Categories: ಇತರೆ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸಮಾಜ ಕಲ್ಯಾಣ ಸಹಾಯಧನ ಚೆಕ್ ವಿತರಣಾ ಕಾರ್ಯಕ್ರಮ

ಮಂಗಳೂರು:ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸಮಾಜ ಕಲ್ಯಾಣ ಸಹಾಯಧನ ಚೆಕ್ ವಿತರಣಾ ಕಾರ್ಯಕ್ರಮ ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಬಂಟರ ಮಾತೃ ಸಂಘದ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಮಂಗಳೂರು ಮೇಯರ್ ಸುಧೀರ್ ಕುಮಾರ್ ಶೆಟ್ಟಿ ಕಣ್ಣೂರು ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು, “ಕೈಯಲ್ಲಿ ಹಣ ಇಲ್ಲದೆ ಇದ್ದಾಗಲೂ ಸಾಲ ಮಾಡಿಯಾದರೂ ನಮ್ಮ ಸಮಾಜದ ಜನರ ಕಣ್ಣೀರು ಒರೆಸುವ ಸಂಘ ಇದ್ದರೆ ಅದು ಬಂಟರ ಸಂಘಗಳ ಒಕ್ಕೂಟ ಮಾತ್ರ. ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಸಮಾಜದ ನೊಂದವರ ಕಣ್ಣೀರು ಒರೆಸುವ ಈ ಕಾರ್ಯ ಶ್ರೇಷ್ಠವಾದದ್ದು. ಮನುಷ್ಯ ಜನ್ಮ ಯಾವಾಗಲು ದೊಡ್ಡದು ನಮ್ಮ ಜೀವನ ನಿಂತ ನೀರಾಗಬಾರದು ಸದಾ ಹರಿಯುತ್ತ ಚಲನಶೀಲವಾಗಿರಬೇಕು. ಹೃದಯ ಶ್ರೀಮಂತಿಕೆಯ ಗುಣ ಇಂದು ಐಕಳ ಹರೀಶ್ ಶೆಟ್ಟಿ ಅವರಲ್ಲಿದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರಿಗೆ ರಾಷ್ಟ್ರಮಟ್ಟದ ಶ್ರೇಷ್ಠ ಸಮ್ಮಾನ ಮುಂದಿನ ದಿನಗಳಲ್ಲಿ ಸಿಗುವಂತಾಗಲಿ. ಹುಟ್ಟಿ ಸಾಯುವ ನಮ್ಮ ನಾಲ್ಕು ದಿನಗಳ ಈ ಜೀವನದಲ್ಲಿ ನಾವು ಆಗಾಗ ತಿರುಗಿ ನೋಡುತ್ತಿರಬೇಕು. ಆಗ ನಮಗಿಂತ ಬಡವರು, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದವರು ಕಾಣಸಿಗುತ್ತಾರೆ. ಅವರಿಗಿಂತ ನಮ್ಮ ಜೀವನ ಚೆನ್ನಾಗಿದೆ ಎಂದುಕೊAಡರೆ ನಾವು ಖುಷಿಯಾಗಿರಲು ಸಾಧ್ಯ. ಬಡವರ ಸೇವೆಯನ್ನು ನಾವು ಮಾಡುತ್ತಾ ಬಂದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ನಾವು ಭೂಮಿ ಮೇಲಿರುವುದು ಬಾಡಿಗೆಗೆ ಬಂದAತೆ. ಇಲ್ಲಿನ ಯಾವುದೂ ನಮ್ಮದಲ್ಲ, ಆದರೆ ಇರುವವರೆಗೆ ಬಳಸಿಕೊಳ್ಳಬಹುದು ಅಷ್ಟೇ” ಎಂದರು.

ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, “ಮೇಯರ್ ಸುಧೀರ್ ಶೆಟ್ಟಿ ಅವರು ಸಜ್ಜನ ರಾಜಕಾರಣಿ. ಅವರನ್ನು ಇಂದಿನ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಸನ್ಮಾನಿಸಿರುವುದು ವಿಶೇಷವಾಗಿದೆ. ನಮ್ಮ ಒಕ್ಕೂಟದಿಂದ ಸಹಾಯಧನ ಪಡೆದವರಿಗೆಲ್ಲರನ್ನೂ ದೇವರು ಹರಸಲಿ. ಎಲ್ಲರಿಗೂ ಒಳಿತಾಗಲಿ. ನೊಂದವರ ಜೊತೆ ಎಂದಿಗೂ ನಾವಿದ್ದೇವೆ. ನಿಮ್ಮ ಕಣ್ಣೀರು ಒರೆಸುವುದು ನನ್ನಿಂದ ಒಬ್ಬನಿಂದ ಸಾಧ್ಯವಿಲ್ಲ. ಅದಕ್ಕೆ ದಾನಿಗಳ ನೆರವು ಬೇಕು. ಹೀಗಾಗಿ ಸಹಾಯಹಸ್ತ ಚಾಚುವ ದಾನಿಗಳು ನಿಜವಾದ ದೇವರು. ಅವರೆಲ್ಲರಿಗೂ ದೇವರು ಆಯುಷ್ಯ ಅರೋಗ್ಯ ಕೊಡಲಿ. ಸಮಾಜದಲ್ಲಿ ಜಾಗತಿಕ ಬಂಟರ ಸಂಘ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ನಿಮ್ಮೆಲ್ಲರ ಸೇವೆಯನ್ನು ಮಾಡುತ್ತದೆ. ನಮ್ಮ ಸಮಾಜ ಎಲ್ಲರನ್ನೂ ಪ್ರೀತಿಸುವ ಸಂಘಟನೆ. ಜನರನ್ನು ಜಾತಿಯ ಆಧಾರದಲ್ಲಿ ವಿಂಗಡಣೆ ಮಾಡದೇ ಅವರ ಸೇವೆ ನಿರಂತರವಾಗಿ ಮುಂದುವರಿಸಬೇಕು” ಎಂದರು.

ಕರ್ನಿರೆ ವಿಶ್ವನಾಥ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ “ಬಂಟ ಸಮಾಜದಲ್ಲಿಯೂ ಕಡು ಬಡತನದಿಂದ ದಿನದೂಡುತ್ತಿರುವ ಕುಟುಂಬಗಳಿವೆ. ದಿನದ ಒಂದು ಹೊತ್ತಿನ ಊಟಕ್ಕೂ ಪರದಾಡುವವರಿದ್ದಾರೆ. ಅವರನ್ನು ಕರೆದು ಸಮಸ್ಯೆ ಏನೆಂದು ತಿಳಿದು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಐಕಳ ಹರೀಶ್ ಶೆಟ್ಟಿ ಅವರು ಸಂಘಟನೆಯ ಅಧ್ಯಕ್ಷರಾಗುವ ವೇಳೆ 100 ಮನೆಗಳನ್ನು ಬಡ ಬಂಟ ಸಮಾಜಕ್ಕೆ ಕಟ್ಟಿಕೊಡುವುದಾಗಿ ಹೇಳಿದ್ದರು. ಆದರೆ ಇಂದು 350ರಷ್ಟು ಮನೆಗಳನ್ನು ಕಟ್ಟಿಕೊಡಲಾಗಿದೆ. ಇನ್ನೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ನಮ್ಮ ಬಂಟ ಸಮಾಜ ಅಭಿವೃದ್ಧಿಯಾಗಬೇಕು” ಎಂದರು.

ಸಭೆಯಲ್ಲಿ ಫಲಾನುಭವಿಗಳಿಗೆ ದತ್ತಿನಿಧಿಯನ್ನು ವಿತರಿಸಲಾಯಿತು. ಒಕ್ಕೂಟದ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಬಂಟ್ವಾಳ ಧನ್ಯವಾದ ಸಮರ್ಪಿಸಿದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಮೂಡುಬಿದಿರೆ: ಗರ್ಭಿಣಿ ದನಗಳ ಮೇಲೆ ಕತ್ತಿಯಿಂದ ಹ*ಲ್ಲೆ…..!

ನೆರೆಮನೆಯ ದನಗಳು ತನ್ನ ತೋಟಕ್ಕೆ ಬಂದು ಹಾನಿಗೊಳಿಸಿವೆ ಎಂಬ ಆಕ್ರೋಶದಿಂದ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನಗಳಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿ…

5 hours ago

ಮಂಗಳೂರು: ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ; ಮೂವರು ಆರೋಪಿಗಳ ಬಂಧನ..!

ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ…

5 hours ago

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ಆರೋಪ; ನೇತ್ರಾವತಿ ನದಿಯಲ್ಲಿ ಮರಳು ದಂಧೆ…!

ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿ, ಇವರ…

5 hours ago

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಕೂಲ್ ಬಸ್‌ಗಳು ಕಾನೂನು ಮತ್ತು ನಿಯಮಗಳನ್ನು ಪಾಲಿಸುತ್ತಿದೆಯಾ ಎಂಬ ಬಗ್ಗೆ…

11 hours ago

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿಯಿಂದ ಹಳೇ ಸೇತುವೆ ಕಡೆಗೆ ಸಾಗುವ ದಾರಿಯ…

11 hours ago

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಹೆಬ್ರಿ ಸಮೀಪದ ಹೊಸೂರು ಎಂಬಲ್ಲಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ಜೂಜಾಟ ನಡೆಯುತ್ತಿರುವ…

1 day ago