ನಮ್ಮ ಹಿಂದೂ ಸಂಸ್ಕ್ರತಿ ಮತ್ತು ನಮ್ಮ ಭಾರತೀಯ ಹಿಂದೂ ಆಚರಣೆಗಳು ಅದೆಷ್ಟೋ ರೀತಿಯಲ್ಲಿ ಆಚರಣೆಗೊಳ್ಳುತ್ತಿವೆ.
ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಆಚರಣೆಗೊಳ್ಳುವ ಧಾರ್ಮಿಕ ಕಾರ್ಯಕ್ರಮಗಳು ತನ್ನದೇ ಆದಂತಹ ವೈಶಿಷ್ಟ್ಯಗಳನ್ನೂ ಹೊಂದಿವೆ ಮತ್ತು ಇವುಗಳಲ್ಲಿ ಹಲವಾರು ವಿವಿಧತೆಯನ್ನು ಕಾಣುತ್ತೇವೆ. ಆದರೆ ಎಲ್ಲಾ ವಿಶೇಷ ಪರ್ವಗಳು ನಮ್ಮ ಸನಾತನ ಧರ್ಮದ ಮೂಲದಿಂದ ಬಂದವುಗಳು. ಇದನ್ನು ಇಂದು ಕೂಡಾ ವಿವಿದೆಡೆ ಆಚರಿಸುತ್ತಾರೆ. ಆದರೆ ಹಲವಾರು ರೀತಿಯ ಬದಲಾವಣೆಗಳನ್ನು ಕಾಣುತ್ತೇವೆ. ಅದೇ ರೀತಿ ಅರಶಿನ ಕುಂಕುಮ ಕಾರ್ಯಕ್ರಮ ನಮ್ಮ ಕರ್ಮಭೂಮಿ ಮಹಾರಾಷ್ಟ್ರದ ಆಚರಣೆಯಂತೆ ನಮ್ಮ ಹಿಂದೂ ಸಂಸ್ಕ್ರತಿಯಂತೆ ಆಚರಿಸಿಕೊಂಡು ಬರುವ ಕಾರ್ಯಕ್ರಮ. ನಮ್ಮ ಮುಂದಿನ ಪೀಳಿಗೆಗೆ ತಿಳಿಯಪಡಿಸುವ ಕಾರ್ಯ ನಮ್ಮಿಂದಾಗಬೇಕು. ಪ್ರತೀ ವರ್ಷ ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗುವ ಅರಶಿನ ಕುಂಕುಮದ ಒಂದು ಪವಿತ್ರ ಸಂಪ್ರದಾಯ. ಮಹಿಳೆಯರು ಒಂದೆಡೆ ಸೇರಿ ತಮ್ಮ ಸಾಂಸಾರಿಕ ಜೀವನದ ಒಳಿತಿಗಾಗಿ ಪರಸ್ಪರ ಹಾರೈಸಿಕೊಂಡು ಸಂಭ್ರಮಿಸುವ ಪರ್ವವಿದು. ಈ ಪರ್ವ ಕಾಲದಲ್ಲಿ ಮುತ್ತೈದೆಯರು ತಮ್ಮ ಕಷ್ಟ ದುಃಖಗಳು ದೂರಾವಾಗಿ ಸುಖ ಶಾಂತಿ ನೆಮ್ಮದಿ ಬದುಕು ನಮ್ಮದಾಗಲಿ ಎಂದು ಬೇಡಿ ಇನ್ನೊಬ್ಬರಿಗೂ ಹಾರೈಸುತ್ತಾರೆ. ನಮ್ಮ ಸಂಸ್ಕ್ರತಿಯನ್ನು ಉಳಿಸಿ ಬೆಳೆಸೋಣ ಇದಕ್ಕೆ ಬೇಕಾಗಿ ನಾವೆಲ್ಲರೂ ನಮ್ಮ ಸನಾತನ ಹಿಂದೂ ಧರ್ಮದ ಬೆಳೆವಣಿಗೆಗೆ ಪೂರಕವಾಗಿರುವ ದೇಶ ಕಟ್ಟುವ ನಾಯಕರಿಗೆ ಬೆಂಬಲಿಸುವ ಅಗತ್ಯತೆ ಇದೆ. ಹಿಂದೂ ಸಂಸ್ಕ್ರತಿಯ ಪುನರುತ್ಪಾನ ಆಗಬೇಕಿದೆ. ಆ ಮೂಲಕ ನಾವೆಲ್ಲರೂ ಜವಾಬ್ದಾರಿ ಅರಿತು ನಡೆಯೋಣ ಎಂದು ಪುಣೆ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮಿ ಪಿ .ಶೆಟ್ಟಿಯವರು ನುಡಿದರು.
ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮತಾ ಮಹಿಳಾ ವಿಕಾಸ ಕೇಂದ್ರ ಪುಣೆ ವತಿಯಿಂದ ಪ್ರತಿ ವರ್ಷವೂ ಮಕರ ಸಂಕ್ರಾಂತಿಯ ಪ್ರಯುಕ್ತ ನಡೆಯುವ ಅರಶಿನ ಕುಂಕುಮ ಕಾರ್ಯಕ್ರಮವು ಫೆಬ್ರವರಿ 11 ರವಿವಾರದಂದು ಪುಣೆಯ ಸ್ವಾರ್ ಗೇಟ್ ನಲ್ಲಿಯ ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್ ನ ಪದುಮ್ಜಿಜಿ ಹಾಲ್ ನಲ್ಲಿ ವಿವಿದ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಈ ಧಾರ್ಮಿಕ ಕಾರ್ಯಕ್ರಮದಂಗವಾಗಿ ಮೊದಲಿಗೆ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮಿ ಪಿ ಶೆಟ್ಟಿ, ಮತ್ತು ಕೇಂದ್ರದ ಪದಾಧಿಕಾರಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಸುಲಾತ ಎಸ್ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ಬಂಟ್ಸ್ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಜ್ಯೋತಿ ವಿ ಶೆಟ್ಟಿ, ಪುಣೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ಪ್ರಮುಖರಾದ ಸುಧಾ ಎನ್ ಶೆಟ್ಟಿ, ಪುಣೆ ತುಳುಕೂಟದ ಮಹಿಳಾ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ ದೇವಾಡಿಗ ಉಪಸ್ಥಿತರಿದ್ದರು.
ಅಧ್ಯಾ ಪ್ರಥ್ವಿಶ್ ಶೆಟ್ಟಿ ಪ್ರಾರ್ಥನೆಗೈದರು. ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಕಾರ್ಯದರ್ಶಿ ವೀಣಾ ಪಿ ಶೆಟ್ಟಿಯವರು ಸ್ವಾಗತಿಸಿದರು. ಪುಣೆಯ ವಿವಿದ ತುಳು ಕನ್ನಡಿಗ ಸಂಘ ಸಂಸ್ಥೆಗಳ ಮಹಿಳಾ ಸಮಿತಿಯ ಕಾರ್ಯಧ್ಯಕ್ಷರನ್ನು ಮತ್ತು ಪ್ರಮುಖರನ್ನು ಬಳಗದ ವತಿಯಿಂದ ಗೌರವಿಸಲಾಯಿತು. ಉಪಸ್ಥಿತರಿದ್ದ ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಪ್ರ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ, ಪ್ರಮುಖರಾದ ಸುಧಾಕರ್ ಶೆಟ್ಟಿ, ಸುರೇಶ್ ಶೆಟ್ಟಿ, ಸತೀಶ್ ಶೆಟ್ಟಿ, ಸಿದ್ದಾಂತ್ ಶೆಟ್ಟಿ ಮೊದಲಾದವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರಭಾಕರ್ ಶೆಟ್ಟಿಯವರು ಅರಶಿನ ಕುಂಕುಮದ ವಿಶೇಷತೆಯ ಬಗ್ಗೆ ಮಾತನಾಡಿದರು.
