ಜನ ಮನದ ನಾಡಿ ಮಿಡಿತ

Advertisement

ಶ್ರೀ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ನೂತನ ಶಾಖೆ ಹೋಟೆಲ್ ವಿಶ್ವನಾಥ್ ಪ್ಯಾಲೇಸ್ ಪುಣೆಯಲ್ಲಿ ಶುಭಾರಂಭ…..

ಹುಬ್ಬಳ್ಳಿ ಮೂಲದ ಪ್ರಸ್ತುತ ಕರ್ನಾಟಕದಾದ್ಯಂತ ಶುಚಿ ರುಚಿಗೆ ಹೆಸರಾದ, ರಾಜೇಂದ್ರ ಶೆಟ್ಟಿ ಮಾಲಿಕತ್ವದ ಶ್ರೀ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ನೂತನ ಶಾಖೆ ಹೋಟೆಲ್ ವಿಶ್ವನಾಥ್ ಪ್ಯಾಲೇಸ್ ಶುದ್ದ ಶಾಖಾಹಾರಿ ಹೋಟೆಲ್ ಮುಂಬಯಿ – ಬೆಂಗಳೂರು ಹೆದ್ದಾರಿ ಪುಣೆಯ ವಾಕಡ್ ನಲ್ಲಿ ಫೆಬ್ರವರಿ 15 ರಂದು ಹುಬ್ಬಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಆನಂದ ಗುರುಸ್ವಾಮಿಯವರ ಆಶೀರ್ವಾದದೊಂದಿಗೆ ಶುಭಾರಂಭಗೊಂಡಿತು. ವಾಸ್ತುಪೂಜೆ, ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ದೇವತಾ ಕಾರ್ಯಗಳು ನಡೆದ ನಂತರ, ಬಂಟ ಸಮಾಜದ ಗಣ್ಯರಾದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಹೇರಂಬ ಗ್ರೂಪ್ ಆಫ್ ಕಂಪನಿಯ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ, ಪುಣೆ ಪಿಂಪ್ರಿ ಪರಿಸರದ ರಾಜಕೀಯ ನಾಯಕರಾದ ಮಾವಲ್ ಸಂಸದ ಶ್ರೀರಂಗ್ ಬಾರ್ನೆ, ಪಿಂಪ್ರಿ ಚಿಂಚ್ವಾಡ್ ನಗರ ಪಾಲಿಕೆ ಮಾಜಿ ಕಾರ್ಪೋರೇಟರ್ ಗಳಾದ ರಾಹುಲ್ ಕಲಟೆ, ಮಯೂರ್ ಕಲಟೆ, ಬಾವು ಸಾಹೇಬ್ ಬೋಯಿರ್, ನಾನಾ ಕಾಟೆ, ಪ್ರಸಾದ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ರಿಬ್ಬನ್ ಕತ್ತರಿಸಿ ದೀಪ ಜ್ಯೋತಿ ಬೆಳಗಿಸುವ ಮೂಲಕ ಹೋಟೆಲ್ ಶುಭಾರಂಭಗೊಂಡಿತು. ಶ್ರೀ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ಸಿಎಂಡಿ ರಾಜೇಂದ್ರ ವಿ ಶೆಟ್ಟಿ ಮತ್ತು ಸಂತೋಷ್ ಶೆಟ್ಟಿಯವರು ಅತಿಥಿ ಗಣ್ಯರನ್ನು ಬರಮಾಡಿಕೊಂಡು ಶಾಲು, ಹಾರ, ಪುಷ್ಪಗುಚ್ಛ ನೀಡಿ ಸತ್ಕರಿಸಿದರು. ಚೇತನ್ ದೋಷಿ, ರಾಜೇಶ್ ಸಸ್ದೇವ್, ವಿನೋದ್ ಮೋದಿ, ಪಿನಾಕಿನ್ ಸತ್ರಾ, ಅಕ್ಬರ್ ಶೆತ್ರಂಜಿವಾಲೆ, ದಾನೇಶ್ ಬಾಯಿ ಮೊದಲಾದವರು ಉಪಸ್ಥಿತರಿದ್ದರು.

