ದಕ್ಷಿಣ ಕನ್ನಡ : ಮೂಡಬಿದ್ರೆ ಸಮೀಪದ ವಿಠೋಬಾ ರುಕುಮಾಯಿ ದೇವಸ್ಥಾನ ಶ್ರೀನಿವಾಸಪುರ ಗುಂಡ್ಯಡ್ಕ ಇಲ್ಲಿ ದಿನಾಂಕ ಮಾರ್ಚ್ 13 ರಿಂದ 18ರವರೆಗೆ ಲೋಕಕಲ್ಯಾಣಾರ್ಥವಾಗಿ ಶತಚಂಡಿಕಾಯಾಗ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು, ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ ಸಹಕಾರ ನೀಡಿ ಶ್ರೀ ದುರ್ಗಾಮಾತೆಯ ಪೂರ್ಣ ಅನುಗ್ರಹಕ್ಕೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಆಮಂತ್ರಣ ಪತ್ರದಲ್ಲಿ ವಿನಂತಿಸಿದೆ.


ದಿನಾಂಕ 13 ರಂದು ಉಗ್ರಾಣ ಮುಹೂರ್ತ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅನ್ನ ಸಂತರ್ಪಣೆ, ಹಾಗೂ ಭಜನಾ ಕಾರ್ಯಕ್ರಮ ನೆರವೇರಲಿದ್ದು, ದಿನಾಂಕ 14 ರಂದು ಸಪ್ತಶತಿ ಪಾರಾಯಣ ಸಹಿತ ವಿವಿಧ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಮತ್ತು ಅನ್ನದಾನ, ದುರ್ಗಾ ನಮಸ್ಕಾರ ಪೂಜೆ, ಭಜನಾ ಕಾರ್ಯಕ್ರಮ, ದಿನಾಂಕ 15 ರಂದು ಲಕ್ಷ್ಮೀನಾರಾಯಣ ಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅನ್ನ ಸಂತರ್ಪಣೆ ಹಾಗೂ ಅಷ್ಟಾವಧಾನ ಸಹಿತ ಧಾರ್ಮಿಕ ಕಾರ್ಯಕ್ರಮಗಳು, ದಿನಾಂಕ 16 ರಂದು ಮೃತ್ಯುಂಜಯ ಹೋಮ, ಸೌರಸೂಕ್ತ ಹೋಮ ಅನ್ನದಾನ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದಿನಾಂಕ 17ರಂದು ರುದ್ರ ಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅನ್ನಸಂಪರ್ಪಣೆ ದುರ್ಗಾ ನಮಸ್ಕಾರ, ದೀಪಾರಾದನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ದಿನಾಂಕ 18 ರಂದು ಪ್ರಾತಕಾಲ 6:00ಗೆ ಶತಚಂಡಿಕಾಯಾಗದ ಅಗ್ನಿ ಪ್ರತಿಷ್ಠೆ, ಕಲಶ ಪೂಜೊಂದಿಗೆ ಶತಚಂಡಿಕಾಯಾಗ ಆರಂಭ, ನಂತರ ಯಾಗದ ಪೂರ್ಣಹುತಿ, ಕುಮಾರಿ ಪೂಜೆ, ಸುಹಾಸಿನಿ ಪೂಜೆ,ದಂಪತಿ ಪೂಜೆ, ಸಹಿತ ಶತಚಂಡಿಕಾಯಾಗ ನೆರವೇರಲಿದ್ದು, ದೇವರ ಮಹಾಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ, ವಿಠೋಬಾ ರುಕುಮಾಯಿ ದೇವಸ್ಥಾನದ ಆಡಳಿತ ಮಂಡಳಿ ಆಮಂತ್ರಣ ಪ್ರಕಟಣೆಯಲ್ಲಿ ತಿಳಿಸಿದೆ.





