ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ಅಳಿಕೆಯಲ್ಲಿ ಮಡಿಯಾಲ ನಾರಾಯಣ ಭಟ್ ಸ್ಮಾರಕ ಸಂಪೂರ್ಣ ಉಚಿತ ಸನಿವಾಸ ಉನ್ನತ ಶಿಕ್ಷಣ ಸಂಸ್ಥೆಯ ಸ್ಥಾಪನೆ ದಕ್ಷಿಣ ಕನ್ನಡ : ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲ ಸಮೀಪದ ಮೈತ್ರೇಯಿ ಗುರುಕುಲಕ್ಕೆ ಸದ್ಗುರು ಶ್ರೀ ಮಧುಸೂದನ ಸಾಯಿಯವರು ದಿನಾಂಕ 15.2024 ರಂದು ಆಗಮಿಸಿ, ಅಜೇಯ ಟ್ರಸ್ಟ್ ನಿಂದ ನಿರ್ಮಿಸಲ್ಪಟ್ಟ ನೂತನ ಭವ್ಯ ವಿದ್ಯಾರ್ಥಿನಿ ನಿಲಯವನ್ನು ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಸಂಸ್ಥೆಯು ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ವೇದಾಧಾರಿತ ಶಿಕ್ಷಣವನ್ನು, ದೇಶದ ಸ್ತ್ರೀ ಸಮುದಾಯಕ್ಕೆ ವಸತಿ- ಊಟೋಪಚಾರ ಸಹಿತ, ಸಂಪೂರ್ಣ ಉಚಿತವಾಗಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯವೆಂದು ಬಣ್ಣಿಸಿದರು.
ಇಂತಹ ವಿಶಿಷ್ಟ ವಿದ್ಯಾಸಂಸ್ಥೆಗಳ ಮೂಲಕ ದೇಶದಲ್ಲಿ ಸನಾತನ ಧರ್ಮದ ಪುನರುಜ್ಜೀವನಕ್ಕಾಗಿ ಸರ್ವರೂ ಒಗ್ಗೂಡಿ ಕಾರ್ಯವೆಸಗಬೇಕೆಂದು ಕರೆಯಿತ್ತರು.ಇದೇ ಸಂದರ್ಭದಲ್ಲಿ ಅಳಿಕೆ ಮತ್ತು ಮುದ್ದೇನಹಳ್ಳಿಯ ಸುಪ್ರಸಿದ್ಧ ಲೋಕ ಸೇವಾ ವಿದ್ಯಾಸಂಸ್ಥೆಗಳ ಸ್ಥಾಪಕರಾದ ದಿl ಮಡಿಯಾಲ ನಾರಾಯಣ ಭಟ್ಟರ ಹೆಸರಿನಲ್ಲಿ, ಅವರ ಜನ್ಮಸ್ಥಳವಾದ ಅಳಿಕೆ ಗ್ರಾಮದಲ್ಲಿ ಒಂದು ಸಂಪೂರ್ಣ ಉಚಿತ ಸನಿವಾಸ ಉನ್ನತ ಶಿಕ್ಷಣ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಇಂತಹ ವಿಶ್ವವಿದ್ಯಾನಿಲಯ ಕೇಂದ್ರವನ್ನು ಸ್ಥಾಪಿಸಿ ದೇಶದ ಯುವ ಜನಾಂಗವನ್ನು ನಿಸ್ವಾರ್ಥ, ತ್ಯಾಗಶೀಲ ದೇಶ ಸೇವಕರನ್ನಾಗಿ ರೂಪಿಸಬೇಕೆಂಬುದು ನಾರಾಯಣ ಭಟ್ಟರ ಉಜ್ವಲ ಆಶಯವಾಗಿತ್ತು.
