ಶ್ರೀ ಓಂಕಾರೇಶ್ವರ ಮಂದಿರ (ರಿ) ಓಂಕಾರೇಶ್ವರಿನಗರ 10ನೇ ತೋಕೂರು ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಶಿಲನ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಓಂಕಾರೇಶ್ವರಿ ಮಂದಿರದ ಅಧ್ಯಕ್ಷ ರಾದ ಶ್ರೀ ಸದಾಶಿವ ಕುಂದರ್ ರವರು ಶಿಲಾನ್ಯಾಸವನ್ನು ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಅರ್ಚಕರಾದ ಕೃಷ್ಣ ಕುಮಾರ್, ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕುಸುಮ ಚಂದ್ರಶೇಖರ್, ವಿಶ್ವಬ್ಯಾಂಕ್ ಕುಡಿಯುವ ನೀರು ಮತ್ತು ಪರಿಸರ ನೈರ್ಮಲ್ಯ ಸಮಿತಿ ಅಧ್ಯಕ್ಷರಾರ ದಿನಕರ್ ಸಾಲ್ಯಾನ್, ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ಅಧ್ಯಕ್ಷರಾದ ಸದಾಶಿವ ಕುಂದರ್, ಫೇಮಸ್ ಯೂತ್ ಕ್ಲಬ್ ನ ಅಧ್ಯಕ್ಷರಾದ ಭಾಸ್ಕರ್ ಅಮೀನ್ ತೋಕೂರು, ವಿಜಯ್ ಬಿ.ಆರ್ , ಸ್ಥಳೀಯ ಮುಖಂಡರಾದ ಧರ್ಮಾನಂದ ಶೆಟ್ಟಿಗಾರ್, ಗೋಪಾಲಕೃಷ್ಣ ಸಾಲ್ಯಾನ್, ಸೀತಾರಾಮ ಸಾಲ್ಯಾನ್, ವಾಸು ಅಂಚನ್, ಗೌರೀಶ್ ಸಾಲ್ಯಾನ್ ಶಂಕರ್ ಸಾಲ್ಯಾನ್ ಓಂಕಾರೇಶ್ವರಿ ಮಂದಿರದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



