ಜನ ಮನದ ನಾಡಿ ಮಿಡಿತ

Advertisement

ನವ ವಿವಾಹಿತೆಯೊಬ್ಬರು ನೇಣುಬಿಗಿದು ಆತ್ಮಹತ್ಯೆ

ಪುತ್ತೂರು: ನವ ವಿವಾಹಿತೆಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ 4 ರಂದು ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ  ಕುರಿಯದಲ್ಲಿ ನಡೆದಿದೆ.  ಕುರಿಯ ಗ್ರಾಮದ ಗಡಾಜೆ ರೋಹಿತ್ ಎಂಬವರ ಪತ್ನಿ ಶೋಭಾ(24ವ.) ಆತ್ಮಹತ್ಯೆಗೆ ಶರಣಾದವರು . ಈಕೆಯ ವಿವಾಹ ಒಂದೂವರೆ ತಿಂಗಳ ಹಿಂದೆಯಷ್ಟೇ ನಡೆದಿತ್ತು. ಕಳೆದ ಡಿ.21ರಂದು ರೋಹಿತ್‌ ಹಾಗೂ ಶೋಭಾ ವಿವಾಹ ನಡೆದಿತ್ತು.

ಶೋಭಾ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಕ್ಕಾಜೆ ರಾಮಣ್ಣ ಗೌಡ ಮತ್ತು ಪುಷ್ಪ ದಂಪತಿ ಪುತ್ರಿ. ಅವರ ಪತಿ ರೋಹಿತ್ ಅವರು ಪುತ್ತೂರು ಎಪಿಎಂಸಿ ರಸ್ತೆಯಲ್ಲಿ ಬ್ಯಾಟರಿ, ಇನ್ವರ್ಟರ್ ಮಳಿಗೆಯೊಂದನ್ನು ಹೊಂದಿದ್ದಾರೆ. ಫೆ.4ರಂದು ರೋಹಿತ್ ಅವರ ಮನೆಯ ಮೇಲ್ಛಾವಣಿ (ಅಟ್ಟ) ಯಲ್ಲಿ ಶೋಭಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಶೋಭಾ ಅವರ ಅಕ್ಕ ಬೆಳಂದೂರು ಗ್ರಾಮದ ಕುದ್ದಾರು ನಯನ ಎಂಬವರು ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. 174(3)(i), 174(3)(iv) CRPC ಯಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಅಸಹಜ ಸಾವಿನ ತನಿಖೆ ನಡೆಸುತ್ತಿದ್ದಾರೆ.

