ದಕ್ಷಿಣ ಕನ್ನಡ : ಮೂಡಬಿದ್ರೆ ಸಮೀಪದ ವಿಠೋಬಾ ರುಕುಮಾಯಿ ದೇವಸ್ಥಾನ ಶ್ರೀನಿವಾಸಪುರ ಗುಂಡ್ಯಡ್ಕ ಇಲ್ಲಿ ದಿನಾಂಕ ಮಾರ್ಚ್ 13 ರಿಂದ 18ರವರೆಗೆ ಲೋಕಕಲ್ಯಾಣಾರ್ಥವಾಗಿ ಶತಚಂಡಿಕಾಯಾಗ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು, ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ ಸಹಕಾರ ನೀಡಿ ಶ್ರೀ ದುರ್ಗಾಮಾತೆಯ ಪೂರ್ಣ ಅನುಗ್ರಹಕ್ಕೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಆಮಂತ್ರಣ ಪತ್ರದಲ್ಲಿ ವಿನಂತಿಸಿದೆ.
ದಿನಾಂಕ 13 ರಂದು ಉಗ್ರಾಣ ಮುಹೂರ್ತ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅನ್ನ ಸಂತರ್ಪಣೆ, ಹಾಗೂ ಭಜನಾ ಕಾರ್ಯಕ್ರಮ ನೆರವೇರಲಿದ್ದು, ದಿನಾಂಕ 14 ರಂದು ಸಪ್ತಶತಿ ಪಾರಾಯಣ ಸಹಿತ ವಿವಿಧ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಮತ್ತು ಅನ್ನದಾನ, ದುರ್ಗಾ ನಮಸ್ಕಾರ ಪೂಜೆ, ಭಜನಾ ಕಾರ್ಯಕ್ರಮ, ದಿನಾಂಕ 15 ರಂದು ಲಕ್ಷ್ಮೀನಾರಾಯಣ ಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅನ್ನ ಸಂತರ್ಪಣೆ ಹಾಗೂ ಅಷ್ಟಾವಧಾನ ಸಹಿತ ಧಾರ್ಮಿಕ ಕಾರ್ಯಕ್ರಮಗಳು, ದಿನಾಂಕ 16 ರಂದು ಮೃತ್ಯುಂಜಯ ಹೋಮ, ಸೌರಸೂಕ್ತ ಹೋಮ ಅನ್ನದಾನ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದಿನಾಂಕ 17ರಂದು ರುದ್ರ ಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅನ್ನಸಂಪರ್ಪಣೆ ದುರ್ಗಾ ನಮಸ್ಕಾರ, ದೀಪಾರಾದನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ದಿನಾಂಕ 18 ರಂದು ಪ್ರಾತಕಾಲ 6:00ಗೆ ಶತಚಂಡಿಕಾಯಾಗದ ಅಗ್ನಿ ಪ್ರತಿಷ್ಠೆ, ಕಲಶ ಪೂಜೊಂದಿಗೆ ಶತಚಂಡಿಕಾಯಾಗ ಆರಂಭ, ನಂತರ ಯಾಗದ ಪೂರ್ಣಹುತಿ, ಕುಮಾರಿ ಪೂಜೆ, ಸುಹಾಸಿನಿ ಪೂಜೆ,ದಂಪತಿ ಪೂಜೆ, ಸಹಿತ ಶತಚಂಡಿಕಾಯಾಗ ನೆರವೇರಲಿದ್ದು, ದೇವರ ಮಹಾಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ, ವಿಠೋಬಾ ರುಕುಮಾಯಿ ದೇವಸ್ಥಾನದ ಆಡಳಿತ ಮಂಡಳಿ ಆಮಂತ್ರಣ ಪ್ರಕಟಣೆಯಲ್ಲಿ ತಿಳಿಸಿದೆ. ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…