ಉಡುಪಿ: ಬಹ್ಮಗಿರಿಯಿಂದ ನಾಯರ್ ಕೆರೆ ಮೂಲಕ ಹಾದುಹೋಗುವ ಮುಖ್ಯ ರಸ್ತೆಯಲ್ಲಿ ಜಿಲ್ಲಾಧಿಕಾರಿ ನಿವಾಸಕ್ಕೆ ಹೋಗುವ ತಿರುವಿನಲ್ಲಿ ಕುಡಿಯುವ ನೀರಿನ ಕೊಳವೆ ಹೊಡೆದು ಹೋಗಿದ್ದು, ಕೆಲವು ದಿನಗಳಿಂದ ಕುಡಿಯುವ ನೀರು ರಸ್ತೆಯಲ್ಲಿ ಹರಿದು ಚರಂಡಿ ಸೇರುತ್ತಿದೆ.

ಈಗಾಗಲೇ ನಗರದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದೆ. ತಕ್ಷಣ ನಗರಸಭೆ ಅಧಿಕಾರಿಗಳು ನೀರಿನ ಕೊಳವೆ ದುರಸ್ತಿಪಡಿಸಬೇಕೆಂದು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಆಗ್ರಹಿಸಿದ್ದಾರೆ.



