ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಸರಕಾರ ನೇಮಕ ಮಾಡಿದೆ.

ದೇವಸ್ಥಾನದ ಅರ್ಚಕರಾದ ಮಧುಸೂಧನ್ ಆಚಾರ್ಯ, ವಿಶ್ವನಾಥ ಕೊಯಿಕುಡೆ, ಶೋಭಾ ವಿ ಅಂಚನ್, ಕೊಪ್ಪಲ ಹೌಸ್,ಮುಕ್ಕ, ಸವಿತಾ ಶರತ್ ಕುಮಾರ್ ಬೆಳ್ಳಾಯರು, ಪುರುಷೋತ್ತಮ್ ಕೋಟ್ಯಾನ್ ತೋಕೂರು, ಗುರುರಾಜ್ ಎಸ್ ಪೂಜಾರಿ ತೋಕೂರು, ಭಾಸ್ಕರ ದೇವಾಡಿಗ ಕೆರೆಮನೆ ತೋಕೂರು, ಅಶೋಕ್ ಆರ್ ಕುಂದರ್ ಕಂಬಳಬೆಟ್ಟು ತೋಕೂರು, ಸಂಪತ್ ಕುಮಾರ್ ಶೆಟ್ಟಿ ತೋಕೂರು ವ್ಯವಸ್ಥಾಪನಾ ಸಮಿತಿಗೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಆಯುಕ್ತರ ಪ್ರಕಟಣೆ ತಿಳಿಸಿದೆ.

ನೂತನವಾಗಿ ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಆಯ್ಕೆಯಾದ ಸದಸ್ಯರನ್ನು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ, ಮಾಜೀ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕೆಪಿಸಿಸಿ ಕೋ ಆರ್ಡಿನೇಟರ್ ಎಚ್ ವಸಂತ್ ಬರ್ನಾಡ್ ಸಹಿತ ಅನೇಕ ಮುಖಂಡರು ಅಭಿನಂದಿಸಿದ್ದಾರೆ.



