ಜನ ಮನದ ನಾಡಿ ಮಿಡಿತ

Advertisement

ಶಿಬರೂರು ಬ್ರಹ್ಮಕಲಶೋತ್ಸವಕ್ಕೆ ಧರ್ಮಸ್ಥಳದಿಂದ ,10 ಲಕ್ಷ ರೂಪಾಯಿ

ಸುರತ್ಕಲ್; ಶಿಬರೂರು ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪ್ರಸಾದ ರೂಪವಾಗಿ 10 ಲಕ್ಷ ಬಂದಿರುವುದು ನಮಗೆ ಸಂತಸ ತಂದಿದೆ.

ಮಂಜುನಾಥ ಸ್ವಾಮಿ, ಸ್ವಾಮಿ, ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವದಅನುಗ್ರಹದಿಂದ ಉತ್ಸವ ಸಾಂಗವಾಗಿ ನೆರವೇರುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಿಬರೂರೂರು ಬ್ರಹ್ಮಶ್ರೀ ವೇದವ್ಯಾ ಸ ತಂತ್ರಿ ಹೇಳಿದರು ಅವರು ಶಿಬರೂರು ಶ್ರೀ ಉಳ್ಳಾಯ ಮತ್ತು‌ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡಿದ 10 ಲಕ್ಷ ರೂಪಾಯಿ ಚೆಕ್ ಸ್ವೀಕರಿಸಿ ಮಾತನಾಡಿದರು.

ಮಾಜಿ ಸಚಿವ ಅಭಯಚಂದ್ರಜೈನ್ ಮಾತನಾಡಿ ಧರ್ಮಸ್ಥಳ ಕ್ಷೇತ್ರದಿಂದ 10 ಲಕ್ಷ ಬಂದ ನಂತರ ಶಿಬರೂರು ಕ್ಷೇತ್ರಕ್ಕೆ ಬರುವ ಎಲ್ಲ ಅನುದಾನಗಳು ಕೂಡಿ ಬರುತ್ತದೆ, ಕ್ಷೇತ್ರಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಅನುದಾನ, ಉದ್ಯಮಿಗಳ ಸಹಕಾರ ಬರಲಿ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ ಚೆಕ್ ಹಸ್ತಾಂತರಿಸಿದರು.


ಈ ಸಂದರ್ಭ ಶಿಬರೂರುಗುತ್ತು ಪ್ರಶಾಂತ್ ಶೆಟ್ಟಿ ,ಸುಧಾಕರ ಶೇಣವ ದೇಂದೊಟ್ಟುಗುತ್ತು, ಜೀತೇಂದ್ರ ಶೆಟ್ಟಿ ಕೊರ್ಯಾರುಗುತ್ತು, ಶಿವಾನಂದ ಶೆಟ್ಟಿ ಪಡುಮನೆ, ಜಗದೀಶ್ ಶೆಟ್ಟಿ ಪರ್ಲಬೈಲು ಗುತ್ತು, ಸುಧಾಕರ ಶೆಟ್ಟಿ ಬಾಂಗಾವು, ಸೂರಿಂಜೆ ಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ, ಭುವನಾಭಿರಾಮ ಉಡುಪ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಬಜಪೆ ತಾಲೂಕು ಯೋಜನಾಧಿಕಾರಿ ಕರುಣಾಕರ ಆಚಾರ್ಯ, ಮೇಲ್ವಿಚಾರಕ ಅರಣಾ ಸಾಲಿಯಾನ್, ಅಧ್ಯಕ್ಷ ರವೀಂದ್ರ ಭಟ್ ಕಾರ್ಯದರ್ಶಿಗಳಾದ ಆಶಾ ಶೆಟ್ಟಿ ಶಿಬರೂರು, ಸುಜಾತಾ ಶೆಟ್ಟಿ ಕೊರ್ಯಾರು, ರೋಹಿತಾಶ್ವ ಆಚಾರ್ಯ,
ಸುಮನ್ ಶೆಟ್ಟಿ, ವಿನೀತ್ ಶೆಟ್ಟಿ, ಗೀತಾ ಮಡಿವಾಳ, ಸುರೇಶ್ ಕೈಯೂರು, ದಿನೇಶ್ ಕುಲಾಲ್, ನಿತ್ಯನ್ ಶೆಟ್ಟಿ ಶಿಬರೂರು ಗುತ್ತು, ಪ್ರಭಾಕರ ಶೆಟ್ಟಿ ಪೊಸಕಟ್ಟ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!