ಕಾರು ಅಪಘಾತ ಸಂಭವಿಸಿದ ಪ್ರಕರಣದಲ್ಲಿ ಕಾರು ಚಾಲಕ ತಂದೆಯ ಮೇಲೆ ಮಗ ದೂರು ನೀಡಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬಂದಾರು ನರಮಜೆ ನಿವಾಸಿ ಹನೀಫ್ ಎಂಬವರು ಆತನ ತಂದೆಯಾದ ಹಮೀದ್ ಎಂಬವರ ಮೇಲೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನೆಯ ವಿವರ:
ಹಮೀದ್ ಅವರು ಬೆಳ್ತಂಗಡಿಯಿಂದ ಉಳ್ಳಾಲ ದರ್ಗಾಕ್ಕೆ ಹೋಗುವರಿದ್ದು, ಕಾರಿನಲ್ಲಿ ಪತ್ನಿ ಜಮೀಳಾ, ಮಕ್ಕಳಾದ ಮೊಹಮ್ಮದ್ ಅನಿಝ್, ಹಮೀದ್, ಅಜ್ಮಿಯಾ ಹಾಗೂ ಮಗಳ ಮಗ ಮೊಹಮ್ಮದ್ ಝಯಾನ್ಅವರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಸಜೀಪ ನಡು ಗ್ರಾಮದ ಕೋಟೆ ಕಣಿ ಎಂಬಲ್ಲಿ ಕಾರು ಸ್ಕಿಡ್ ಆಗಿ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ . ಘಟನೆಯಿಂದ ಕಾರಿನಲ್ಲಿದ್ದ ಎಲ್ಲರಿಗೂ ಗಾಯವಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಹಮೀದ್ ಅವರು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಕಾರಣ ಕಾರು ಗುಂಡಿಗೆ ಬಿದ್ದಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ



