ಜನ ಮನದ ನಾಡಿ ಮಿಡಿತ

Advertisement

ಪುತ್ತಿಗೆ ಪರ್ಯಾಯದ ಕೋಟಿ ಗೀತಾ ಲೇಖನ ಯಜ್ಞ ಕಾರ್ಯಕ್ರಮ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಆಹ್ವಾನ

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಚತುರ್ಥ ಕೃಷ್ಣಪೂಜಾ ಪರ್ಯಾಯದ ಅವಧಿಯಲ್ಲಿ ಸಂಕಲ್ಪಿಸಿರುವ ಕೋಟಿ ಗೀತಾ ಲೇಖನ ಯಜ್ಞದ ಮೊದಲ ಹಂತದಲ್ಲಿ ನಡೆಯುವ ಲಕ್ಷ ಗೀತಾ ಲೇಖನಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಉತ್ತರಪ್ರದೇಶ ಮುಖ್ಯ ಮಂತ್ರಿಯೋಗಿ ಆದಿತ್ಯನಾಥ್ ಅವರಿಗೆ ಆಹ್ವಾನ ನೀಡಲಾಯಿತು.


ಪುತ್ತಿಗೆ ಶ್ರೀಗಳ ಸೂಚನೆಯಂತೆ ಪರ್ಯಾಯ ಸಮಿತಿ ಕಾರ್ಯಾಧ್ಯಕ್ಷ ಮಾಜಿ ಶಾಸಕ ಕೆ ರಘುಪತಿ ಭಟ್ ಅವರು ಮಂಗಳವಾರ ಲಕ್ನೋದಲ್ಲಿ ಸಿಎಂ ಯೋಗಿ ಅವರನ್ನು ಭೇಟಿ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಿದರು.


ಈ ಸಂದರ್ಭದಲ್ಲಿ ಸಿಎಂ ಯೋಗಿ ಅವರು ಶ್ರೀಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕೋಟಿಗೀತಾ ಲೇಖನ ಯಜ್ಞವನ್ನು ಮುಕ್ತವಾಗಿ ಪ್ರಶಂಸಿಸಿ ತಮ್ಮನ್ನು ಆಹ್ವಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಪೇಜಾವರ ಶ್ರೀಗಳ ಆಪ್ತರಾದ ವಾಸುದೇವ ಭಟ್ ಪೆರಂಪಳ್ಳಿ , ಬಿಜೆಪಿ ಪ್ರಮುಖರಾದ ಮಹೇಶ್ ಠಾಕೂರ್ , ಸುವರ್ಧನ್ ನಾಯಕ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

ಪರ್ತಿಪ್ಪಾಡಿ: ಕಾರು ಡಿಕ್ಕಿ ಪ್ರಗತಿ ಸ್ವೀಟ್ಸ್ನ ಮಾಲಿಕ ಜಗನ್ನಾಥ ಶೆಟ್ಟಿಗಾರ್ ಗಂ#*ಭೀರ…!!

ಕಡಬ: ಜೀಪು ಪಲ್ಟಿಯಾಗಿ ಕೃಷಿಕರೋರ್ವರು ಮೃ..#ತ್ಯು..!; ಕಡಬ ತಾಲೂಕಿನ ಬಿಳಿನೆಲೆ ಗ್ರಾಮದಲ್ಲಿ ಘಟನೆ

ಪಾಣೆಮಂಗಳೂರು: ದ್ವಿಚಕ್ರ ವಾಹನಕ್ಕೆ ಕೆ.ಎನ್.ಆರ್.ಸಿ.ಕಂಪೆನಿಯ ಲಾರಿ ಢಿ..#ಕ್ಕಿ…!!

ಕಾರ್ಕಳ: 4ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು; ಮೂವರು ಆರೋಪಿಗಳ ಬಂಧನ

ಕಟೀಲು: ಆ.9ರಂದು ಯಕ್ಷ ವೇಷಭೂಷಣ ಉದ್ಘಾಟನೆ, ಯಕ್ಷಗಾನ; ಮಯೂರ ಪ್ರತಿಷ್ಠಾನ ಮಂಗಳೂರು: ಮಯೂರ ಯಾನ -1

ಬಂಟ್ವಾಳ: ಅಕ್ರಮವಾಗಿ ಕೇರಳ ರಾಜ್ಯದಿಂದ ದ.ಕ.ಜಿಲ್ಲೆಗೆ ಕೆಂಪು ಕಲ್ಲು ಸಾಗಾಟ

ಕೊಟ್ಟಿಗೆ ಚಿರತೆಗಳು ನುಗ್ಗಿದ್ದು, ಸಿಕ್ಕ ಸಿಕ್ಕ ಕುರಿಗಳ ಮೇಲೆ ದಾಳಿ

ಬ್ರಹ್ಮಾವರ: ಅಂತರ್‌ರಾಜ್ಯ ಕಳ್ಳ ಸಂತೋಷ್ ಹನುಮಂತ ಕಟ್ಟಿಮನಿ ಬಂಧನ

ಡಿ.ಕೆ. ಶಿವಕುಮಾರ್, ರವರ ಭಾಷಣಕ್ಕೆ ಸ್ಪಷ್ಟನೆ ಬೇಕಿದ್ದವರು ಕೆಪಿಸಿಸಿ ಕಚೇರಿಗೆ ಬರಲಿ: ಯೋಗೀಶ್ ಆಚಾರ್ಯ ಇನ್ನಾ

error: Content is protected !!