ಜನ ಮನದ ನಾಡಿ ಮಿಡಿತ

Advertisement

ಪಾರ್ಕಿಂಗ್ ಮಾಡಿ ಕೆಲಸಕ್ಕೆ ಹೋಗಿದ್ದ ವ್ಯಕ್ತಿಯೋರ್ವರ ದ್ವಿಚಕ್ರವಾಹನವೊಂದು ಕಳವು

ಬಂಟ್ವಾಳ: ಪಾರ್ಕಿಂಗ್ ಮಾಡಿ ಕೆಲಸಕ್ಕೆ ಹೋಗಿದ್ದ ವ್ಯಕ್ತಿಯೋರ್ವರ ದ್ವಿಚಕ್ರವಾಹನವೊಂದು ಕಳವಾದ ಘಟನೆ ಬಿ.ಸಿ.ರೋಡಿನ ನಗರ ಪೋಲೀಸ್ ಠಾಣಾ ಸಮೀಪವೇ ನಡೆದಿದೆ.


ವಾಮದಪದವು ಇರ್ವತ್ತೂರು ಮಣ್ಣೂರು ನಿವಾಸಿ ಕಾರ್ತಿಕ್ ಎಂಬವರಿಗೆ ಸೇರಿದ ಸ್ಕೂಟರ್ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ತಿಕ್ ಅವರು ಮಾ. 23 ರಂದು ಶನಿವಾರ ಬೆಳಿಗ್ಗೆ ವಾಮದಪದವು ಮನೆಯಿಂದ ಬಂದು ಬಿಸಿರೋಡಿನ ಹಳೆಯ ತಾಲೂಕು ಪಂಚಾಯತ್ ಕಟ್ಟಡ ಕೆಡವಿದ ಖಾಲಿ ಜಾಗದಲ್ಲಿ ಸ್ಕೂಟರ್ ನಿಲ್ಲಿಸಿ , ಬಡಕಬೈಲು ಎಂಬಲ್ಲಿ ಕೆಲಸದ ನಿಮಿತ್ತ ಹೋಗಿದ್ದರು.


ಕೆಲಸ ಮುಗಿಸಿ ರಾತ್ರಿ ಬಂದು ನೋಡಿದಾಗ ಸ್ಕೂಟರ್ ನಿಲ್ಲಿಸಿದ ಜಾಗದಲ್ಲಿರದೆ ಕಾಣೆಯಾಗಿದ್ದು, ಕಳವಾಗಿರುವ ಸಂಶಯವನ್ನು ವ್ಯಕ್ತಪಡಿಸಿ, ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸ್ಕೂಟರ್ ನ‌ಅಂದಾಜು‌ ಮೌಲ್ಯ 55 ಸಾವಿರ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೋಲೀಸ್ ಠಾಣೆಯ ಸನಿಹದಲ್ಲೇ ‌ಕಳವು
ಕಳೆದ ಕೆಲವು ಸಮಯಗಳಿಂದ ನಿರಂತರವಾಗಿ ವಾಹನಗಳ ಕಳವು ನಡೆಯುತ್ತಿದ್ದು, ವಾಹನ ಸವಾರರು ಪಾರ್ಕ್ ಮಾಡಿ ತೆರಳಲು ಹೆದರುತ್ತಿದ್ದಾರೆ.ಬಿಸಿರೋಡಿನ ಪ್ಲೈ ಓವರ್ ಅಡಿಭಾಗದಲ್ಲಿ ಅನೇಕ ವಾಹನಗಳು ಕಳವಾಗಿದ್ದು, ಇನ್ನೂ ಬಹುತೇಕ ವಾಹನಗಳ ಪತ್ತೆ ಕಾರ್ಯ ನಡೆಯದೆ ಕಗ್ಗಂಟಾಗಿ ಉಳಿದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅದರಲ್ಲೂ ಪೋಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ವಾಹನಗಳ ಕಳವು ನಡೆಯುವುತ್ತಿರುವುದು ಸಾರ್ವಜನಿಕ ವಲಯದಲ್ಲಿ ಒಂದಷ್ಟು ಆತಂಕ ವ್ಯಕ್ತವಾಗಿದೆ.
ನಗರ ಪ್ರದೇಶದಲ್ಲಿ ಅಲ್ಲಲ್ಲಿ ಸಿ.ಸಿ.ಕ್ಯಾಮರಾ ಅಳವಡಿಕೆಯಾಗಿದ್ದರೂ ಕೂಡ ಕ್ಯಾಮರಾದ ಕಣ್ತಪ್ಪಿಸಿ ಕಳವು ಮಾಡುವ ಕಳ್ಳರ ಕೈಚಳಕದ ಬಗ್ಗೆ ಪೋಲೀಸ್ ಇಲಾಖೆ ಸರಿಯಾದ ಕ್ರಮಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!