ದುಬೈ : ಸಪ್ತ ಭಾಷೆ ಸಂಗಮ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರವು ವೈವಿಧ್ಯಮಯ ಭಾಷೆ ಸಾಹಿತ್ಯ ಸಾಂಸ್ಕೃತಿಕತೆಗೊಂದು ಕೈಹನ್ನಡಿಯಂತಿದೆ. ಅಲ್ಲಿನ ವಿವಿಧ ಭಾಷೆಗಳನ್ನಾಡುವ ವಿವಿಧ ಜಾತಿಯನ್ನೊಳಗೊಂಡ ಜನರಿದ್ದರೂ ಸದಾ ಸಹೋದರತ್ವದ ಸೌಹರ್ದತೆಯನ್ನು ಸಾರುವ ಆ. ಮಣ್ಣಿನ ಅನಿವಾಸಿಗರು ಉದ್ಯೋಗಕ್ಕಾಗಿ ಯುಎಇತಹ ಗಲ್ಫ್ ರಾಷ್ಟ್ರವನ್ನು ಅವಲಂಭಿಸಿದ್ದು ಇದೀಗ ಮಂಜೇಶ್ವರದ ಜನ ವೈವಿಧ್ಯತೆಯನ್ನು ಒಟ್ಟುಗೂಡಿಸಿಕೊಂಡು ಸಂಭ್ರಮಿಸಲು ಯುಎಇ ಯಲ್ಲಿ ಮೈಸರ್‌ಕಾರ್ ಎಂಬ ಬಳಗವನ್ನು ಕಟ್ಟಿಕೊಂಡು ವಿಭಿನ್ನವಾದ ಪ್ರಯತ್ನವನ್ನು ನಡೆಸಲಾಗಿದೆ.
ಇದರ ವಿಸೃತ ರೂಪವೇ ಫೆಬ್ರವರಿ 11 ರಂದು ಜರಗುವ ಸ್ನೇಹ ಸಮ್ಮಿಲನವಾದ “ಗಮ್ಮತ್ 2024” ಎಂಬ ಕಾರ್ಯಕ್ರಮ
ಎಂದು ಮೈಸರ್‌ಕಾರ್ ತಂಡದ ರೂವಾರಿ ಡಾ.ಅಬ್ದುಲ್ ರಹಮಾನ್ ಬಾವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.. ಅವರು ಮಾತನಾಡುತ್ತಾ ಕಳೆದ ಎರಡು ವರ್ಷ ಚಿಕ್ಕದಾಗಿ ಚೊಕ್ಕದಾಗಿ ಮೈಸರ್‌ಕಾರ್ ಗಮ್ಮತ್ ಎಂಬ ಕಾರ್ಯಕ್ರಮವನ್ನು ಅಯೊಜಿಸುತ್ತಾ ಮಂಜೇಶ್ಚರದ ಸ್ನೇಹ ಸೌಹರ್ದತೆಯನ್ನು ಕೊಲ್ಲಿ ರಾಷ್ಡ್ರದ ಜನತೆಯಲ್ಲೂ ಜತನವಾಗಿರಿಸಲಾಗಿದೆ. ಈ ವರ್ಷ ಯುಎಇಯ ಎಲ್ಲಾ ರಾಜ್ಯದಲ್ಲಿ ಇರುವ ಮಂಜೇಶ್ವರದವರನ್ನು ಒಟ್ಟುಗೂಡಿಸಿ “ಮೈಸರ್‌ಕಾರ್ ಗಮ್ಮತ್-2024” ಕಾರ್ಯಕ್ರಮಕ್ಕೆ ಯೋಜನೆ ಇರಿಸಿರುವುದರಿಂದ ಅಲ್ಲಿನ ವೈವಿಧ್ಯತೆ ಹಾಗೂ ಏಕತೆಯನ್ನು ಸಾಗರದಾಚೆಗೂ ವಿಸ್ತರಿಸಿ ಮಂಜೇಶ್ವರದ ಜನತೆಯ ಪರಂಪರೆಯನ್ನು ವಿಪುಲಗೊಳಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು. ಇದರ ಅಂಗವಾಗಿ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಮಂಜೇಶದವರದ ಜನತೆಯ ಮಹಾ ಸಮ್ಮೇಳನದ ಪ್ರತೀತಿಯಲ್ಲಿ ನಡೆಸಲಾಗುವ ಕಾರ್ಯಕ್ರಮದಲ್ಲಿ ಪ್ರೀತಿ ಬೋಜನದ ವ್ಯವಸ್ಥೆಯು ಮಾಡಲಾಗಿದೆ ಎಂದು ತಿಳಿಸಿದರು.
ಫೆಬ್ರವರಿ 11 ರಂದು ನಗರದ Peas Modern British school Rashidiya ದ ಸಭಾಂಗಣದಲ್ಲಿ ಸಂಜೆ ಮೂರರಿಂದ ರಾತ್ರಿ ಹತ್ತರ ವರೆಗೆ ಜರಗಲಿರುವ “ಮೈಸರ್‌ಕಾರ್ ಗಮ್ಮತ್-2024” ಕಾರ್ಯಕ್ರಮದಲ್ಲಿ ಕೇರಳದ ಖ್ಯಾತ ಗಾಯಕರಾದ ಹಮೀದ್ ಕಲಾಭವನ್ ತಂಡದವರಿಂದ ಸಂಗೀತ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮ ಒಪ್ಪನ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಜರಗಲಿದೆ. ಯುಎಇಯಲ್ಲಿ ಇರುವ ಮಂಜೇಶ್ವರದ ಅನಿವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದು ಈ ಸಂದರ್ಭದಲ್ಲಿ ಸಂಘಟಕರಲ್ಲಿ ಒರ್ವರಾದ ನ್ಯಾಯವಾದಿ ಇಬ್ರಾಹಿಂ ಖಲೀಲ್ ಕೋರಿದ್ದಾರೆ. ಕಾರ್ಯಕ್ರಮದ ಮಾಹಿತಿಯ ಬಗ್ಗೆ ನಡೆದ ಚಿಕ್ಕ ಪತ್ರಿಕಾ ಸಭೆಯಲ್ಲಿ ಶೇಖ್ ಅಮೀನ್ ಉಪಸ್ಥಿತರಿದ್ದರು.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…