ಪುಣೆಯ ವಿವಿಧ ಕ್ಷೇತ್ರದ ನಾಯಕರು, ವಿವಿದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಹೋಟೆಲ್ ಉದ್ಯಮಿಗಳು, ಉದ್ಯಮಿಗಳು, ರಾಜೇಂದ್ರ ಶೆಟ್ಟಿ ಅಭಿಮಾನಿಗಳು, ಹಿತೈಷಿಗಳು ಬಂಧು ಮಿತ್ರರು ಆಗಮಿಸಿ ಶುಭ ಹಾರೈಸಿದರು. ಪಿಂಪ್ರಿ ಚಿಂಚ್ವಾಡ್ ತುಳು ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್ ಇವರೊಂದಿಗೆ ಇದ್ದು ಸಹಕರಿಸಿದರು. ಆರ್ಕಿಟೆಕ್ಟ್ ಇಂಜಿನಿಯರ್ ಚರಣ್ ದಾಸ್ ಶೆಟ್ಟಿಯವರ ವಿನ್ಯಾಸದಲ್ಲಿ ಪುಣೆಯಲ್ಲಿ ಮೊದಲ ಬಾರಿಗೆ ವಿನೂತನ ಶೈಲಿಯಲ್ಲಿ ರೂಪುಗೊಂಡಿರುವ ಈ ಹೋಟೆಲ್ ಗ್ರಾಹಕರ ಸೇವೆಗೆ ಸಿದ್ದವಾಗಿ ನಿಂತಿದ್ದು ಗ್ರಾಹಕರ ಮನಗೆಲ್ಲಲಿದೆ. ಇವರ ವಿಜಯದ ಸಾಧನೆಯ ಮಂತ್ರವೇ ಏಕತೆಯಾಗಿದೆ ಎನ್ನುವಂತೆ ಇವರ ಸಹಾಯಕರಾಗಿ ನಿಂತಿರುವ ಹಿತೈಷಿಗಳಾದ ಲೋಚನೆಶ್ ಹೂಗಾರ್, ಆನಂದ್ ಹಿರೆಮಠ್, ಅಜಯ್ ಶೆಟ್ಟಿ, ಶಶಿಕಾಂತ್ ಶೆಟ್ಟಿ, ರವಿಕಾಂತ್ ಶೆಟ್ಟಿ, ರಾಜೇಶ್ ಶೆಟ್ಟಿ, ವಿಜಯ್ ಪೂಜಾರಿ, ರಘುನಾಥ್ ಶೆಟ್ಟಿ, ಗಣೇಶ್ ಶೆಟ್ಟಿ, ಉದಯ್ ಶೆಟ್ಟಿ, ರಂಜಿತ್ ಶೆಟ್ಟಿ, ಅವಿನಾಶ್ ಶೆಟ್ಟಿ, ನಾಗೇಶ್ ಪೂಜಾರಿ, ಆದರ್ಶ್ ಶೆಟ್ಟಿ, ರಾಮ್ ಪೂಜಾರಿ, ಧರ್ಮೆಂದ್ರ ಶೆಟ್ಟಿ, ಚೇತನ್ ಶೆಟ್ಟಿ, ಸುಧೀರ್ ಶೆಟ್ಟಿ, ಪ್ರೀತೆಶ್ ಶೆಟ್ಟಿ, ರಾಘವೇಂದ್ರ ಕಾಂತಿ, ಪ್ರದೀಪ್ ಶೆಟ್ಟಿ, ಸಂದೀಪ್ ಹೆಗ್ಡೆ, ಮಧುಕರ್ ಶೆಟ್ಟಿ, ಕಿರಣ್ ಶೆಟ್ಟಿ, ಅಶೋಕ್ ಪೂಜಾರಿ, ಉಣಕಲ್ ಪ್ರಕಾಶ್ ಶೆಟ್ಟಿ, ಪೂರ್ಣೇಶ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಕರುಣಾಕರ್ ಶೆಟ್ಟಿ, ಗುರುರಾಜ್ ಹೂಗಾರ್ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು. ಹುಬ್ಬಳ್ಳಿಯ ರತ್ನಾಕರ್ ಶೆಟ್ಟಿಯವರ ಕರಾವಳಿ ಕ್ಯಾಟರರ್ಸ್ ನವರಿಂದ ಶುಚಿ ರುಚಿಯಾದ ಭೋಜನ ವ್ಯವಸ್ಥೆ ನಡೆಯಿತು.



