ದಕ್ಷಿಣ ಕನ್ನಡ : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಮೂಡಬಿದ್ರೆ ತಾಲೂಕು ಘಟಕದ ನೂತನ ಸದಸ್ಯರ ಪದಗ್ರಹಣ ಸಮಾರಂಭ ಮತ್ತು ಜಾನಪದ ಸಂಭ್ರಮ ಕಾರ್ಯಕ್ರಮವು ಮೂಡಬಿದ್ರೆ ಸಮಾಜ ಮಂದಿರದಲ್ಲಿ ಫೆ.10ರಂದು ಮಧ್ಯಾಹ್ನ 2 ಗಂಟೆ ಬಳಿಕ ಹಮ್ಮಿಕೊಳ್ಳಲಾಗಿದೆ ಎಂದು ಜಾನಪದ ಪರಿಷತ್ತು ಮೂಡಬಿದ್ರೆ ತಾಲೂಕು ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.
ಜಾನಪದ ಪರಿಷತ್ತು ಮೂಡಬಿದ್ರೆ ತಾಲೂಕು ಘಟಕ,ತುಳುಕೂಟ ಮೂಡಬಿದರೆ, ತುಳು ವರ್ಲ್ಡ್ ಮಂಗಳೂರು, ಇದರ ಸಂಯುಕ್ತ ಆಶ್ರಯದಲ್ಲಿ “ತುಳುನಾಡ ಕೆಡ್ಡಸ ಆಚರಣೆ” ಹಾಗೂ “ಜಾನಪದ ಸಂಭ್ರಮ” ಮತ್ತು ನೂತನ ಸದಸ್ಯರ ಪದಗ್ರಹಣ ಸಮಾರಂಭ ನಡೆಯಲಿದ್ದು, ತುಳುನಾಡ ಕೆಡ್ಡಸ ಆಚರಣೆ ಪ್ರಾತ್ಯಕ್ಷಿಕೆಯನ್ನು ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಶ್ರೀನಿವಾಸ ಆಳ್ವ, ಕಳತ್ತೂರು, ಆಗಮಿಸಲಿದ್ದು ತುಳು ಸಾಹಿತಿ ಉಗ್ಗಪ್ಪ ಪೂಜಾರಿಯವರು ಉಪಸ್ಥಿತರಿರುವರು ಕಾರ್ಯಕ್ರಮ ನಿರ್ವಹಣೆಯನ್ನು ಡಾ. ನಾಗರಾಜ್ ಶೆಟ್ಟಿ ಅಂಬೂರಿ ಹಾಗೂ ಅಭಿಷೇಕ್ ಶೆಟ್ಟಿ ಐಕಳ ಇವರು ನಡೆಸಲಿದ್ದಾರೆ.
ಜಾನಪದ ಸಂಭ್ರಮದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತ ಭೂಷಣ ಡಾಕ್ಟರ್ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಜೈನ ಮಠ ಮೂಡಬಿದ್ರೆ ಇವರು ನೆರವೇರಿಸಲಿದ್ದು, ಸಭಾಧ್ಯಕ್ಷತೆಯನ್ನು ಪದ್ಮಶ್ರೀ ಭಟ್ ಅಧ್ಯಕ್ಷರು ಕರ್ನಾಟಕ ಜಾನಪದ ಪರಿಷತ್ತು ಮೂಡಬಿದ್ರೆ ತಾಲೂಕು ಘಟಕ, ಮುಖ್ಯ ಅತಿಥಿಗಳಾಗಿ ಡಾ. ಮೋಹನ ಆಳ್ವ, ಆಳ್ವಾಸ್ ಪ್ರತಿಷ್ಠಾನ,, ಅಭಯ ಚಂದ್ರ ಜೈನ್ , ಮಾಜಿ ಸಚಿವರು,, ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ , ಅಧ್ಯಕ್ಷರು ಜಾನಪದ ಪರಿಷತ್ ದಕ್ಷಿಣ ಕನ್ನಡ,,
ಶ್ರೀಪತಿ ಭಟ್, ಧನ ಕೀರ್ತಿ ಬಲಿಪ, ಡಾಕ್ಟರ್ ರಾಜೇಶ ಆಳ್ವ, ಚಂದ್ರಹಾಸ ದೇವಾಡಿಗ, ಡಾಕ್ಟರ್ ರಾಜೇಶ್ ಭಟ್ ಮಂದಾರ, ರಾಜೇಶ್ ಸ್ಕೈಲಾರ್ಕ್, ಇವರ ಗೌರವ ಉಪಸ್ಥಿತಿ ಇರಲಿದೆ ಹಾಗೂ ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ಚೇತನ ರಾಜೇಂದ್ರ ಹೆಗ್ಡೆ ಮಾಡಲಿದ್ದಾರೆ ಎಂದು ಆಮಂತ್ರಣ ಪತ್ರದ ಪ್ರಕಟಣೆಯಲ್ಲಿ ಸಂಘಟಕರು ತಿಳಿಸಿರುತ್ತಾರೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…