ಜನ ಮನದ ನಾಡಿ ಮಿಡಿತ

Advertisement

ಯಕ್ಷ ಧ್ರುವ ಕೇಂದ್ರ ಮಹಿಳಾ ಘಟಕದ ವಾರ್ಷಿಕೋತ್ಸವ


ಹಳೆಯಂಗಡಿ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಕೇಂದ್ರ ಮಹಿಳಾ ಘಟಕ ಇದರ ಸಪ್ತಮ ವಾರ್ಷಿಕೋತ್ಸವ ಹಳೆಯಂಗಡಿ ಸಮೀಪದ ಶ್ರೀ ಪಾವಂಜೆ ಕ್ಷೇತ್ರದಲ್ಲಿ ನಡೆಯಿತು.


ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ನಾರಾಯಣ ಪಾಟಾಳಿ, ಕಲಾ ಪೋಷಕರಾದ ಶಕುಂತಳಾ ರಮಾನಂದ ಭಟ್, ಸಂಧ್ಯಾ ಜಯದೇವ ಐತಾಳ್, ಪಟ್ಲ ಫೌಂಡೇಶನ್ ನ ಟ್ರಸ್ಟಿ ಸಹನಾ ರಾಜೇಶ್ ರೈ, ಜೆಸಿಐ ಸುರತ್ಕಲ್ ಘಟಕದ ಅಧ್ಯೆಕ್ಷೆ ಜ್ಯೋತಿ ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.


ಸಮಾರಂಭದಲ್ಲಿ ಶ್ರೀಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಹಳುವಳ್ಳಿ ಇದರ ನಿರ್ದೇಶಕಿ ಜ್ಯೋತಿ ಟಿ ಎನ್ ಕಳಸ, ಧೀಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇದರ ನಿರ್ದೇಶಕಿ ಪದ್ಮಾ ಕೆ ಆರ್ ಆಚಾರ್ಯ ಪುತ್ತೂರು, ಯಕ್ಷಗಾನ ತಾಳಮದ್ದಲೆ ಕಲಾವಿದೆ ರೇವತಿ ನವೀನ್ ಕುಳಾಯಿ ಇವರನ್ನು ಸನ್ಮಾನಿಸಲಾಯಿತು. ಪಟ್ಲ ಪೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು. ಮಹಿಳಾ ಕೇಂದ್ರೀಯ ಘಟಕದ ಅಧ್ಯೆಕ್ಷೆ ಪೂರ್ಣಿಮಾ ಶೆಟ್ಟಿ ಸ್ವಾಗತಿಸಿದರು. ಗೌರವಾಧ್ಯೆಕ್ಷೆ ಆರತಿ ಆಳ್ವ ವಂದಿಸಿದರು. ಸಾಯಿಸುಮ ನಾವಡ ಕಾರ್ಯಕ್ರಮ‌ ನಿರ್ವಹಿಸಿದರು. ಬಳಿಕ ಪಾವಂಜೆ ಮೇಳದಿಂದ ಧರ್ಮಸಿಂಹಾಸನ ಯಕ್ಷಗಾನ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!