ರಾಜೇಂದ್ರ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯವರಾದ ಹೊಟೇಲ್ ಉದ್ಯಮಿ ರಾಜೇಂದ್ರ ಶೆಟ್ಟಿ ಎಂದರೆ ಕೆಲವರಿಗೆ ಗೊತ್ತಾಗದಿರಬಹುದು. ಆದರೆ ಪಂಜುರ್ಲಿ ಹೊಟೇಲ್ ಶೆಟ್ರು ಎಂದರೆ ಉದ್ಗಾರ ತೆಗೆಯುವ ಇವರ ಗ್ರಾಹಕರ ಜನಾಶೀರ್ವಾದವೇ ಶ್ರೀರಕ್ಷೆ ಎನ್ನುವ ರಾಜೇಂದ್ರ ಶೆಟ್ಟಿಯವರು, ಹುಬ್ಬಳ್ಳಿಯಲ್ಲಿ ತನ್ನ ಕುಲ ದೈವ ಶ್ರೀ ಪಂಜುರ್ಲಿ ಹೆಸರಿನಲ್ಲಿ ಪ್ರಾರಂಭ ಮಾಡಿದ ಹೋಟೆಲ್ ಉದ್ಯಮ ಇಂದು ಹುಬ್ಬಳ್ಳಿಯಲ್ಲಿ ಜನ್ಮದಾತೆ ಹೆಸರಲ್ಲಿ “ಲೀಲಾವತಿ ಪ್ಯಾಲೇಸ್” ಮತ್ತು “ಪಂಜುರ್ಲಿ” ಎಂಬ ಹೆಸರಿನಿಂದ ಹುಬ್ಬಳ್ಳಿ ಧಾರವಾಡ ಬೆಳಗಾವಿಯಲ್ಲಿ ಹಲವಾರು ಹೊಟೇಲ್ ಉದ್ಯಮದಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಗ್ರೂಪ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ತನ್ನ ಯಶಸ್ಸಿನಲ್ಲಿ ಗಳಿಸಿದ ನೂರಾರು ಪ್ರಶಸ್ತಿ ಪುರಸ್ಕಾರಕ್ಕಿಂತ ತನ್ನಂತೆ ತಮ್ಮ ಹೋಟೇಲ್ ಕಾರ್ಮಿಕನು ಮಾಲೀಕ ಆಗ್ಬೇಕು. ಪ್ರತೀ ಕಾರ್ಮಿಕನು ಸ್ನೇಹಿತ, ಆಪ್ತ, ಬಂಧು, ಸಹೋದರರೇ ಎನ್ನುವ ಇವರು ಇದೀಗ ತನ್ನ ಮುಡಿಗೆ ಮತ್ತೊಂದು ಗರಿ ಎನ್ನುವಂತೆ ಪುಣೆಯಲ್ಲಿ ತಂದೆಯ ನಾಮದೊಂದಿಗೆ ಹೋಟೆಲ್ ವಿಶ್ವನಾಥ್ ಪ್ಯಾಲೇಸ್ ಶುದ್ದ ಶಾಖಾಹಾರಿ ಹೋಟೆಲನ್ನು ತೆರೆದಿದ್ದಾರೆ.

ಇವರ ಕಠಿನ ಪರಿಶ್ರಮ, ಸ್ವಚ್ಛ ಶುದ್ದತೆಯ ವ್ಯವಹಾರ ಶುಚಿ ರುಚಿಗೆ ಹೆಸರನ್ನು ಪಡೆದಂತೆ ಇವರ ಹೋಟೆಲ್ ನಲ್ಲಿ ಈ ದೇಶ ಕಂಡಂತಹ ಮಹಾನ್ ಸಾಧಕರ ಪೋಟೊಗಳು, ಸ್ವಾತಂತ್ರ್ಯ ಹೋರಾಟಗಾರರು, ಅಧ್ಯಾತ್ಮ, ಸಾಹಿತ್ಯ, ಸಂಗೀತ, ಜನಸೇವೆ, ರಾಜಕೀಯ, ಸಾಮಾಜಿಕ, ವೈದ್ಯಕೀಯ, ಸಿನಿಮಾ ರಂಗಗಳಲ್ಲಿ ಮಹೋನ್ನತ ಸಾಧನೆ ಮಾಡಿದವರ ಫೊಟೊಗಳನ್ನು ಬಹಳ ಅಚ್ಚುಕಟ್ಟಾಗಿ ಜೋಡಿಸಿ ಪ್ರದರ್ಶಿಸಲಾಗಿದೆ. ಅಷ್ಟೇ ಅಲ್ಲದೇ ಜನಸೇವೆಯೆ ಜನಾರ್ಧನ ಸೇವೆ ಅನ್ನೊ ಹಾಗೆ ಈ ದೇಶಕ್ಕಾಗಿ ದೇಶದ ಜನರಿಗಾಗಿ ಎಳ್ಳಷ್ಟೂ ಸ್ವಾರ್ಥವಿಲ್ಲದೇ ಸೇವೆ ನೀಡಿ ತೆರೆಮರೆಯಲ್ಲಿರುವ ಸಾಧಕರನ್ನು ಗುರುತಿಸಿ ಅವರ ಬಗ್ಗೆ ಕಿರುಪರಿಚಯ ನೀಡಿರೋದು ಇಲ್ಲಿನ ಪ್ರಮುಖ ಆಕರ್ಷಣೆ. ಅವರೇ ಇಲ್ಲಿ ಭಾರತದ ಅಮೂಲ್ಯ ರತ್ನಗಳು. ಅನೇಕರಿಗೆ ಈ ಅಮೂಲ್ಯ ರತ್ನಗಳ ಬಗ್ಗೆ ತಿಳಿಯುವ ಅವಕಾಶ ಇಲ್ಲಿಗೆ ಬೇಟಿ ಕೊಟ್ಟಾಗ ಶುಚಿ ರುಚಿಯಾದ ಊಟದ ಜೊತೆಗೆ ಜ್ಞಾನದ ಸವಿ ಸಿಗಬಹುದು. ಇವರ ಈ ಸೇವೆಗೆ ಉತ್ತಮ ಸ್ಪಂದನೆ ದೊರೆಯಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!