ಮುಲ್ಕಿ: ಹಳೆಯಂಗಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಪಟ್ಟಂತೆ ತಾಲೂಕು ಪಂಚಾಯತ್ ಅಧಿಕಾರಿ ಹಾಗೂ ಪಂಚಾಯತ್ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆದಿದ್ದು ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದಂತೆ ಸ್ಥಳಕ್ಕೆ ಮುಲ್ಕಿ ಪೊಲೀಸರು ಆಗಮಿಸಿ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತು ಏರ್ಪಡಿಸಿದ್ದಾರೆ.
ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾವಂಜೆ ಬಳಿ ಸ್ಥಳೀಯ ಉದ್ಯಮಿ ರೋಹಿತ್ ಎಂಬವರು ವಾಣಿಜ್ಯ ಬಳಕೆಗೆ ಕುಡಿಯುವ ನೀರಿನ ಸಂಪರ್ಕವನ್ನು ಪಂಚಾಯಿತಿಯಿಂದ ಕೇಳಿದ್ದರು. ಆದರೆ ಪಂಚಾಯತ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ವಾಣಿಜ್ಯ ಬಳಕೆಯ ಸಂಪರ್ಕ ನಿರಾಕರಿಸಲಾಗಿತ್ತು. ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರ ಸಭೆಯಲ್ಲೂ ನಿರ್ಣಯಿಸಲಾಗಿತ್ತು. ಆದರೆ ರೋಹಿತ್ ತಾಲೂಕು ಪಂಚಾಯತ್ ಇ ಒ ಗುರುಶಾಂತಪ್ಪ ರವರಿಗೆ ದೂರು ನೀಡಿದ್ದು ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಮನವಿ ಮಾಡಿದ್ದರು ಹಾಗೂ ನೀರಿನ ಸಂಪರ್ಕ ಕಲ್ಪಿಸದ ಪಂಚಾಯತ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇತ್ತ ತಾಲೂಕ್ ಪಂಚಾಯತ್ ಅಧಿಕಾರಿ ರವರು ಪಂಚಾಯತ್ ಅಧ್ಯಕ್ಷರಿಗೆ ರೋಹಿತ್ ರವರಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವಂತೆ ಸೂಚನೆ ನೀಡಿದ್ದು ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಸ್ಪಷ್ಟವಾಗಿ ನಿರಾಕರಿಸಿ ರೋಹಿತ್ ರವರು ಪಂಚಾಯತ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು ತನಿಖೆ ನಡೆದ ಬಳಿಕ ಕುಡಿಯುವ ನೀರಿನ ಸಂಪರ್ಕದ ಬಗ್ಗೆ ವಿಚಾರಣೆ ನಡೆಸಬೇಕಾಗಿದೆ ಎಂದು ಸ್ಪಷ್ಟಉತ್ತರ ನೀಡಿದ್ದಾರೆ.
ಆದರೆ ತಾಲೂಕು ಪಂಚಾಯತ್ ಅಧಿಕಾರಿ ಗುರುಶಾಂತಪ್ಪರವರು ಗುರುವಾರ ಏಕಾಏಕಿ ಪಂಚಾಯತಿಗೆ ಆಗಮಿಸಿ ಕುಡಿಯುವ ನೀರಿನ ಸಂಪರ್ಕದ ಬಗ್ಗೆ ಪಂಚಾಯತ್ ಅಧ್ಯಕ್ಷರೊಂದಿಗೆ ಮಾತಿನ ಚಕಮಕಿ ಹಾಗೂ ಇಬ್ಬರಿಂದಲೂ ಅವಾಚ್ಯ ಶಬ್ದಗಳಿಂದ ನಿಂದನೆ ನಡೆದಿದ್ದು ಪರೀಸ್ಥಿತಿ ತಾರಕಕ್ಕೆ ಏರುತ್ತಿದ್ದಂತೆ ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈ ಬಗ್ಗೆ ತಾಲೂಕು ಪಂಚಾಯತ್ ಇ ಒ ಗುರು ಶಾಂತಪ್ಪ ಮಾತನಾಡಿ ಪಂಚಾಯತ್ ಅಧ್ಯಕ್ಷರು ನಾಗರಿಕರ ಮನವಿಗೆ ಸ್ಪಂದಿಸದೆ ಸಮಸ್ಯೆ ಬಗೆಹರಿಸಲು ಬಂದ ಕರ್ತವ್ಯ ನಿರತ ಅಧಿಕಾರಿಗೆ ಅಡ್ಡಿಪಡಿಸಿದ್ದು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ನೀರಿನ ಸಮಸ್ಯೆಗೆ ಸ್ಪಂದಿಸದೆ ಓರ್ವ ನಾಗರಿಕನ ವಾಣಿಜ್ಯ ಬಳಕೆಗೆ ಕುಡಿಯುವ ನೀರಿನ ಸಂಪರ್ಕ ಸಮಸ್ಯೆಗೆ ಇ ಒ ಮುಂದಾಗಿರುತ್ತಿರುವುದು ದುರದೃಷ್ಟಕರ ಹಾಗೂ ಸಂಶಯಾತ್ಮಕವಾಗಿದೆ ಎಂದಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸರಿಗೆ ದೂರು ನೀಡಲಾಗುವುದು ಎಂದಿದ್ದಾರೆ
ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಎಂಬಲ್ಲಿ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಮನೆಯ ಚಾವಣಿ…
ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದಂತಹ ಅವಘಡದಲ್ಲಿ ಮನೆಯ ಪೀಠೋಪಕರಣಗಳು ಹಾಗೂ ದಿನನಿತ್ಯ…
ವಾಷಿಂಗ್ಟನ್ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಯು. ಟಿ. ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ…
ಫಿಫಾ ವಿಶ್ವಕಪ್ 2026ರ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳ ವೇಳೆ ನಡೆದ ಗಲಾಟೆ ಮತ್ತು ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ, ಅರ್ಜೆಂಟೀನಾ…
'ನ್ಯೂಯಾರ್ಕ್ ಟೈಮ್ಸ್' ತನ್ನ ವರದಿಯಲ್ಲಿ 'ಪಾಕಿಸ್ತಾನಿ ಕಾಶ್ಮೀರ' ಎಂದು ಉಲ್ಲೇಖಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕದಲ್ಲಿರುವ ಭಾರತೀಯ ರಾಯಭಾರ…
ಚೀನಾ ಪಾಕಿಸ್ತಾನದ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್‌ಗಳನ್ನು ಪೂರೈಸಿದೆ ಎಂಬ ವರದಿಗಳು ಜಾಗತಿಕ ಆತಂಕಕ್ಕೆ ಕಾರಣವಾಗಿವೆ. ಈ ಕುರಿತು…