ಜನ ಮನದ ನಾಡಿ ಮಿಡಿತ

Advertisement

ಉತ್ತಮ ಜೀವನ ನಡೆಸಲು ಆಚಾರ, ನಿಷ್ಠೆ ಬಹಳ ಮುಖ್ಯ ; ಶ್ರೀಗಳು

ಉತ್ತಮ ಜೀವನ ನಡೆಸಲು ಆಚಾರ ಮತ್ತು ನಿಷ್ಠೆ ಬಹಳ ಮುಖ್ಯವಾದದ್ದು ಎಂದು ಗಾವಡಗೆರೆ ಶ್ರೀ ಗುರುಲಿಂಗಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಪಂಚವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ ಉದ್ಘಾಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಭಾರತೀಯ ಸಂಸ್ಕೃತಿ ಪರಂಪರೆಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದ್ದು ದೇವಾಲಯಗಳ ನಗರ ಎಂದು ಕರೆಯಲಾಗುತ್ತದೆ, ಕಳೆದ ದಿನಗಳನ್ನು ಲೆಕ್ಕವಿಡದೆ ಮುಂಬರುವ ದಿನಗಳಲ್ಲಿ ಆಧ್ಯಾತ್ಮದತ್ತ ಒಲವು ತೋರಿಸಬೇಕು ಎಂದರು.

ಕನ್ನಡ ಮಠ ಬೆಟ್ಟದಪುರದ ಶ್ರೀ ಚನ್ನಬಸವ ಚಿಕ್ಕವೀರದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ ನಾವೆಲ್ಲರೂ ಜೋಳ್ಳು ವಿಚಾರಗಳನ್ನು ತಿರಸ್ಕರಿಸಿ ಗಟ್ಟಿಯಾದ ವಿಚಾರಧಾರೆಗಳನ್ನು ಮೈಗೊಡಿಸಿಕೊಂಡು ಅಧರ್ಮ ತೆಗೆದು ಧರ್ಮ ಸ್ಥಾಪನೆಗೆ ಮುಂದಾಗಬೇಕು ಎಂದರು.

ರಾವಂದೂರು ಮುರುಘ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿಗಳು ಮಾತನಾಡಿ ಧ್ಯಾನದಿಂದ ಮಾತ್ರ ಮನಸ್ಸಿಗೆ ಶಾಂತಿ ಸಿಗುತ್ತದೆ, ಶ್ರದ್ಧೆ ನಿಷ್ಠೆಯ ಆಚಾರ ವಿಚಾರಗಳನ್ನು ಬೆಳೆಸಿಕೊಂಡು ಮಾದರಿಯಾಗಿ ಬದುಕು ನಡೆಸಬೇಕು ಎಂದರು.

ಮಾದಹಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬ ಸದಾಶಿವಮಹಾಸ್ವಾಮಿಗಳು ಮಾತನಾಡಿ ಹೊಂದಾಣಿಕೆ ಮನೋಭಾವನೆಯಿಂದ ಗೌರವಯುತ ಜೀವನ ನಡೆಸಿದಾಗ ಮಾತ್ರ ನಾವೆಲ್ಲರೂ ಅಭಿವೃದ್ಧಿ ಪಥದಲ್ಲಿ ಸಾಗಬಹುದು ಎಂದರು.

ಮೈಮೂಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಅವರು ಮಾತನಾಡಿ ಆಧುನಿಕ ಭರಾಟೆಯಲ್ಲಿ ನಾವೆಲ್ಲರೂ ಸಂಪ್ರದಾಯಗಳನ್ನು ಮರೆಯದೆ ಉಳಿಸಿ ಬೆಳೆಸಬೇಕಿದೆ ಎಂದರು.

