ದಕ್ಷಿಣ ಕನ್ನಡ : ಹೋಟೆಲ್ ಉದ್ಯಮಿ ಕೃಷ್ಣ ಭಟ್ ತಿರುಪತಿ ಇವರು ಅಲ್ಪ ಕಾಲದ ಅನಾರೋಗ್ಯದಿಂದ ಚೆನ್ನೈ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಾವರಾಗಿದ್ದು, ಕರಾಡ ಬ್ರಾಹ್ಮಣ ಸಮಾಜದವರಾಗಿದ್ದು, ಹಲವಾರು ವರ್ಷಗಳ ಹಿಂದೆ ತಿರುಪತಿಗೆ ತೆರಳಿ ಅಲ್ಲಿ ಹೋಟೆಲ್ ಉದ್ಯಮವನ್ನು ಆರಂಭಿಸಿ, ಪ್ರಸ್ತುತ ಯಶಸ್ವಿ ಉದ್ಯಮಿ ಎನಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಉದ್ಯೋಗದಾತರಾಗಿದ್ದರು.


ಕರ್ನಾಟಕದಿಂದ ತಿರುಪತಿಗೆ ತೆರಳುವ ಅದೆಷ್ಟೋ ಯಾತ್ರಿಕರಿಗೆ ಮಾರ್ಗದರ್ಶನ ಸಹಕಾರ ಹಾಗೂ ವ್ಯವಸ್ತೆ ಮಾಡಿ ಎಲ್ಲರಲ್ಲೂ ತಿರುಪತಿ ಕೃಷ್ಣಣ್ಣ ಎನಿಸಿಕೊಂಡಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ನೀಡಿ ಉಡುಗೈದಾನಿ ಎನಿಸಿಕೊಂಡಿದ್ದರು. ಸುಮಾರು 74 ವರ್ಷ ಪ್ರಾಯದ ಕೃಷ್ಣ ಭಟ್ ತಿರುಮಲ ಇವರು ಪತ್ನಿ ಹಾಗೂ ಎರಡು ಮಕ್ಕಳ ಕುಟುಂಬದ ತುಂಬು ಕುಟುಂಬದವರಾಗಿದ್ದು, ಅವಿಭಜಿತ ದಕ್ಷಿಣ ಕನ್ನಡದ ಕರಾಡ ಬ್ರಾಹ್ಮಣ ಸಮಾಜದ ಸಹಿತ ಕರ್ನಾಟಕ ಹಾಗೂ ಆಂಧ್ರದಲ್ಲಿ ಅಪಾರ ಸಂಖ್ಯೆಯ ಪ್ರೀತಿಪಾತ್ರರನ್ನು ಹೊಂದಿದ್ದರು.



