ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ(ಕೆಡಿಪಿ) ಸಮಿತಿ ಗೆ ನೂತನ ಸದಸ್ಯರನ್ನು ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನಗೊಳಿಸಿ ಸರಕಾರ ಆದೇಶ ನೀಡಿದೆ.

ದಿನೇಶ್ ಸುವರ್ಣ ಬೆಳ್ಳಾಯರು, ಸಂತಾನ್ ಡಿಸೋಜಾ ತಾಳಿಪ್ಪಾಡಿ,ಐಕಳ, ಮಹೇಶ್ ಕೆಎಸ್ ರಾವ್ ನಗರ ಮುಲ್ಕಿ, ಮೊಹಮ್ಮದ್ ಶಮೀರ್, ಕೆಎಸ್ ರಾವ್ ನಗರ ಮುಲ್ಕಿ, ಚಂದ್ರಶೇಖರ, ಕೊಯಿಕುಡೆ, ರೇಖಾ ಕೆರೆಕಾಡು, ಕೆಂಚನಕೆರೆ ಕಿಲ್ಪಾಡಿ ರವರನ್ನು ಸರಕಾರ ನೇಮಕ ಮಾಡಿ ಆದೇಶ ನೀಡಿದೆ.
ನೂತನವಾಗಿ ಆಯ್ಕೆಯಾದ ಕೆ ಡಿ ಪಿ ಸದಸ್ಯರನ್ನು ಮಾಜೀ ಸಚಿವ ಅಭಯಚಂದ್ರ ಜೈನ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಕೆಪಿಸಿಸಿ ಕೋಆರ್ಡಿನೇಟರ್ ವಸಂತ ಬರ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಅಭಿನಂದಿಸಿದ್ದಾರೆ



