ಕರ್ನಾಟಕ ರಾಜ್ಯ ಗೃಹರಕ್ಷಕ ದಳ ಮತ್ತು ಪೌರ ರಕ್ಷಣಾ ಅಕಾಡೆಮಿ ಬೆಂಗಳೂರು ನಲ್ಲಿ ನಡೆದ ಲಘು ಮತ್ತು ಪ್ರವಾಹ ರಕ್ಷಣಾ ವಾರ್ಷಿಕ ತರಬೇತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಘಟಕದ ಕೇಶವ ಎಸ್ ರವರು ಚಿನ್ನದ ಪದಕವನ್ನು ಪಡೆದೆಕೊಂಡಿರುತ್ತಾರೆ .

ಇವರು ಪುತ್ತೂರು ನಗರ ,ಸಂಚಾರ, ಪುತ್ತೂರು ಗ್ರಾಮಾಂತರ, ಕಡಬ, ಉಪ್ಪಿನಂಗಡಿ,ಠಾಣೆಗಳಲ್ಲಿ ಸೇವೆಯನ್ನು ಸಲ್ಲಿಸಿ ಪ್ರಸ್ತುತ ಪುತ್ತೂರು ಸಂಚಾರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಇವರ ಸೇವೆಯನ್ನು ಗುರುತಿಸಿ ಪೊಲೀಸು ಉಪ ಮಹಾ ನಿರ್ದೇಶಕರಾದ ರವಿ ಡಿ ಚೆನ್ನಣ್ಣನವರ್ ಸ್ವಾಗತಿಸಿದರು. ಪುತ್ತೂರು ಘಟಕದ ಗೃಹರಕ್ಷಕ ಸಿಬ್ಬಂದಿಯಾದ ಇವರು 2016ನೇ ಇಸವಿಯಲ್ಲಿ ಇಲಾಖೆಗೆ ಸೇರಿ ಸುಮಾರು ಎಂಟು ವರ್ಷಗಳ ಕಾಲ ನಿಷ್ಠಾವಂತ ಸೇವೆಯನ್ನು ಸಲ್ಲಿಸಿರುತ್ತಾರೆ. ಗ್ರಾ.ಪಂ ತಾ. ಪಂ ಜಿ.ಪಂ ವಿಧಾನಸಭೆ ಲೋಕಸಬಾ ಚುನಾವಣೆ ತಮಿಳುನಾಡು ಕೇರಳ ರಾಜ್ಯಗಳ ಚುನಾವಣಾ ಕರ್ತವ್ಯ ನಿರ್ವಹಿಸಿರುವ ಇವರು ಸುದ್ದಿ ಆನ್ಲೈನ್ ವೋಟಿಂಗ್ ಮೂಲಕ ಜನರೇ ಗುರುತಿಸುವ ಸುದ್ದಿ ಅಭಿಯಾನದಲ್ಲಿ ಪ್ರಥಮ ಸ್ಥಾನ ಪಡೆದು ಜನರ ಪ್ರೀತಿಗೂ ಪಾತ್ರರಾಗಿದ್ದಾರೆ. ಮೂಲತಃ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಜನಿಸಿ ಪ್ರಸ್ತುತ ನರಿಮೊಗರು ಕಾಳಿಂಗ ಹೀತ್ಲು ನಿವಾಸಿಯಾಗಿರುವ ಕೇಶವ. ಎಸ್ ರವರು ತಂದೆ ಶಿವಜ್ಞಾನ, ತಾಯಿ ಚಿತ್ರಕಲಾ, ಅಣ್ಣ ಸತೀಶ ರವರ ಜೊತೆ ವಾಸ್ತವ್ಯವನ್ನು ಹೊಂದಿದ್ದಾರೆ.



