ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿರುವ ಪಿಡಬ್ಲುಡಿ ಇಇ ಹರ್ಷ ಹಾಗೂ ಅವರ ಮಾವ ಕಷ್ಣೇಗೌಡರ ಮನೆಗೆ ಲೋಕಾಯುಕ್ತ ಆಧಿಕಾರಿಗಳು ದಾಳಿ ನಡೆಸಿ ದೊಡ್ಡ ಪ್ರಮಾಣದ ಚಿನ್ನಾಭರಣ, ನಗದನ್ನು ವಶಕ್ಕೆ ಪಡೆದಿದ್ದಾರೆ. 350 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ, 1.5 ಲಕ್ಷ ನಗದು ಸೀಜ್ ಮಾಡಲಾಗಿದೆ. ಇದೇ ವೇಳೆ 20 ವಿದೇಶಿ ನೋಟು ಪತ್ತೆಯಾಗಿದೆ.

ಅಕ್ರಮ ಆಸ್ತಿ ಹಿನ್ನೆಲೆ ಹರ್ಷ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹರ್ಷ ಅವರ ಮಾವ ಕಷ್ಣೇಗೌಡ ಮನೆಯಲ್ಲಿ ದಾಖಲೆ ಇಲ್ಲದ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಪತ್ತೆಯಾಗಿದೆ.

ಈ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಮಂಡ್ಯದ ಪಿಡಬ್ಲುಡಿ ಕಚೇರಿ, ಕ್ವಾಟರ್ಸ್, ಮಂಡ್ಯದ ಕಲ್ಲಹಳ್ಳಿಯಲ್ಲಿರುವ ತಂದೆ ಮನೆ, ಬೆಂಗಳೂರಿನ ನಿವಾಸ ಸೇರಿ 6 ಕಡೆ ಒಂದೇ ಸಮಯದಲ್ಲಿ ದಾಳಿ ನಡೆಸಿದ್ದಾರೆ.



