ಬಂಟ್ವಾಳ: ಪರವಾನಗಿಯಿಲ್ಲದೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸಹಿತ ಸಾವಿರಾರು ರೂ ಮೌಲ್ಯದ ಮಧ್ಯವನ್ನು ವಶಪಡಿಸಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮಂಚಿ ಎಂಬಲ್ಲಿ ನಡೆದಿದೆ.
ಮಂಚಿಕಟ್ಟೆ ಎಂಬಲ್ಲಿ ಸುಧಾಕರ್ ಎಂಬವರು ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯಾಗಿದ್ದು,ಇವರನ್ನು ಬಂಧಿಸಿದ ಪೋಲೀಸರು 32,34 KE act1965 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಸುಧಾಕರ್ ಅವರು ಮಂಚಿಕಟ್ಟೆ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಗದಿತ ಬೆಲೆಗಿಂತ ಹೆಚ್ಚುವರಿಯಾಗಿ ಪಡೆದುಕೊಂಡು ಮಾರಾಟ ಮಾಡುತ್ತಿರುವ ಆರೋಪ ಬಂದಿದ್ದು, ಇವರ ಬಳಿಯಿಂದ 1480 ರೂ ಮೌಲ್ಯದ ವಿವಿಧ ಕಂಪೆನಿಯ ಮಧ್ಯದ ಬಾಟಲಿಯನ್ನು ವಶಪಡಿಸಿಕೊಂಡಿದ್ದಾರೆ. 80 ರೂ ಮುಖಬೆಲೆಯ 320 ರೂ ಮೌಲ್ಯದ ಅಮೃತ್ ಪ್ರೆಸ್ಟಿಜ್ ವಿಸ್ಕಿ 180 ML ನ ಪ್ಲಾಸ್ಟಿಕ್ 4 ಬಾಟಲಿ, 40 ರೂ ಮುಖಬೆಲೆಯ 160 ರೂ ಮೌಲ್ಯದ ಅಮೃತ್ ಪ್ರೆಸ್ಟಿಜ್ ವಿಸ್ಕಿ ಎಂದು ಬರೆದಿರುವ 90 ML ನ 4 ಸ್ಯಾಚೆಟ್, 40 ರೂ ಮುಖಬೆಲೆಯ 560 ರೂ ಮೌಲ್ಯದ Original Choice Deluxe whisky ಎಂದು ಬರೆದಿರುವ 90 ML ನ 14 ಸ್ಯಾಚೆಟ್, 40 ರೂ ಮುಖಬೆಲೆಯ 440 ರೂ ಮೌಲ್ಯದ Mysore Lancer Whisky ಎಂದು ಬರೆದಿರುವ 90 ML ನ 11 ಸ್ಯಾಚೆಟ್ ಹಾಗೂ ಗಿರಾಕಿಗಳಿಗೆ ಮದ್ಯ ಮಾರಾಟ ಮಾಡಿ ಬಂದ ರೂ. 350 ಹಣವನ್ನು ಪೋಲೀಸರು ವಶಪಡಿಸಿಕೊಂಡಿದ್ಧಾರೆ.
ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ…
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…