ಹಳೆಯಂಗಡಿ : ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನ ಪಾವಂಜೆ ಇದರ ವರ್ಷಾವಧಿ ಜಾತ್ರಾ ಮಹೋತ್ಸವದಂದು ಓಂ ಕ್ರಿಕೆಟರ್ಸ್ ಪಾವಂಜೆ ಇದರ 15ನೇ ವರ್ಷದ ವಾರ್ಷಿಕೋತ್ಸವವನ್ನು ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾವಂಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀ ಚಂದ್ರಶೇಖರ ನಾನಿಲ್, ಉದ್ಯಮಿ ಶ್ರೀ ಶಶೀಂದ್ರ ಸಾಲ್ಯಾನ್ ಹಳೆಯಂಗಡಿ, ಶ್ರೀ ವಿನೋದ್ ಬೆಳ್ಳಾಯರು, ಓಂ ಕ್ರಿಕೆಟರ್ಸ್ ಪಾವಂಜೆ ಅಧ್ಯಕ್ಷರಾದ ಶರತ್, ಉಪಾಧ್ಯಕ್ಷರಾದ ರೋಹಿತ್ ಸಾಲ್ಯಾನ್, ಕಾರ್ಯದರ್ಶಿ, ಕಿರಣ್ ರಾಜ್ ಹಾಗೂ ಹಿರಿಯ ಮಾರ್ಗದರ್ಶಕರಾದ ಹರೀಶ್ ಅಡ್ಯಾರ್, ಮನೋಜ್ ಮತ್ತು ಅರುಣ್ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸೇವೆಯನ್ನು ಗೈದಿರುವ ರಕ್ಷಕ್ ಆಂಬುಲೆನ್ಸ್ ನ್ನು ಸಮಾಜಕ್ಕೆ ನೀಡಿರುವ ಪೂಜಾ ಎರೇಂಜರ್ಸ್ ಮಾಲಕರಾದ ಶ್ರೀ ಜಯಕೃಷ್ಣ ಕೋಟ್ಯಾನ್ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿರುವ ಶ್ರೀ ಬಶೀರ್ ಚೇಳಾಯರು ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿ ವೇತನ ಹಾಗೂ ಆರೋಗ್ಯ ನಿಧಿಯನ್ನು ವೇದಿಕೆಯಲ್ಲಿ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಠ್ಠಲ್ ನಾಯಕ್ ಕಲ್ಲಡ್ಕರವರಿಂದ ಗೀತ ಸಾಹಿತ್ಯ ಸಂಭ್ರಮ ಮತ್ತು ರಂಗತರಂಗ ಕಲಾವಿದರು ಕಾಪು ಇವರಿಂದ ತುಳು ಹಾಸ್ಯಮಯ ನಾಟಕ ‘ಒರಿಯೆ’ ಪ್ರದರ್ಶನಗೊಂಡಿತು ಕಾರ್ಯಕ್ರಮವನ್ನು ಫೇಮಸ್ ಯೂತ್ ಕ್ಲಬ್ ಅಧ್ಯಕ್ಷರಾದ ಶ್ರೀ ಭಾಸ್ಕರ್ ಅಮೀನ್ ತೋಕೂರುರವರು ನಿರೂಪಿಸಿದರು.