ಇದುವೇ ಅವರ ಸಹೋದರಿ ದಿl ದೇವಕಿ ಭಟ್ಟರ ಜೀವನದ ಅಂತಿಮ ಆಶಯವು ಆಗಿತ್ತು. ಇಂತಹ ಸಂಸ್ಥೆಯ ಸ್ಥಾಪನೆಗಾಗಿ, ದೇವಕಿ ಭಟ್ ಅವರು ದಾನವಾಗಿ ನೀಡಿರುವ ಅಳಿಕೆಯ ಅವರ ಸ್ವಂತ ಜಮೀನಿನಲ್ಲಿ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಒಂದು ಉನ್ನತ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸುವ ತಮ್ಮ ಸಂಕಲ್ಪವನ್ನು ಶ್ರೀ ಮಧುಸೂದನ ಸಾಯಿ ಅವರು ಪ್ರಕಟಿಸಿದ್ದಾರೆ. ನಾರಾಯಣ ಭಟ್ಟರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ, ನವೆಂಬರ್ 2026ರಲ್ಲಿ ಈ ಉನ್ನತ ಶಿಕ್ಷಣ ಸಂಸ್ಥೆಯು ಕಾರ್ಯೋನ್ಮುಖವಾಗಲಿದೆ. ಅದಕ್ಕೆ ಮೊದಲೇ ಸಂಸ್ಥೆಗೆ ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು.ಈ ಮಹತ್ತರ ಘೋಷಣೆಯ ಸಂದರ್ಭದಲ್ಲಿ ಮಡಿಯಾಲ ನಾರಾಯಣ ಭಟ್ಟರ ನಿಕಟವರ್ತಿಗಳಾಗಿದ್ದ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳು ಮತ್ತು ಪ್ರಶಾಂತಿ ಬಾಲಮಂದಿರ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಬಿ. ಎನ್. ನರಸಿಂಹಮೂರ್ತಿ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ನ ಧರ್ಮದರ್ಶಿಗಳಾದ ಶ್ರೀ ಸಂಜೀವ ಶೆಟ್ಟಿ ಹಾಗೂ ಶ್ರೀ ಮಹೇಂದ್ರ ಹೆಗ್ಗಡೆ ಯವರು ಉಪಸ್ಥಿತರಿದ್ದರು. ಇವರಲ್ಲದೇ ಕೋಟೆಮನೆ ಶ್ರೀ ರಾಮಚಂದ್ರ ಭಟ್ಟರು, ಶ್ರೀ ಸೀತಾರಾಮ ಕೆದಿಲಾಯ, ಕಜಂಪಾಡಿ ಶ್ರೀ ಸುಬ್ರಮಣ್ಯ ಭಟ್ಟರು ಹಾಗೂ ಕಲ್ಲಡ್ಕ ಶ್ರೀ ಪ್ರಭಾಕರ ಭಟ್ಟರು ಈ ಸಭೆಯಲ್ಲಿ ಆಸೀನರಾಗಿದ್ದರು.ಕರ್ನಾಟಕ ರಾಜ್ಯದಲ್ಲಿ ಹತ್ತಾರು ಆದರ್ಶ ವಿದ್ಯಾ ನಿವೇಶನಗಳನ್ನು ಸ್ಥಾಪಿಸಬೇಕೆಂಬುದು ಮಡಿಯಾಲ ನಾರಾಯಣ ಭಟ್ಟರ ಕನಸಾಗಿತ್ತು. ಸದ್ಗುರು ಶ್ರೀ ಮಧುಸೂದನ ಸಾಯಿಯವರು ಭಗವಾನ್ ಸತ್ಯಸಾಯಿ ಬಾಬಾರವರ ಸ್ಪೂರ್ತಿ-ಪ್ರೇರಣೆ-ಅನುಗ್ರಹಗಳಿಂದ ಕಳೆದ ಹತ್ತು ವರ್ಷಗಳಲ್ಲಿ ಅವರ ಎಲ್ಲಾ ಕನಸುಗಳನ್ನು ನನಸು ಮಾಡಿದ್ದಾರೆ.