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರಿಂದ, ಗುರುದೇವ ಚಿಣ್ಣರ ಬಳಗದ ಮಕ್ಕಳಿಂದ ತುಳುನಾಡ ಪುರಾತನ ಸಂಸ್ಕ್ರತಿ ಮತ್ತು ಹಳ್ಳಿ ಆಟಗಳ ಬಗ್ಗೆ ಮಾಹಿತಿ ನೀಡುವ ಮನೋರಂಜನಾ ಕಾರ್ಯಕ್ರಮ ನಡೆಯಿತು. ನಂತರ ಕೇಂದ್ರದ ಮುತ್ತೈದೆಯರು ಶ್ರೀ ದೇವಿ ಫೋಟೋಗೆ ಆರತಿ ಬೆಳಗಿದರು. ಸರೋಜಿನಿ ಡಿ ಬಂಗೇರ, ಅಮಿತಾ ಪಿ ಪೂಜಾರಿ ಶ್ರೀದೇವಿಯ ಸ್ತುತಿ ಹಾಡಿದರು. ನಂತರ ಅರಶಿನ ಕುಂಕುಮ ಕಾರ್ಯಕ್ರಮ ಜರಗಿತು. ಕಾರ್ಯಕ್ರಮಕ್ಕೆ ಅಗಮಿಸಿದ್ದ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪರಸ್ಪರ ಅರಶಿನ ಕುಂಕುಮ ಹಚ್ಚಿ ಎಳ್ಳು ಬೆಲ್ಲ ಸವಿದು ಶುಭ ಹಾರೈಸಿದರು. ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರು ಮತ್ತು ಪ್ರಮುಖರು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡು ಸಹಕರಿಸಿದರು. ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ಮಾಜಿ ಅಧ್ಯಕ್ಷೆಯರುಗಳಾದ ಪ್ರೇಮ ಎಸ್ ಶೆಟ್ಟಿ, ಪುಷ್ಪ ಎಲ್ ಪೂಜಾರಿ, ಕೇಂದ್ರದ ಉಪಾಧ್ಯಕ್ಷೆ ಶೋಭಾ ಯು ಶೆಟ್ಟಿ, ಕಾರ್ಯದರ್ಶಿ ವೀಣಾ ಪಿ .ಶೆಟ್ಟಿ, ಕೊಶಾಧಿಕಾರಿ ವೀಣಾ ಡಿ. ಶೆಟ್ಟಿ, ಸಾಂಸ್ಕ್ರತಿಕ ಸಮಿತಿಯ ಕಾರ್ಯದರ್ಶಿಗಳಾದ ಶ್ವೇತಾ ಎಚ್ ಮೂಡಬಿದ್ರಿ, ಮಮತಾ ಡಿ ಶೆಟ್ಟಿ, ಪ್ರಮುಖರಾದ ಸುಧಾ ಎನ್ ಶೆಟ್ಟಿ, ಸರೋಜಿನಿ ಬಂಗೇರ, ಸ್ನೇಹಲತಾ ಅರ್ ಶೆಟ್ಟಿ, ಸುಜಾತಾ ಶೆಟ್ಟಿ, ಲಲಿತಾ ಪೂಜಾರಿ, ಅಮಿತಾ ಪೂಜಾರಿ, ಸುಲೋಚನ ರೈ, ನಯನಾ ಸಿ ಶೆಟ್ಟಿ, ಸ್ವರ್ಣಲತಾ ಶೆಟ್ಟಿ, ಅರ್ಚನಾ ಬಿ ಶೆಟ್ಟಿ, ಸೋನು ಎಸ್ ಶೆಟ್ಟಿ, ಲೀಲಾ ಶೆಟ್ಟಿ ಮತ್ತಿತರರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಮಮತಾ ಶೆಟ್ಟಿ ಮನೋರಂಜನಾ ಕಾರ್ಯಕ್ರಮ ನಿರೂಪಿಸಿದರು. ವೀಣಾ ಡಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ಎಚ್ ಮೂಡುಬಿದಿರೆ ವಂದಿಸಿದರು. ಕಾರ್ಯಕ್ರಮದ ನಂತರ ಲಘು ಉಪಹಾರ ನಡೆಯಿತು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…