ಬಂಟ್ವಾಳ: ಆರು ತಿಂಗಳ ಗರ್ಭಿಣಿಯಾಗಿ ಶಿಶುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ತೆಂಕಕಜೆಕಾರು ನಿವಾಸಿ ವಸಂತ ಅವರ ಪತ್ನಿ ಸುಜಾತ(೪೦) ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಫೆ. 14ರ ರಾತ್ರಿ ನಡೆದಿದೆ.

ಶಿಶುವಿಗೆ ಹೃದಯ ಸಂಬಂಧಿ ತೊಂದರೆ ಇದೆ ಎನ್ನುವ ಕಾರಣಕ್ಕೆ ಫೆ. 12ರಂದು ಆಸ್ಪತ್ರೆಗೆ ದಾಖಲಾಗಿದ್ದು, ಆದರೆ ಪ್ರಸ್ತುತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರಿಗೆ ಸುಮಾರು 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಬಹಳ ವಿಳಂಬವಾಗಿ ಗರ್ಭಿಣಿಯಾಗಿದ್ದರು.



