ಕಡಬ ಬರ್ಕತುಲ್ ಇಸ್ಲಾಂ ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿಯಲ್ಲಿ ಫೆ. 2 ರಿಂದ 4 ರ ತನಕ ೩ ದಿನಗಳ ಉರೂಸ್ ಹಾಗೂ ಕಡಬ ತಾಲೂಕಿನ ವಿವಿಧ ಮಸೀದಿಗಳ ಸಹಕಾರದೊಂದಿಗೆ ಸೌಹಾರ್ದ ಸಮ್ಮೇಳನವು ನಡೆಯಲಿದೆ ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಅವರು ತಿಳಿಸಿದ್ದಾರೆ.
ಅವರು ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಫೆ. ೨ ರಂದು ಮಧ್ಯಾಹ್ನ ೨ ಘಂಟೆಗೆ ಜಾವಗಲ್‌ನ ಜಾವಗಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಇಸಾಕ್ ಸಾಹೇಬ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಕಡಬ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಅಲ್ಪಸಂಖ್ಕಾರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್‌ಅವರು ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ. ಮರ್ದಾಳದ ಸಯ್ಯದ್ ಹಬೀಬುಲ್ಲಾ ತಂಙಳ್ ದುವಾಶೀರ್ವಚನ ನೆರವೇರಿಸಲಿದ್ದಾರೆ. ಅಡ್ಡಗದ್ದೆ ಹನಫಿ ಜುಮಾ ಮಸೀದಿಯ ಇಮಾಮ್ ಹಝ್ರತ್ ಮೌಲಾನಾ ಫಯಾಝುಲ್‌ಖಾದ್ರಿ ಅವರು ಉದ್ಘಾಟನ ಭಾಷಣ ಮಾಡಲಿದ್ದಾರೆ. ಕೇರಳದ ಕುಟ್ಯಾಡಿ ರಾಶಿದ್ ಬುಖಾರಿ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಕಡಬ ಕೇಂದ್ರ ಜುಮಾ ಮಸೀದಿಯ ಖತೀಮ್ ಅಬ್ದುಲ್‌ರಶೀದ್ ಸಹದಿ ಹಾಗೂ ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷ ಆದಂ ಕುಂಡೋಳಿ ಉಪಸ್ಥಿತರಿರುತ್ತಾರೆ. ೩ ರಂದು ರಾತ್ರಿ ೮ ರಿಂದ ನಡೆಯುವ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ವಹಿಸಲಿದ್ದು, ಕರ್ನಾಟಕ ಮುಸ್ಲಿಂ ಜಮಾತ್‌ನ ಅಧ್ಯಕ್ಷ ಡಾ|ಮಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ದುವಾಶೀರ್ವಚನ ನೆರವೇರಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ವಿಧಾನ ಸಭಾ ಸಭಾಪತಿ ಯು.ಟಿ.ಖಾದರ್, ಪ್ರಮುಖರಾದ ಕೆ.ಎಂ.ಮುಸ್ತಫಾ, ಹಮಿದ್ ಕುತ್ತಮೊಟ್ಟೆ, ಎಸ್.ಶಂಶುದ್ದೀನ್, ಎಚ್.ಎ.ಆದಂ ಅವರು ಆಗಮಿಸಲಿದ್ದು, ಕೇರಳದ ಲದಲ್ ಹಬೀಬಿ ಬುರ್ದಾ ಇಕ್ವಾಲ್ ಮಲಪ್ಪುರಂ ನೇತೃತ್ವದಲ್ಲಿ ಹಝ್ರತ್ ರಝ ಖಾದಿರಿ ಬಿಜಾಪುರ ಹಾಗೂ ಮಹಮ್ಮದ್ ನಬೀರ್ ರಝ ಬರಕತಿ ಬೆಂಗಳೂರು ತಂಡದ ಸದಸ್ಯರು ಬುರ್ದಾ ಮಜ್ಲಿಸ್ ನಡೆಸಿಕೊಡಲಿದ್ದಾರೆ. ೪ ರಂದು ಸಂಜೆ ೬.೩೦ ರಿಂದ ನಡೆಯುವ ಸೌಹಾರ್ದ ಸಮ್ಮೇಳನದ ಸಲುವಾಗಿ ಕಡಬದಿಂದ ಕೇಂದ್ರ ಜುಮಾ ಮಸೀದಿ ತನಕ ಮೆರವಣಿಗೆ ನಡೆಯಲಿದೆ. ಕಡಬ ಕೇಂದ್ರ ರಹ್ಮಾನಿಯ ಟೌನ್ ಜುಮಾ ಮಸೀದಿಯ ಖತೀಬ್ ಹಾಜಿ ಇಬ್ರಾಹಿಂ ದಾರಿಮಿ ದುವಾಶೀರ್ವಚನದ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಯ್ಯದ್ ಮೀರಾ ಸಾಹೇಬ್ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಅತಿಥಿಗಳಾಗಿ ಸಚಿವ ಜಮೀರ್ ಅಹ್ಮದ್, ಪ್ರಮುಖರಾದ ಡಾ|ಎ.ಜೆ.ಆಕ್ರಂ ಭಾಷ, ಸಯ್ಯದ್ ಹಮೀದ್ ತಂಙಳ್ ಮರ್ದಾಳ, ಇಕ್ಬಾಲ್ ಎಲಿಮಲೆ, ಡಾ|ಸಯ್ಯದ್‌ನಝೀರ್ ಸಾಹೇಬ್, ಅಬ್ದುಲ್ ಲತೀಫ್ ಹರ್ಲಡ್ಕ, ಜಲೀಲ್ ಬೈತಡ್ಕ ಮುಂತಾದವರು ಆಗಮಿಸಲಿದ್ದಾರೆ. ಕೇರಳದ ಮಶ್‌ಹೂರ್ ಮಲಕ್ಕೋಯ ತಂಙಳ್ ಪ್ರಧಾನ ಭಾಷಣ ಮಾಡಲಿದ್ದು, ಕೇರಳದ ಇಬ್ರಾಹಿಂ ಖಲೀಲುಲ್ ಬುಖಾರಿ ದುವಾಃ ನೆರವೇರಿಸಲಿದ್ದಾರೆ ಎಂದು ಮೀರಾ ಸಾಹೇಬ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಮಸೀದಿಯ ಮಹಮ್ಮದ್ ಶರೀಫ್ ಕೇಪು, ಉಪಾಧ್ಯಕ್ಷ ಆದಂ ಕುಂಡೋಳಿ, ಕಾರ್ಯದರ್ಶಿ ಫೈಝಲ್ ಎಸ್.ಇ.ಎಸ್., ಕೋಶಾಧಿಕಾರಿ ಇಕ್ಬಾಲ್ ಉಪಸ್ಥಿತರಿದ್ದರು.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…