ಕರ್ನಾಟಕ ಸರಕಾರ 2018ರ ಸಹಕಾರಿ ಸಂಘ ಸೊಸೈಟಿ ಬ್ಯಾಂಕ್ ಇತ್ಯಾದಿ ಗಳಿಂದ ಸಾಲ ಮನ್ನಾ ಪರಿಹಾರದ ಮೊಬಲಗು ದೊರಕದ ರೈತರ ಪರವಾಗಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಘಟನೆಯು ಪ್ರಜಾಪ್ರಭುತ್ವದ ವ್ಯವಸ್ಥೆ ಅಡಿಯಲ್ಲಿ ಪುತ್ತೂರು ಕಂದಾಯ ಉಪ ವಿಭಾಗ ಕಚೇರಿ ಎದುರುಗಡೆ ಫೆ .20ರಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕಿಶೋರ್ ಶಿರಾಡಿ ಬುಧವಾರ ಸುಬ್ರಹ್ಮಣ್ಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇವತ್ತು ಆಧುನಿಕ ತಂತ್ರಜ್ಞಾನ ಇಷ್ಟು ಮುಂದುವರಿದರು ಸರಕಾರದ ಸಾಲ ಮನ್ನಾ ಯೋಜನೆಗಳು ಮತ್ತು ಇನ್ನಿತರ ಯೋಜನೆಗಳು ಅರ್ಹತೆ ಇರುವ ರೈತರಿಗೆ ಸಿಗದಿರುವುದು ಈ ರಾಜ್ಯದ ರೈತರ ವಿಪರ್ಯಾಸ . ರೈತರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು ಗಳ ವಿರುದ್ಧ ಮತ್ತು ಸಾಲ ಮನ್ನಾ ವಂಚಿತ ರೈತರಿಗೆ ಸಾಲಮನ್ನಾದ ಒಂದು ಲಕ್ಷ ರೂ ಹಣ ಸಿಗದಿರುವ ಸಿಗುವ ತನಕ ಈ ಹೋರಾಟ ಮುಂದುವರೆಯಲಿದೆ ಎಂದು ಕಿಶೋರ್ ಶಿರಾಡಿ ಅವರು ಹೇಳಿದರು ಪ್ರತಿಭಟನೆ ದಿನ ಸಂಬಂಧಪಟ್ಟ ಡಿಸಿ ಬ್ಯಾಂಕಿನ ಅಧ್ಯಕ್ಷರು ನಿರ್ದೇಶಕರು ಹಾಗೂ ಬ್ಯಾಂಕಿನ ಅಧಿಕಾರಿಗಳು ನಮ್ಮ ಮನೆ ಸ್ವೀಕರಿಸಲು ಸ್ಥಳಕ್ಕೆ ಬರಬೇಕು ಹಾಗೂ ರೈತರಿಗೆ ಸಿಗಬೇಕಾದ ಹಣ ಎಲ್ಲಿದೆ ಯಾಕಾಗಿ ಹೀಗಾಗಿದೆ ಎಂಬುದರ ಬಗ್ಗೆ ಉತ್ತರ ನೀಡಬೇಕು ಎಂದು ಅವರು ಅಗ್ರಹಿಸಿದರು.
ಅಲ್ಲದೆ ಸಾಲ ಮನ್ನಾ ಯೋಜನೆ ಆರಂಭವಾಗಿ ಆರು ವರ್ಷ ಆಗಿದೆ ,ರೈತರು ಇಲ್ಲಿಯವರೆಗೆ ಕಾದು ಕಾದು ಕಂಗಳಾಗಿದ್ದರೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಸಂಚಾಲಕ ಜಯಪ್ರಕಾಶ್ ಕೂಜುಗೋಡು, ಸದಸ್ಯರುಗಳಾದ ಮೋಹನ ಕೆದಿರ, ರಮೇಶ್ ಎಂ. ಎಸ್, ಹೂವಯ್ಯ ಕಲ್ಲೇರಿ ,ಪ್ರವೀಣ ಕೋನಡ್ಕ, ಎಂ ಮುತ್ತಪ್ಪ ಗೌಡ, ಡಿ ಲಿಂಗಪ್ಪಗೌಡ, ನರೇಂದ್ರ ಕೂಜುಗೋಡು ಹಾಗೂ ಲೋಕೇಶ್ ಕೋನಡ್ಕ ಉಪಸ್ಥಿತರಿದ್ದರು.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…