ಅವರು ಕರ್ನಾಟಕದ 19 ಜಿಲ್ಲೆಗಳಲ್ಲಿ ಅಲ್ಲದೆ ತೆಲಂಗಾಣ ಹಾಗೂ ತಮಿಳುನಾಡಿನಲ್ಲಿಯೂ ಒಂದೊಂದು ಆದರ್ಶ ವಿದ್ಯಾನಿವೇಶನಗಳನ್ನು ಈಗಾಗಲೇ ಸ್ಥಾಪಿಸಿದ್ದಾರೆ. ಇನ್ನೂ ವಿಶೇಷವೆಂದರೆ ಈ ವಿದ್ಯಾ ನಿವೇಶನಗಳಲ್ಲಿ ಎಲ್ಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೂ ವಸತಿ, ಊಟೋಪಚಾರ, ವಸ್ತ್ರ ಸಹಿತ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿರುವುದು. ಇನ್ನೂ ಮುಂದುವರಿದು, ಭಾರತ ದೇಶದಲ್ಲಿ ಸಂಪೂರ್ಣ ಉಚಿತ ಸೇವೆಯನ್ನು ನೀಡುತ್ತಿರುವ ಹನ್ನೆರಡು ಉನ್ನತ ಆಸ್ಪತ್ರೆಗಳನ್ನು ಹಾಗೂ ಫಿಜಿ, ಶ್ರೀಲಂಕಾ ಮತ್ತು ನೈಜೀರಿಯಾ ದೇಶಗಳಲ್ಲಿ ಒಂದೊಂದು ಆಸ್ಪತ್ರೆಯನ್ನು ಪ್ರಾರಂಭಿಸಿದ್ದಾರೆ. ಭಾರತದ 17 ಪ್ರಾಂತ್ಯಗಳಲ್ಲಿ ಹಾಗೂ ಕೆಲವು ಹೊರಗಿನ ದೇಶಗಳಲ್ಲಿ ಸೇರಿ ಒಟ್ಟು 30 ದಶಲಕ್ಷ ಮಕ್ಕಳಿಗೆ ಪ್ರತಿದಿನ ಪೌಷ್ಟಿಕತೆಯನ್ನು ವೃದ್ಧಿಗೊಳಿಸುವ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ. ಐದು ವರ್ಷಗಳ ಹಿಂದೆ ತಾವು ಸ್ಥಾಪಿಸಿದ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಇದೇ ವರ್ಷ ದೇಶದ ಮೊಟ್ಟ ಮೊದಲ ಸಂಪೂರ್ಣ ಉಚಿತ ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಪ್ರಾರಂಭಿಸಿದ್ದಾರೆ. ಈ ಮೆಡಿಕಲ್ ಕಾಲೇಜನ್ನು ಉದ್ಘಾಟಿಸಲು ದೇಶದ ಘನವೆತ್ತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮುದ್ದೇನಹಳ್ಳಿಗೆ 2023ರ ಮಾರ್ಚ್ 25ರಂದು ಆಗಮಿಸಿದುದು ಒಂದು ವಿಶೇಷ.ಅಳಿಕೆ ಗ್ರಾಮದಲ್ಲಿ ಈ ಮೊದಲೇ ಶ್ರೀ ಮಧುಸೂದನ ಸಾಯಿಯವರು ಲೋಕಸೇವಾ ವಿದ್ಯಾಸಂಸ್ಥೆಗಳ ಸುವರ್ಣ ಮಹೋತ್ಸವ ಸಂದರ್ಭದಲ್ಲಿ 45,000 ಚದರ ಅಡಿಗಳ ಒಂದು ಭವ್ಯ ಪದವಿಪೂರ್ವ ಕಾಲೇಜು ಕಟ್ಟಡವನ್ನು ನಿರ್ಮಿಸಿರುತ್ತಾರೆ. ಅಲ್ಲದೆ ನಾರಾಯಣ ಭಟ್ಟರು ಜನಿಸಿದ ಮಡಿಯಾಲದ ಮೂಲ ಗೃಹವನ್ನು ನವೀಕರಿಸಿರುತ್ತಾರೆ. ಇದೀಗ ಅವರು ಇಂದು ಘೋಷಿಸಿರುವ ನಾರಾಯಣ ಭಟ್ಟರ ಹೆಸರಿನಲ್ಲಿನ ಸಂಪೂರ್ಣ ಉಚಿತ ಉನ್ನತ ಶಿಕ್ಷಣ ಸಂಸ್ಥೆಯು ಈ ಪ್ರದೇಶದಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆಯಲೆಂಬುದು ಸಾರ್ವಜನಿಕರ ಆಶಯವಾಗಿದೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…