ರೋಹಿತ್‌ ಅವರದು ಕೂಡು ಕುಟುಂಬ.  ತಂದೆ, ತಾಯಿ ಮತ್ತು ಇಬ್ಬರು ಅಣ್ಣಂದಿರು,  ಅತ್ತಿಗೆಯಂದಿರ ಜತೆ ರೋಹಿತ್ ದಂಪತಿಗಳು ವಾಸಿಸುತ್ತಿದ್ದರು. ಆದರೇ ಘಟನೆ ನಡೆದ ಫೆ 4 ರಂದು ಬೆಳಿಗ್ಗೆ ಗಡಾಜೆ ಮನೆಯಲ್ಲಿ ಶೋಭಾ ಮತ್ತವರ ಅತ್ತೆ ಪಾರ್ವತಿಯವರು ಮಾತ್ರ ಇದ್ದರು ಎನ್ನಲಾಗಿದೆ. ಅಂದು ಬೆಳಿಗ್ಗೆ ಶೋಭಾ ಫೋನಿಗೆ ಕರೆಯೊಂದು ಬಂದಿದ್ದು, ಆಕೆ ಕರೆ ಸ್ವೀಕರಿಸಲು ಬಾರದಿದ್ದಾಗ ಅತ್ತೆ ಪಾರ್ವತಿ ಸೊಸೆಗಾಗಿ ಹುಡುಕಾಡಿದ್ದಾರೆ. ಮನೆಯೊಳಗಡೆ ಅಥಾವ ಸುತ್ತಾಮುತ್ತಾ ಎಲ್ಲಿಯೂ ಕಾಣಿಸದಿದ್ದಾಗ   ಮನೆಯ ಅಟ್ಟಕ್ಕೆ ಹೋಗಿ ನೋಡಿದ್ದು,  ಅಲ್ಲಿ ಶೋಭಾರವರು ನೇಣು ಬಿಗಿದುಕೊಂಡಿರುವುದು ಕಾಣಿಸಿದೆ. ತಕ್ಷಣ ಅವರನ್ನು ಆಸ್ಫತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕೃತ್ಯ ನಡೆದ ದಿನ   ವಿಠಲ ಶೆಟ್ಟಿ ಎಂಬವರ ಮನೆಯಲ್ಲಿ ನಾಗತಂಬಿಲ ಕಾರ್ಯಕ್ರಮವಿದ್ದು ರೋಹಿತ್ ಮತ್ತವರ ತಂದೆ ಪುರುಷೋತ್ತಮ ಗೌಡರು ಅದರಲ್ಲಿ ಭಾಗವಹಿಸಲು  ಹೋಗಿದ್ದರು ಎನ್ನಲಾಗಿದೆ. ರೋಹಿತ್ ಅವರ ಅಣ್ಣಂದಿರು ಮತ್ತು ಅತ್ತಿಗೆಯಂದಿರು ಅತ್ತಿಗೆಯಂದಿರ ಮನೆಗೆ ಹೋಗಿದ್ದರು. ಹೀಗಾಗಿ ಶೋಭಾರವರು ಆತ್ಮಹತ್ಯೆಗೆ ಶರಣಾದ ವೇಳೆ ಮನೆಯಲ್ಲಿ ಅತ್ತೆ ಹೊರತು ಯಾರು ಇರಲಿಲ್ಲ ಎಂದು ತಿಳಿದು ಬಂದಿದೆ.

ಕುರಿಯ ಗ್ರಾಮದ ರೋಹಿತ್ ಎಂಬವರೊಂದಿಗೆ ಮದುವೆ ‘ತಂಗಿ ಶೋಭಾಳ ವಿವಾಹ    ದಿನಾಂಕ 21/12/2023ರಂದು ನಡೆದಿತ್ತು.  ತಂಗಿಯು ಗಂಡನ ಮನೆಯಲ್ಲಿ ಎಲ್ಲರೊಂದಿಗೆ ಒಟ್ಟಾಗಿ ವಾಸವಾಗಿದ್ದರು. ಫೆ.04ರಂದು ತನ್ನ ಸ್ನೇಹಿತೆ ಶಾರದಾರವರು ಬೆಳಿಗ್ಗೆ ಫೋನ್ ಕರೆ ಮಾಡಿ, ನಿಮ್ಮ ತಂಗಿ ಶೋಭಾ ಅವರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದರು.ಕೂಡಲೇ ನಾನು ಪುತ್ತೂರು ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಬಂದು ನೋಡಿದಾಗ, ತಂಗಿ ಶೋಭಾರವರು ಗಂಡನ ಮನೆಯಲ್ಲಿ ಬೆಳಿಗ್ಗೆ ನೇಣು ಹಾಕಿ  ಆತ್ಮಹತ್ಯೆ ಮಾಡಿಕೊಂಡಿದ್ದು,   ಮನೆಯವರು ವಿಷಯ ತಿಳಿದು ಆಕೆಯನ್ನು  ಕೆಳಗೆ ಇಳಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.  ಅಲ್ಲಿ ಆಕೆ ಮೃತಪಟ್ಟಿರುವುದನ್ನು ವೈದ್ಯರು ಖಚಿತ ಪಡಿಸಿರುವುದಾಗಿ ಮೃತರ ಅಕ್ಕ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

error: Content is protected !!