ಕುಂಬಳೆ: ಅಂಗಡಿಮೊಗರು ಸಮೀಪದ ಇತಿಹಾಸ ಪ್ರಸಿದ್ಧ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದಲ್ಲಿ ವಾರ್ಷಿಕ ಶಿವರಾತ್ರಿ ಮಹೋತ್ಸವದ ಸಂದರ್ಭ ಕೊಡುಗೈ ದಾನಿ,ಉದ್ಯಮಿ ,ಸಮಾಜ ಸೇವಕ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರನ್ನು ಕ್ಷೇತ್ರ ಸಮಿತಿ ಜತೆಗೆ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕವಾಗಿ ಸನ್ಮಾನಿಸಿ ಅಭಿನಂದಿಸಿತು.
ಕ್ಷೇತ್ರ ಆಡಳಿತ ಮೊಕ್ತೇಸರ ನ್ಯಾಯವಾದಿ ಬಿ.ಸುಬ್ಬಯ್ಯ ರೈ ಅವರ ಆಧ್ಯಕ್ಷತೆಯಲ್ಲಿ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರನ್ನು ಪುತ್ತಿಗೆ ಗ್ರಾಮ ಪಂಚಾಯತಿಯ ಹಲವಾರು ಸಂಘ ಸಂಸ್ಥೆಯ ಪರವಾಗಿ ಪ್ರಮುಖರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಧರ್ಮಕಾರ್ಯಗಳಿಗೆ ಹಲವೆಡೆ ಸಿಕ್ಕಿದ ಸಂತೋಷದ ಜತೆಗೆ ಇವುಗಳನ್ನು ಗುರುತಿಸುವ ಜನರಿದ್ದಾರೆ ಎನ್ನವುದರಿಂದ ತಾನು ತೃಪ್ತ ಎಂದರು.
ಶಿಕ್ಷಕ ರಾಜರಾಮ ರಾವ್ ಧಾರ್ಮಿಕ ಭಾಷಣಗೈದರು. ದೇಲಂಪಾಡಿ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಿರಿಧರ ಶೆಟ್ಟಿ ಮಂಗಳೂರು,ಪುತ್ತಿಗೆ ಗ್ರಾ. ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಮಲಬಾರ್ ದೇವಸ್ವಂ ಬೋರ್ಡು ಸದಸ್ಯ ಎಂ. ಶಂಕರ ರೈ ಮಾಸ್ತರ್, ಅಭಿಮತ ಟಿವಿ ವಾಹಿನಿಯ ಜನರಲ್ ಮೆನೆಜರ್ ದಾಮೋದರ ಶೆಟ್ಟಿ ಪಟ್ಲ,ಪುತ್ತಿಗೆ ಗ್ರಾ.ಪಂ.ಸದಸ್ಯೆ ಪ್ರೇಮಾ ಎಸ್.ರೈ ಕೊರತ್ತಿಪಾರೆ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರ ರಸ್ತೆಯನ್ನು ಮರು ಡಾಮರೀಕರಣಗೊಳಿಸಿ ಅಭಿವೃದ್ಧಿಪಡಿಸಲು ಶ್ರಮಿಸಿದ ಪುತ್ತಿಗೆ ಗ್ರಾ. ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ,ಸದಸ್ಯೆ ಪ್ರೇಮ ಎನ್ ರೈ ಅವರನ್ನು ಕ್ಷೇತ್ರಾಡಳಿತದ ಪರವಾಗಿ ಸನ್ಮಾನಿಸಲಾಯಿತು. ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರನ್ ಸ್ವಾಗತಿಸಿ ಕಾರ್ಯದರ್ಶಿ ಕೇಶವ ಡಿ ವಂದಿಸಿದರು.ಡಿ.ರಾಜೇಂದ್ರ ರೈ ನಿರೂಪಿಸಿದರು. ಬಳಿಕ ನವಚೇತನ ಯೂತ್ ಕ್ಲಬ್ ಬಾಡೂರು ಇವರಿಂದ “ಕಾಸ್ ದ ಕಸರತ್ತ್” ತುಳು ನಾಟಕ ಪ್ರದರ್ಶನಗೊಂಡಿತು.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…