ಬಾರಿಸು ಕನ್ನಡ ಡಿಂಡಿಮ ಬಳಗದ ಸದಸ್ಯ, ಅಡಿಕೆ ವ್ಯಾಪಾರಿ ಕರುಣಾಕರ ರೈ ಬಾಲ್ಯೊಟ್ಟುಗುತ್ತು ವಿಧಿವಶರಾಗಿದ್ದಾರೆ.

ಕಳೆದ ರಾತ್ರಿ ಮನೆಯಲ್ಲಿ ಸ್ನಾನ ಮುಗಿಸಿ ಕುಳಿತಿದ್ದ ವೇಳೆ ದೇಹಾರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ತಕ್ಷಣ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯಾಘಾತಕ್ಕೆ ಒಳಗಾಗಿದ್ದ ಕರುಣಾಕರ ರೈ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನದ ವೇಳೆ ಅವರು ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ ನಿರತ ಕೆ ರೈ, ಗುಜರಾತ್ ನಲ್ಲಿ ಉದ್ಯೋಗದಲ್ಲಿರುವ ಪುತ್ರಿ ನಿರೀಕ್ಷಾ ರೈ, ಪುತ್ರ ಖ್ಯಾತ ಹಾಡುಗಾರ ನಿಶಾನ್ ರೈ ಮಠಂತಬೆಟ್ಟು ಸೇರಿದಂತೆ ಅಪಾರ ಬಂಧುಬಳಗನ್ನು ಅಗಲಿದ್ದಾರೆ.



