Categories: ಇತರೆ

ಫೆ. 11 ರಂದು ದುಬೈನಲ್ಲಿ ಮಂಜೇಶ್ವರದ ಅನಿವಾಸಿಗರ ಸಮ್ಮಿಲನ ಮೈಸರ್‌ಕಾರ್ ನ “ಗಮ್ಮತ್-2024”

ದುಬೈ : ಸಪ್ತ ಭಾಷೆ ಸಂಗಮ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರವು ವೈವಿಧ್ಯಮಯ ಭಾಷೆ ಸಾಹಿತ್ಯ ಸಾಂಸ್ಕೃತಿಕತೆಗೊಂದು ಕೈಹನ್ನಡಿಯಂತಿದೆ. ಅಲ್ಲಿನ ವಿವಿಧ ಭಾಷೆಗಳನ್ನಾಡುವ ವಿವಿಧ ಜಾತಿಯನ್ನೊಳಗೊಂಡ ಜನರಿದ್ದರೂ ಸದಾ ಸಹೋದರತ್ವದ ಸೌಹರ್ದತೆಯನ್ನು ಸಾರುವ ಆ. ಮಣ್ಣಿನ ಅನಿವಾಸಿಗರು ಉದ್ಯೋಗಕ್ಕಾಗಿ ಯುಎಇತಹ ಗಲ್ಫ್ ರಾಷ್ಟ್ರವನ್ನು ಅವಲಂಭಿಸಿದ್ದು ಇದೀಗ ಮಂಜೇಶ್ವರದ ಜನ ವೈವಿಧ್ಯತೆಯನ್ನು ಒಟ್ಟುಗೂಡಿಸಿಕೊಂಡು ಸಂಭ್ರಮಿಸಲು ಯುಎಇ ಯಲ್ಲಿ ಮೈಸರ್‌ಕಾರ್ ಎಂಬ ಬಳಗವನ್ನು ಕಟ್ಟಿಕೊಂಡು ವಿಭಿನ್ನವಾದ ಪ್ರಯತ್ನವನ್ನು ನಡೆಸಲಾಗಿದೆ.

ಇದರ ವಿಸೃತ ರೂಪವೇ ಫೆಬ್ರವರಿ 11 ರಂದು ಜರಗುವ ಸ್ನೇಹ ಸಮ್ಮಿಲನವಾದ “ಗಮ್ಮತ್ 2024” ಎಂಬ ಕಾರ್ಯಕ್ರಮ
ಎಂದು ಮೈಸರ್‌ಕಾರ್ ತಂಡದ ರೂವಾರಿ ಡಾ.ಅಬ್ದುಲ್ ರಹಮಾನ್‌ ಬಾವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.. ಅವರು ಮಾತನಾಡುತ್ತಾ ಕಳೆದ ಎರಡು ವರ್ಷ ಚಿಕ್ಕದಾಗಿ ಚೊಕ್ಕದಾಗಿ ಮೈಸರ್‌ಕಾರ್ ಗಮ್ಮತ್ ಎಂಬ ಕಾರ್ಯಕ್ರಮವನ್ನು ಅಯೊಜಿಸುತ್ತಾ ಮಂಜೇಶ್ಚರದ ಸ್ನೇಹ ಸೌಹರ್ದತೆಯನ್ನು ಕೊಲ್ಲಿ ರಾಷ್ಡ್ರದ ಜನತೆಯಲ್ಲೂ ಜತನವಾಗಿರಿಸಲಾಗಿದೆ. ಈ ವರ್ಷ ಯುಎಇಯ ಎಲ್ಲಾ ರಾಜ್ಯದಲ್ಲಿ ಇರುವ ಮಂಜೇಶ್ವರದವರನ್ನು ಒಟ್ಟುಗೂಡಿಸಿ “ಮೈಸರ್‌ಕಾರ್ ಗಮ್ಮತ್-2024” ಕಾರ್ಯಕ್ರಮಕ್ಕೆ ಯೋಜನೆ ಇರಿಸಿರುವುದರಿಂದ ಅಲ್ಲಿನ ವೈವಿಧ್ಯತೆ ಹಾಗೂ ಏಕತೆಯನ್ನು ಸಾಗರದಾಚೆಗೂ ವಿಸ್ತರಿಸಿ ಮಂಜೇಶ್ವರದ ಜನತೆಯ ಪರಂಪರೆಯನ್ನು ವಿಪುಲಗೊಳಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು. ಇದರ ಅಂಗವಾಗಿ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಮಂಜೇಶದವರದ ಜನತೆಯ ಮಹಾ ಸಮ್ಮೇಳನದ ಪ್ರತೀತಿಯಲ್ಲಿ ನಡೆಸಲಾಗುವ ಕಾರ್ಯಕ್ರಮದಲ್ಲಿ ಪ್ರೀತಿ ಬೋಜನದ ವ್ಯವಸ್ಥೆಯು ಮಾಡಲಾಗಿದೆ ಎಂದು ತಿಳಿಸಿದರು.

ಫೆಬ್ರವರಿ 11 ರಂದು ನಗರದ Peas Modern British school Rashidiya ದ ಸಭಾಂಗಣದಲ್ಲಿ ಸಂಜೆ ಮೂರರಿಂದ ರಾತ್ರಿ ಹತ್ತರ ವರೆಗೆ ಜರಗಲಿರುವ “ಮೈಸರ್‌ಕಾರ್ ಗಮ್ಮತ್-2024” ಕಾರ್ಯಕ್ರಮದಲ್ಲಿ ಕೇರಳದ ಖ್ಯಾತ ಗಾಯಕರಾದ ಹಮೀದ್ ಕಲಾಭವನ್ ತಂಡದವರಿಂದ ಸಂಗೀತ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮ ಒಪ್ಪನ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಜರಗಲಿದೆ. ಯುಎಇಯಲ್ಲಿ ಇರುವ ಮಂಜೇಶ್ವರದ ಅನಿವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದು ಈ ಸಂದರ್ಭದಲ್ಲಿ ಸಂಘಟಕರಲ್ಲಿ ಒರ್ವರಾದ ನ್ಯಾಯವಾದಿ ಇಬ್ರಾಹಿಂ ಖಲೀಲ್ ಕೋರಿದ್ದಾರೆ. ಕಾರ್ಯಕ್ರಮದ ಮಾಹಿತಿಯ ಬಗ್ಗೆ ನಡೆದ ಚಿಕ್ಕ ಪತ್ರಿಕಾ ಸಭೆಯಲ್ಲಿ ಶೇಖ್ ಅಮೀನ್ ಉಪಸ್ಥಿತರಿದ್ದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಉಡುಪಿ: ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ

ತುಳುನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಈ ನಾಡಿನ…

2 days ago

ಮಂಗಳೂರು: ಮಂಗಳೂರು ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ನಾರದ ಪುರಸ್ಕಾರ ಘೋಷಣೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿ ವಾಹಕ…

2 days ago

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಾಸರಗೋಡು ವರ್ಕಾಡಿ ಮೂಲದ ರೂಪಶ್ರೀ ವರ್ಕಾಡಿ…

3 days ago

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ…

3 days ago

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 25 ರೂಪಾಯಿ ಏರಿಕೆಯಾದರೂ,…

3 days ago

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ತುಮಕೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಹೈಡ್ರೋ ಗಾಂಜಾ…

3 days ago