಬರಿಗೊಂಡ ತಾಯಿ ತಕ್ಷಣ ಮಗಳನ್ನು ರಕ್ಷಣೆಗೆ ಮುಂದಾಗಿದ್ದಾಳೆ. ಈ ವೇಳೆ ತಾಯಿಯನ್ನು ಕೂಡ ಕೆರೆಗೆ ತಳ್ಳಿದ್ದಾನೆ.
ಕೆರೆ ನೀರಿನಲ್ಲಿ ಬಿದ್ದ ತಾಯಿ, ಮಗಳು ಇಬ್ಬರು ಮೃತಪಟ್ಟಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನ ಹೊರ ತೆಗೆದಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



