ಕರಾವಳಿ ಕರ್ನಾಟಕದ ಕಲಾವಿದರಿಗೆ ಸಹಕರಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಢೇಶನಿನ ಹತ್ತು ಹಲವು ಯೋಜನೆಗಳಲ್ಲಿ ಪಟ್ಲ ಯಕ್ಷಾಶ್ರಯ ಯೋಜನೆಯು ಪ್ರಸ್ತುತ ಯಶಸ್ವಿಯಾಗುತ್ತಿದೆ.

ಪಟ್ಲ ಯಕ್ಷಾಶ್ರಯ ಯೋಜನೆಯಡಿ ಯಕ್ಷಗಾನ ರಂಗದ ಹಿರಿಯ ಕಲಾವಿದರು ಸಸಿಹಿತ್ಲು ಭಗವತೀ ಮೇಳದ ಗುಡ್ಡಪ್ಪ ಸುವರ್ಣರಿಗೆ, ಸುಳ್ಯ ತಾಲೂಕಿನ ಪಂಜ ಗ್ರಾಮದಲ್ಲಿ ಪಟ್ಲ ಫೌಂಡೇಶನಿನ ಮೂಲಕ ನೂತನ ಮನೆಯನ್ನು ನಿರ್ಮಿಸಿ ಗೃಹಪ್ರವೇಶ ಕಾರ್ಯಕ್ರಮ ನೆರವೇರಿಸಿ ಬಳಿಕ ಮನೆಯನ್ನು ಹಸ್ತಾಂತರಿಸಲಾಯಿತು.
ಕೊಡುಗೈ ದಾನಿಗಳು, ಫೌಂಡೇಶನಿನ ಮಹಾದಾನಿಗಳೂ ಆದ ಶಶಿಧರ ಬಿ.ಶೆಟ್ಟಿ ಬರೋಡರವರ ಹೆಸರಿನಲ್ಲಿ ಈ ಮನೆಯನ್ನು ನಿರ್ಮಿಸಲಾಗಿದ್ದು, ನೂತನ ಮನೆಯ ಕೀ ಯನ್ನ ಗುಡ್ಡಪ್ಪ ಸುವರ್ಣ ದಂಪತಿಗೆ ನಿಡಲಾಯಿತು. ದಂಪತಿ ಮಹಾದಾನಿಗಳಾದ ಶಶಿಧರ ಬಿ ಶೆಟ್ಟಿ ಬರೋಡವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನೂ ಈ ಸಂದರ್ಭದಲ್ಲಿ ಪುತ್ತೂರು ಘಟಕದ ಗೌರವಾಧ್ಯಕ್ಷರಾದ ಸವಣೂರು ಸೀತಾರಾಮ ರೈ, ಹಿರಿಯ ಕಲಾವಿದರಾದ ಸರಪಾಡಿ ಅಶೋಕ್ ಶೆಟ್ಟಿ, ಸಸಿಹಿತ್ಲು ಮೇಳದ ಯಜಮಾನರಾದ ರಾಜೇಶ್ ಗುಜರನ್, ಸುಳ್ಯ ಘಟಕದ ಶ್ರೀನಾಥ್ ರೈ, ಪ್ರೀತಮ್ ರೈ, ಬೆಳ್ಳಾರೆ ರಮೇಶ್ ರೈ, ಪ್ರಶಾಂತ್ ರೈ ಪಂಜ, ಡಾ. ಪ್ರಖ್ಯಾತ ಶೆಟ್ಟಿ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಸ್ಥಾಪಕಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.



