ಸುರತ್ಕಲ್ : ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ದೇಲಂತಬೆಟ್ಟು ಇಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪರಮಾನಂದ ಸಾಲ್ಯಾನ್ ರಚಿಸಿ ನಿರ್ದೇಶಿಸಿರುವ “ಬಾಲೆಗ್ ಒಲಿಯಿನ ಭ್ರಾಮರಿ” ತುಳು ಭಕ್ತಿಪ್ರಧಾನ ನಾಟಕದ ಮುಹೂರ್ತ ಸಮಾರಂಭವು ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತದಲ್ಲಿ ನಡೆಯಿತು.
ಶುಭಮುಹೂರ್ತಕ್ಕೆ ಶಿಬರೂರು ಗುತ್ತು ಉಮೇಶ್ ಎನ್ ಶೆಟ್ಟಿ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಹಿಳಾ ಮಂಡಳಿಯ ಸದಸ್ಯೆಯರು ಅಭಿನಯಿಸುವ ಬಾಲೆಗ್ ಒಲಿಯಿನ ಭ್ರಾಮರಿ ನಾಟಕ ಯಶಸ್ವಿಯಾಗಲಿ. ಈ ನಾಟಕದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರಿಗೆ ಶ್ರೀ ಕ್ಷೇತ್ರದ ದೈವದ ಆಶೀರ್ವಾದ, ಅನುಗ್ರಹ ಇರಲಿ. ಕಟೀಲು ಭ್ರಾಮರಂಭಿಕೆಯ ಕತೆಯನ್ನಾಧರಿಸಿದ ನಾಟಕ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಯಶಸ್ಸು ಕಾಣಲಿ. ಇದಕ್ಕೆ ಎಲ್ಲರ ಸಹಕಾರವೂ ಅಗತ್ಯ ಎಂದರು. ಸಮಾರಂಭದಲ್ಲಿ ಪ್ರದ್ಯುಮ್ನ ರಾವ್ ಕಯ್ಯೂರು ಗುತ್ತು, ಸುಧಾಕರ್ ಶಿಬರೂರು, ತುಕಾರಾಮ್ ಶೆಟ್ಟಿ ಪರ್ಲಬೈಲು ಗುತ್ತು, ಸುಷಾಮ ಶೆಟ್ಟಿ ಶಿಬರೂರು ಗುತ್ತು, ಜಿತೇಂದ್ರ ಶೆಟ್ಟಿ ಕೊರ್ಯಾರ್ ಗುತ್ತು, ಸುಬ್ರಹ್ಮಣ್ಯ ಪ್ರಸಾದ್ ಕೊರಿಯರ್, ಮಹಿಳಾ ಮಂಡಳಿಯ ಅಧ್ಯೆಕ್ಷೆ ಸುಪ್ರಜಾ ಪ್ರಸಾದ್, ಸುಜಾತ ಶೆಟ್ಟಿ, ಸೂರಿಂಜೆ ಗ್ರಾಮಪಂಚಾಯತ್ ಅಧ್ಯೆಕ್ಷೆ ಗೀತಾ ಶೆಟ್ಟಿ, ಆಶಾ ಶೆಟ್ಟಿ ಶಿಬರೂರು, ಸಾರಿಕಾ ಶೆಟ್ಟಿ, ಸುಲೋಚನಾ ನವೀನ್, ನಾಟಕ ರಚನೆಕಾರ, ನಿರ್ದೇಶಕ ಪರಮಾನಂದ ಸಾಲ್ಯಾನ್ ಸಸಿಹಿತ್ಲು, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಬಾಲೆಗ್ ಒಲಿಯಿನ ಭ್ರಾಮರಿ ನಾಟಕದ ಪಾತ್ರಧಾರಿಗಳಿಗೆ ಪಾತ್ರಗಳ ವಿತರಣೆಯನ್ನು ಪರಮಾನಂದ ಸಾಲ್ಯಾನ್ ಮಾಡಿದರು. ಭಕ್ತಿ ಪ್ರಧಾನ ನಾಟಕದಲ್ಲಿ ಕಲಾವಿದರು ಶ್ರದ್ದಾ ಭಕ್ತಿಯಿಂದ ಪಾತ್ರ ನಿರ್ವಹಿಸುವಂತೆ ವಿನಂತಿಸಿದರು. ಮಹಿಳಾ ಮಂಡಳಿಯ ಸದಸ್ಯೆಯರಿಂದ ನಾಟಕ ಪ್ರದರ್ಶನಗೊಳ್ಳುತ್ತಿದೆ. ಆಶಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…