ಮೂರು ದಿನ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಚನ್ನಸೋಗೆ ಗ್ರಾಮದ ಸಿ.ಎಸ್ ಪ್ರಶಾಂತ್ ಶಾಸ್ತ್ರಿ ಮತ್ತು ಪುರೋಹಿತರ ತಂಡ ನಡೆಸಿಕೊಟ್ಟರು, ಮೋದೂರು ಅಶೋಕ್ ಮತ್ತು ತಂಡದವರಿಂದ ವೀರಗಾಸೆ ಹಾಗೂ ಮಾದಳ್ಳಿಯ ಶ್ರೀ ಬಸವೇಶ್ವರ ಭಜನಾ ಸಂಘದವರಿಂದ ಭಜನೆ ಕಾರ್ಯಕ್ರಮ ನಡೆಯಿತು, ಮೂರು ದಿನ ಕಾಲ ಆಗಮಿಸಿದ ಸಾವಿರಾರು ಭಕ್ತಾದಿಗಳಿಗೆ ಅಚ್ಚುಕಟ್ಟಾದ ವ್ಯವಸ್ಥೆಯಲ್ಲಿ ಅನ್ನಸಂತರ್ಪಣೆ ನಡೆಯಿತು, ದೇವಾಲಯಕ್ಕೆ ಜಾಗ ಕೊಡುಗೆಯಾಗಿ ನೀಡಿದ ರತ್ನಮ್ಮ ಮರಿಸ್ವಾಮಪ್ಪ ಹಾಗೂ ಗಿರಿಜಾ ರಾಜಶೇಖರ್ ಮತ್ತು ದಾನಿಗಳಾದ ಹುಣಸೂರಿನ ಶಿವಮ್ಮ ಕ್ಲಿನಿಕ್ ನ ವೃಷಬೇಂದ್ರಸ್ವಾಮಿ, ಮೈಸೂರಿನ ವಕೀಲ ಬಸವರಾಜು, ಎಸ್ಎಂಎಸ್ ಗ್ರೂಪ್ ನ ಪಿ.ಎಂ ರಾಜಣ್ಣ, ಮೈಸೂರಿನ ಕೆ.ಸಿ ನಾಗಮಣಿ ಸಿದ್ಧವೀರ ಶೆಟ್ಟರು, ಉದ್ಯಮಿ ಬಿ.ಎಸ್ ರಾಮಚಂದ್ರ, ಚಿಕ್ಕಹೊಸೂರಿನ ದಿವಂಗತ ಸದಾಶಿವಪ್ಪ ಕುಟುಂಬದವರು ಸೇರಿದಂತೆ ದೇವಾಲಯ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಿದವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಹಾಸನ ತಣ್ಣೀರಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ದಿಂಡಗಾಡು ಬಸವಜ್ಯೋತಿ ಮಠದ ಅಪ್ಪಾಜಿ ಸ್ವಾಮೀಜಿ, ಮಂಡ್ಯ ಜಿಲ್ಲೆ ತಗ್ಗಳ್ಳಿಪುರದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಅರೆಕೆರೆ ವೀರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಮಾದಾಪುರ ಚಂದ್ರಮೌಳೇಶ್ವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಲಾಲದೇವನಹಳ್ಳಿಯ ಹಿರಣ್ಮಯಿ ತಾಯಿ, ಮಾಜಿ ಶಾಸಕರಾದ ಹೆಚ್.ಸಿ ಬಸವರಾಜು, ಬಿಜೆಪಿ ಮುಖಂಡ ಕೌಲನಹಳ್ಳಿ ಸೋಮಶೇಖರ್, ಮುಖಂಡರಾದ ಕೆ.ಎಚ್ ವೀರಭದ್ರಪ್ಪ, ರಾಜಶೇಖರ್, ಶಿವರಾಜು, ಶಿವರುದ್ರಪ್ಪ, ರಾಜಣ್ಣ, ಕಾಳೇಗೌಡ, ಸಂತೋಷ್,
ಕೆ.ಹೆಚ್ ರಾಜು, ಧರಣಿಶ್, ಮಹದೇವ್, ಜಗದೀಶಪ್ಪ, ಮಹೇಶ್, ಬಸವರಾಜಪ್ಪ, ಪುಟ್ಟಸೋಮಪ್ಪ, ದಿನೇಶ್, ಕುಮಾರ್, ಮಧು, ಮನು, ಗಿರೀಶ್, ಚಂದ್ರಶೇಖರ್, ಚಂದ್ರು, ಶಿವಣ್ಣ ಸೇರಿದಂತೆ ಕರಣಕುಪ್ಪೆ ಉತ್ತೆನಹಳ್ಳಿ ಮುದ್ದನಹಳ್ಳಿ ಗೋಧಿಮನುಗನಹಳ್ಳಿ ಕಲ್ಯಾಣಪುರ ಕೊಳವಿಗೆ ಕಲ್ಲುಮಾದಹಳ್ಳಿ ಕಾಮಗೌಡನಹಳ್ಳಿ ಮುಳ್ಳೂರು ಹರಿನಹಳ್ಳಿ ತಾತನಹಳ್ಳಿ ಚಂದಗಾಲು ರಾಜಗೌಡನಹುಂಡಿ ಕಲ್ಲಹಳ್ಳಿ ಬೀರನಹಳ್ಳಿ ಪಂಚವಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!