ಬೈಕ್ ಸ್ಕಿಡ್ ಆದ ಪರಿಣಾಮ ಸವಾರ ಇಂಜಿನಿಯರಿAಗ್ ವಿದ್ಯಾರ್ಥಿ ಮೃತಪಟ್ಟ ಹಾಗೂ ಸಹಸವಾರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಪರ್ಪಲೆ ಗುಡ್ಡದ ತಿರುವಿನಲ್ಲಿ ಸಂಭವಿಸಿದೆ.

ಬ್ರಹ್ಮಾವರ ನಿವಾಸಿ ಆಕಾಶ್ ಕಾಂಚನ್ ಮೃತ ವಿದ್ಯಾರ್ಥಿಯಾಗಿದ್ದಾನೆ. ನಿಟ್ಟೆಯ ಖಾಸಗಿ ಕಾಲೇಜಿನಲ್ಲಿ ಮೆಕ್ಯಾನಿಕ್ ಇಂಜಿನಿಯರಿAಗ್ ಓದುತಿದ್ದ ಇವರು ಕಾಲೇಜಿನಲ್ಲಿ ವಾರ್ಷಿಕೋತ್ಸವ ಇದ್ದ ಕಾರಣ ಸ್ನೇಹಿತರೊಡಗೂಡಿ ಪ್ರತ್ಯೇಕ ಬೈಕ್‌ಗಳಲ್ಲಿ ತೆರಳುತಿದ್ದ ವೇಳೆ ಘಟನೆ ನಡೆದಿದೆ. ಘಟನೆಯಲ್ಲಿ ಸವಾರ, ಸಹಸವಾರ ವಿದ್ಯಾರ್ಥಿಗಳಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಆಕಾಶ್ ಗಂಭೀರ ಗಾಯಗೊಂಡು ಮೃತಪಟ್ಟರೆ, ಸಹಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



